ಊರ್ಮಿಳಾ ಮಾತೋಂಡ್ಕರ್ ಬಾಲ್ಯದಿಂದಲೂ ನಟನೆಯಲ್ಲಿ ಮುಂದು. 3 ವಯಸ್ಸಿನಲ್ಲಿ, ಅವರು ಚಲನಚಿತ್ರ ಜಗತ್ತಿನಲ್ಲಿ ತಮ್ಮ ಮೊದಲ ಹೆಜ್ಜೆಗಳನ್ನು ಹಾಕಿದರು. 1977ರಲ್ಲಿ ‘ಕರ್ಮ’ ಚಿತ್ರದಲ್ಲಿ ಬಾಲ ಕಲಾವಿದರಾಗಿ ಬಣ್ಣದ ಲೋಕಕ್ಕೆ ಪಾದಾರ್ಪಣೆ ಮಾಡಿದರು.
1983 ರಲ್ಲಿ ಬಿಡುಗಡೆಯಾದ 'ಮಾಸೂಮ್' ಚಿತ್ರದಿಂದ ಅವರಿಗೆ ದೊಡ್ಡ ಮನ್ನಣೆ ಸಿಕ್ಕಿತು. ಇದರಲ್ಲಿ ಅವರ ಮೇಲೆ ಚಿತ್ರೀಕರಿಸಿದ ‘ಲಕ್ಡಿ ಕಿ ಕಥಿ, ಕಥಿ ಪೆ ಘೋಡಾ’ ಹಾಡು ಇಂದಿಗೂ ಫೇಮಸ್.
46ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿರುವ ನಟಿ ಮಲಯಾಳಂನ ‘ಚಾಣಕ್ಯನ್’ ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಹಿಂದಿ ಚಿತ್ರರಂಗದಲ್ಲಿ ಅವರ ಮೊದಲ ಚಿತ್ರ 1991 ರಲ್ಲಿ ಬಿಡುಗಡೆಯಾದ ನರಸಿಂಹ. ಎರಡೂ ಚಿತ್ರಗಳು ಬಾಕ್ಸ್ ಆಫೀಸ್ ನಲ್ಲಿ ಹಿಟ್ ಆಗಿದ್ದವು.
1995 ರ ರಾಮ್ ಗೋಪಾಲ್ ವರ್ಮಾ ಅವರ ರಂಗೀಲಾ ಸಿನಿಮಾದ ಮೂಲಕ ಊರ್ಮಿಳಾ ಮಾತೋಂಡ್ಕರ್ ಜನರ ಹೃದಯವನ್ನು ಆಳಲು ಪ್ರಾರಂಭಿಸಿದರು ಮತ್ತು ರಂಗೀಲಾ ಗರ್ಲ್ ಎಂದೇ ಫೇಮಸ್ ಆದರು.
ರಾಮ್ ಗೋಪಾಲ್ ವರ್ಮಾ ಊರ್ಮಿಳಾ ಮಾತೋಂಡ್ಕರ್ ಅವರನ್ನು ಹುಚ್ಚರಂತೆ ಪ್ರೀತಿಸುತ್ತಿದ್ದರು ಎಂದು ಹೇಳಲಾಗುತ್ತದೆ ಮತ್ತು ಅವರ ಜೊತೆ ಮಾತ್ರ ಸಿನಿಮಾ ಮಾಡುತ್ತಿದ್ದರು. 15 ಕೊಠಡಿಗಳಿರುವ ತನ್ನ ಕಚೇರಿಗೆ ನಟಿಯ ಹೆಸರನ್ನೇ ಇಟ್ಟಿದ್ದರು. ಆಗ ಊರ್ಮಿಳಾ ಮತ್ತು ರಾಮ್ ಗೋಪಾಲ್ ವರ್ಮಾ ಸಂಬಂಧ ಸುದ್ದಿಯಲ್ಲಿತ್ತು.
ರಾಮ್ ಗೋಪಾಲ್ ವರ್ಮಾ ಈಗಾಗಲೇ ಮದುವೆಯಾಗಿದ್ದರು. ಊರ್ಮಿಳಾ ಜೊತೆಗಿನ ಸಂಪರ್ಕದ ನಂತರ, ಅವರ ವೈವಾಹಿಕ ಜೀವನವು ಹದಗೆಡಲು ಪ್ರಾರಂಭಿಸಿತು. ಒಮ್ಮೆ ಊರ್ಮಿಳಾ ಅವರಿಗೆ ರಾಮ್ ಗೋಪಾಲ್ ವರ್ಮಾ ಅವರ ಪತ್ನಿ ಕೆನ್ನೆಗೆ ಹೊಡೆದರು ಎಂದು ಹೇಳಲಾಗುತ್ತದೆ. ಇದರಿಂದ ಕೋಪಗೊಂಡ ನಿರ್ದೇಶಕರು ಪತ್ನಿಗೆ ವಿಚ್ಛೇದನ ನೀಡಿದರು.
ಆಗ ಚಿತ್ರರಂಗದ ಹಲವು ನಿರ್ದೇಶಕರು ರಾಮಗೋಪಾಲ್ ಜೊತೆ ಮನಸ್ತಾಪ ಮಾಡಿಕೊಂಡಿದ್ದರು ಎನ್ನಲಾಗಿದೆ. ಇದರಿಂದಾಗಿ ಊರ್ಮಿಳಾ ಅವರ ಸಿನಿಮಾಗೆ ಯಾರೂ ಸಹಿ ಹಾಕಿರಲಿಲ್ಲ.ಊರ್ಮಿಳಾ ರಾಮ್ ಗೋಪಾಲ್ ವರ್ಮಾ ಜೊತೆ ಒಟ್ಟು 13 ಸಿನಿಮಾಗಳಲ್ಲಿ ಕೆಲಸ ಮಾಡಿದ್ದರು. ಕ್ರಮೇಣ ಇಬ್ಬರ ನಡುವಿನ ಅಂತರ ಹೆಚ್ಚಾಗತೊಡಗಿತು.
ರಂಗೀಲಾ ಸಿನಿಮಾಕ್ಕೆ ಮೊದಲು, ರಾಮ್‌ಗೋಪಾಲ್ ವರ್ಮಾ 1992ರ ತೆಲುಗು ಚಿತ್ರ ಆಂಥಮ್, ಶ್ರೋಹಿ 1993ರಲ್ಲಿ 'ಗಾಯಮ್' ಸಿನಿಮಾದಲ್ಲಿ ಉರ್ಮಿಳಾಗೆ ಅವಕಾಶ ನೀಡಿದರು. ಉರ್ಮಿಳಾ ಬಗ್ಗೆ RVGಗೆ ತುಂಬಾ ಹುಚ್ತಿತ್ತು. ಅವರು ತಮ್ಮ ಪ್ರತಿಯೊಂದೂ ಚಿತ್ರದಲ್ಲಿಯೂ ಊರ್ಮಿಳಾರನ್ನು ತೆಗೆದುಕೊಳ್ಳುತ್ತಿದ್ದರು.
ರಾಮ್ ಗೋಪಾಲ್ ವರ್ಮಾ ಊರ್ಮಿಳಾ ಅವರನ್ನು ಚಲನಚಿತ್ರಗಳಲ್ಲಿ ತೆಗೆದುಕೊಳ್ಳುವುದನ್ನು ನಿಲ್ಲಿಸಿದ ನಂತರ, ಉದ್ಯಮದಲ್ಲಿ ಯಾರೂ ಅವರನ್ನು ಕೆಲಸಕ್ಕಾಗಿ ಸಂಪರ್ಕಿಸಲಿಲ್ಲ. ಈ ಕಾರಣದಿಂದಾಗಿ ಯಶಸ್ವಿ ನಟಿಯ ವೃತ್ತಿಜೀವನವು ಮುಳುಗಿತು.
ಊರ್ಮಿಳಾ ಅವರ ಯಶಸ್ವಿ ಚಲನಚಿತ್ರಗಳಲ್ಲಿ ಸತ್ಯ, ಜುದಾಯಿ, ಸುಂದರ್, ಜಂಗಲ್, ಮಸ್ತ್, ಕೌನ್, ಭೂತ್, ಪ್ಯಾರ್ ತುನೆ ಕ್ಯಾ ಕಿಯಾ, ಏಕ್ ಹಸೀನಾ ಥಿ, ಪಿಂಜಾರ್ ಮತ್ತು ಮೈನೆ ಗಾಂಧಿ ಕೊ ನಹೀ ಮಾರಾ ಸೇರಿವೆ.
ಊರ್ಮಿಳಾ ಸಿನಿಮಾದಿಂದ ದೂರವಾದ ನಂತರ ಕಾಶ್ಮೀರಿ ಮಾಡೆಲ್ ಮತ್ತು ಉದ್ಯಮಿ ಮೊಹ್ಸಿನ್ ಅಖ್ತರ್ ಮಿರ್ ಅವರನ್ನು 2016 ರಲ್ಲಿ ವಿವಾಹವಾದರು. ಆಗ ಊರ್ಮಿಳಾ ಅವರಿಗೆ 42 ವರ್ಷ, ಮೊಹ್ಸಿನ್ ಅವರಿಗಿಂತ 9 ವರ್ಷ ಚಿಕ್ಕವರಾಗಿದ್ದರು. ಅವರ ಕೊನೆಯ ಬಾರಿಗೆ 2018 ರಲ್ಲಿ ಬಿಡುಗಡೆಯಾದ ಬ್ಲ್ಯಾಕ್‌ಮೇಲ್, ಸಿನಿಮಾದಲ್ಲಿ ಐಟಂ ನಂಬರ್ ಮಾಡಿದರು.
ಊರ್ಮಿಳಾ ಬಹಳ ಸಮಯದಿಂದ ಸಿನಿಮಾದಿಂದ ದೂರವಾಗಿದ್ದಾರೆ. ಅವರು ಕೊನೆಯ ಬಾರಿಗೆ 2018ರಲ್ಲಿ 'ಬ್ಲ್ಯಾಕ್ಮೇಲ್' ನಲ್ಲಿ ಐಟಂ ನಂಬರ್ 'ಬೆವಾಫಾ ಬ್ಯೂಟಿ'ಯಲ್ಲಿ ಕಾಣಿಸಿಕೊಂಡರು.
ಸಿನಿಮಾ ರಂಗದಿಂದ ದೂರವಾಗಿ ರಾಜಕೀಯಕ್ಕೆ ಕಾಲಿಟ್ಟ ಊರ್ಮಿಳಾ ಅವರು 2019ರಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ ಸೋತರು. ಆ ನಂತರ ಅವರು ಪಕ್ಷಕ್ಕೆ ರಾಜೀನಾಮೆ ನೀಡಿದ್ದರು. ಈಗ ನಟಿ ಶಿವಸೇನೆ ಪಕ್ಷಕ್ಕೆ ಸೇರಿದ್ದಾರೆ.