ರಿತೇಶ್ ದೇಶ್‌ಮುಖ್ ತಮ್ಮ ಹಾಸ್ಯ ಚಿತ್ರಗಳಿಗೆ ಹೆಸರುವಾಸಿಯಾಗಿದ್ದಾರೆ.ಅವರ ಮತ್ತು ಜೆನಿಲಿಯಾ ಅವರ ಪ್ರೇಮಕಥೆಯು ಯಾವುದೇ ಸಿನಿಮಾ ಕಥೆಗಿಂತ ಕಡಿಮೆಯಿಲ್ಲ.
ರಿತೇಶ್ ಮತ್ತು ಜೆನಿಲಿಯಾ ಅವರ ಮದುವೆ ಮತ್ತು ಡೇಟಿಂಗ್ ಗಿಂತ ಹೆಚ್ಚು ಇಂಟರೆಸ್ಟಿಂಗ್ ಅವರಿಬ್ಬರ ಮೊದಲ ಭೇಟಿಯಾಗಿದೆ. ಈ ಜೋಡಿ ಮೊದಲಿಗೆ ಹೈದರಾಬಾದ್ ವಿಮಾನ ನಿಲ್ದಾಣದಲ್ಲಿ ಭೇಟಿಯಾದರು. ರಿತೇಶ್ ಅವರ ಚೊಚ್ಚಲ ಚಿತ್ರದಲ್ಲಿ ಜೆನಿಲಿಯಾ ಕೂಡ ಪ್ರಮುಖ ಪಾತ್ರವನ್ನು ನಿರ್ವಹಿಸಿದ್ದಾರೆ.
ಹೀಗಿರುವಾಗ ರಿತೇಶ್ ಚಿತ್ರದ ಶೂಟಿಂಗ್‌ಗಾಗಿ ಹೈದರಾಬಾದ್‌ಗೆ ಆಗಮಿಸಿದಾಗ, ಸಹನಟಿ ಅವರಿಗಾಗಿ ಕಾಯುತ್ತಿದ್ದಾರೆ ಎಂದು ತಿಳಿಸಲಾಗಿತ್ತು. ಸಿಎಂ ಮಗನಾದ ರಿತೇಶ್ ವಿಮಾನ ನಿಲ್ದಾಣಕ್ಕೆ ಬಂದಾಗ ಜೆನಿಲಿಯಾ ರಿತೇಶ್ ಅವರನ್ನು ಭೇಟಿಯಾದಾಗ ಯಾವುದೇ ಆಸಕ್ತಿ ತೋರಿಸಲಿಲ್ಲ
ರಿತೇಶ್ ಜೆನಿಲಿಯಾ ಅವರ ಹ್ಯಾಂಡ್ ಶೇಕ್ ಮಾಡಿದಾಗ ಜೆನಿಲಿಯಾ ಬೇರೆ ಎಲ್ಲೋ ನೋಡುತ್ತಿದ್ದರು ಮತ್ತು ರಿತೇಶ್ ಅವರು ಮೊದಲ ಭೇಟಿಯಲ್ಲಿ ಜೆನಿಲಿಯಾರ ವರ್ತನೆಯನ್ನು ಇಷ್ಟಪಡಲಿಲ್ಲ. ಆದರೆ ಇಬ್ಬರೂ ಚಿತ್ರದ ಸೆಟ್‌ನಲ್ಲಿ ಕುಳಿತು ಶೂಟಿಂಗ್ ಆರಂಭಿಸಿದಾಗ ಅವರ ನಡುವೆಯೇ ಮಾತುಕತೆ ಶುರುವಾಯಿತು.
ಆಗ ರಿತೇಶ್ ತುಂಬಾ ಒಳ್ಳೆಯ ಹುಡುಗ ಎಂದು ಜೆನಿಲಿಯಾಗೆ ತಿಳಿಯಿತು ಮತ್ತು ಇಬ್ಬರ ನಡುವೆ ವಿಷಯ ಮುಂದುವರೆಯಿತು. ಶೂಟಿಂಗ್ ಸಮಯದಲ್ಲಿ ಒಬ್ಬರಿಗೊಬ್ಬರು ಹೆಚ್ಚು ಹೆಚ್ಚು ಸಮಯ ಕೊಡಲಾರಂಭಿಸಿದರು.
ರಿತೇಶ್ ಮತ್ತು ಜೆನಿಲಿಯಾ ಮೊದಲ ಭೇಟಿಯಾದಾಗ, ನಟನಿಗೆ 24 ವರ್ಷ ಮತ್ತು ನಟಿಗೆ 16 ವರ್ಷ. ಚಿತ್ರದ ಶೂಟಿಂಗ್ ಮುಗಿಸಿ ಇಬ್ಬರೂ ತಾರೆಯರು ತಮ್ಮ ಮನೆಗೆ ಮರಳಿದರು.. ಆದರೆ ಶೂಟಿಂಗ್ ಸಮಯದಲ್ಲಿ ಇಬ್ಬರೂ ಒಬ್ಬರಿಗೊಬ್ಬರು ತುಂಬಾ ಹತ್ತಿರವಾಗಿದ್ದರು ಮತ್ತು ಪರಸ್ಪರ ಮಿಸ್ ಮಾಡಿಕೊಳ್ಳಲು ಆರಂಭಿಸಿದರು.
ಅಲ್ಲಿಯವರೆಗೆ ಇಬ್ಬರ ನಡುವೆ ಪ್ರೀತಿ ಆರಂಭವಾಗಿದೆ ಎಂದು ಅವರ ಗಮನಕ್ಕೆ ಬಂದಿರಲಿಲ್ಲ. ನಂತರ ಸುಮಾರು 10 ವರ್ಷಗಳ ಡೇಟಿಂಗ್ ಮಾಡಿದ ರಿತೇಶ್ ಮತ್ತು ಜೆನಿಲಿಯಾ ಮದುವೆಯಾಗಲು ನಿರ್ಧರಿಸಿದರು ಮತ್ತು 2012 ರಲ್ಲಿ ಇಬ್ಬರೂ ವಿವಾಹವಾದರು. ಈಗ ರಿಯಾನ್ ಮತ್ತು ರಾಹಿಲ್ ಎಂಬ ಇಬ್ಬರು ಮಕ್ಕಳಿದ್ದಾರೆ.
ನಮ್ಮ ಮದುವೆಯ ಸಂದರ್ಭದಲ್ಲಿ ರಿತೇಶ್ ನನ್ನ ಪಾದಗಳನ್ನು ಒಂದಲ್ಲ ಎರಡಲ್ಲ 8 ಬಾರಿ ಮುಟ್ಟಿದ್ದರು. ನಾನು ಸಾಂಪ್ರದಾಯಿಕ ವಿವಾಹಗಳನ್ನು ಪ್ರೀತಿಸುತ್ತೇನೆ ಮತ್ತು ನನ್ನ ಮದುವೆಯ ಪ್ರತಿಯೊಂದು ವಿಧಿವಿಧಾನವನ್ನು ನಾನು ಸಂಪೂರ್ಣವಾಗಿ ಆನಂದಿಸಿದ್ದೇನೆ ಎಂದು ಜೆನಿಲಿಯಾ ಡಿಸೋಜಾ ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದರು.
ರಿತೇಶ್ ದೇಶಮುಖ್ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ದಿವಂಗತ ವಿಲಾಸ್ ರಾವ್ ದೇಶಮುಖ್ ಅವರ ಪುತ್ರ. ತನ್ನ ತಂದೆಯಂತೆ, ರಿತೇಶ್‌ಗೆ ರಾಜಕೀಯದಲ್ಲಿ ಆಸಕ್ತಿ ಇರಲಿಲ್ಲ ಮತ್ತು ಅವರು ಸ್ವತಃ ಚಿತ್ರರಂಗದಲ್ಲಿ ವೃತ್ತಿಜೀವನವನ್ನು ಕಂಡುಕೊಂಡರು. ರಿತೇಶ್ ಅವರು 'ಮಸ್ತಿ', 'ಹೌಸ್‌ಫುಲ್', 'ಧಮಾಲ್', 'ಏಕ್ ವಿಲನ್', 'ಮಾರ್ಜಾವಾನ್', 'ಕ್ಯಾ ಕೂಲ್ ಹೇ ಹಮ್' ಚಿತ್ರಗಳಿಗೆ ಹೆಸರುವಾಸಿಯಾಗಿದ್ದಾರೆ.