ಹೆಣ್ಣು ಮಗುವಿಗೆ ತಂದೆಯಾದ ಉದಿತ್ಯ ನಾರಾಯಣ್ ಪುತ್ರ ಅದಿತ್ಯ!

Contributor Asianet   | Asianet News
Published : Mar 06, 2022, 08:42 AM IST

ಗಾಯಕ - ನಿರೂಪಕ ಮತ್ತು ನಟ ಆದಿತ್ಯ ನಾರಾಯಣ್ (Aditya Narayan) ತಂದೆಯಾಗಿದ್ದಾರೆ. ಅವರ ಪತ್ನಿ ಶ್ವೇತಾ ಅಗರ್ವಾಲ್ (Shweta Agarwal) ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಅವರ ಮಗಳು ಫೆಬ್ರವರಿ 24 ರಂದು ಮುಂಬೈನ ಸಬರ್ಬನ್ ನರ್ಸಿಂಗ್ ಹೋಮ್‌ನಲ್ಲಿ ಜನಿಸಿದಳು.

PREV
16
ಹೆಣ್ಣು ಮಗುವಿಗೆ ತಂದೆಯಾದ ಉದಿತ್ಯ ನಾರಾಯಣ್ ಪುತ್ರ ಅದಿತ್ಯ!

'ಎಲ್ಲರೂ ನನಗೆ ಮಗ ಆಗುತ್ತಾನೆ ಎಂದು ಹೇಳುತ್ತಿದ್ದರು ಆದರೆ ನಾನು ಮಗಳ ತಂದೆಯಾಗಬೇಕೆಂದು ಬಯಸಿದ್ದೆ. ತಂದೆ ತಮ್ಮ ಹೆಣ್ಣುಮಕ್ಕಳಿಗೆ ಹತ್ತಿರವಾಗಿದ್ದಾರೆ ಎಂದು ನಾನು ನಂಬುತ್ತೇನೆ ಮತ್ತು ಪುಟ್ಟ ದೇವತೆ ನನ್ನ ಮನೆಗೆ ಬಂದಿದ್ದಕ್ಕೆ ನನಗೆ ಸಂತೋಷವಾಗಿದೆ. ಮತ್ತು ಈಗ ನಾವು ಕೂಡ ಪೋಷಕರಾಗಿದ್ದೇವೆ. ಬ್ಲೇಸ್ಡ್‌' ಎಂದು ಮಗಳು ಹುಟ್ಟಿದ ಸಂತಸವನ್ನು ವ್ಯಕ್ತಪಡಿಸುತ್ತಾ ಆದಿತ್ಯ ಹೇಳಿದರು. 

26

'ಶ್ವೇತಾಗೆ ಹೆರಿಗೆಯಾದಾಗ ನಾನು ಅವಳೊಂದಿಗೆ ಇದ್ದೆ ಮತ್ತು ಮಗುವನ್ನು ಈ ಜಗತ್ತಿಗೆ ತರಲು ಮಹಿಳೆ ಮಾತ್ರ ಅಂತಹ ಶಕ್ತಿ ಮತ್ತು ಪರಿಶ್ರಮವನ್ನು ತೋರಿಸಬಲ್ಲಳು ಎಂದು ನಾನು ಗಂಭೀರವಾಗಿ ಭಾವಿಸುತ್ತೇನೆ. ಶ್ವೇತಾಳ ಮೇಲಿನ ನನ್ನ ಪ್ರೀತಿ ಮತ್ತು ಗೌರವ ಈಗ ದುಪ್ಪಟ್ಟಾಗಿದೆ. ಹೆರಿಗೆಯಾದಾಗ ಮತ್ತು ಗರ್ಭಾವಸ್ಥೆಯಲ್ಲಿಯೂ ಸಹ ಮಹಿಳೆ ಅನೇಕ ವಿಷಯಗಳನ್ನು ಎದುರಿಸುತ್ತಾಳೆ' ಎಂಧು ತಮ್ಮ ಮಗು ಜನಿಸಿದ ಕ್ಷಣದ ಕುರಿತು ಮಾತನಾಡಿದ ಹೇಳಿದ್ದಾರೆ

36

ಆದಿತ್ಯ ನಾರಾಯಣ್ ಸಂದರ್ಶನದಲ್ಲಿ ತಂದೆಯಾಗುವ ಸಂಭ್ರಮದ ಬಗ್ಗೆಯೂ ಮಾತನಾಡಿದ್ದಾರೆ. 'ಇದು ಸಿನಿಮಾದಂತೆ ಕಾಣಿಸಬಹುದು. ನನ್ನ ಕನಸು ನನಸಾಗುತ್ತಿರುವುದಕ್ಕೆ ಖುಷಿಯಾಗಿದೆ' ಎಂದು ಆದಿತ್ಯ ಹೇಳಿದರು.

46

ನಾನು ಮಗಳನ್ನು ಸ್ವಾಗತಿಸಲು ಬಯಸುತ್ತೇನೆ, ಏಕೆಂದರೆ ತಂದೆ ತಮ್ಮ ಹೆಣ್ಣುಮಕ್ಕಳಿಗೆ ಹತ್ತಿರವಾಗಿರುತ್ತಾರೆ. ನನ್ನ ತಂದೆ ತಾಯಿ ಇಬ್ಬರೂ ಶೀಘ್ರದಲ್ಲೇ ಅಜ್ಜಿಯಾಗುತ್ತಾರೆ ಎಂದು ಉತ್ಸುಕರಾಗಿದ್ದಾರೆ ಎಂಬ ವಿಷಯವನ್ನು ಈ ಹಿಂದೆ ಅದಿತ್ಯ ಹೇಳಿದ್ದರು

56

ಆದಿತ್ಯ ಮತ್ತು ಶ್ವೇತಾ 2010 ರಲ್ಲಿ ಶಪಿತ್ ಚಿತ್ರದ ಸೆಟ್‌ನಲ್ಲಿ ಮೊದಲ ಭೇಟಿಯಾದರು. ನಂತರ ಇಬ್ಬರು ಸ್ನೇಹಿತರಾದರು ಮತ್ತು ಪರಸ್ಪರ ಡೇಟಿಂಗ್ ಮಾಡಲು ಪ್ರಾರಂಭಿಸಿದರು. ಸುಮಾರು 10 ವರ್ಷಗಳ ಕಾಲ ಸಂಬಂಧದಲ್ಲಿದ್ದ ನಂತರ, ಅವರು 1 ಡಿಸೆಂಬರ್ 2020 ರಂದು ವಿವಾಹವಾದರು. 

66

ಆದಿತ್ಯ ಅವರು ಬಾಲ ಕಲಾವಿದರಾಗಿ ಕೆಲವು ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಹಾಗೇ ತಂದೆ ಉದಿತ್‌ ನಾರಾಯಣ್‌ರಂತೆ ಮಗ ಕೂಡ ಒಳ್ಳೆಯ ಗಾಯಕರೂ ಹೌದು. ಆದಿತ್ಯ ಟಿವಿಯ ಹಲವು ರಿಯಾಲಿಟಿ ಶೋಗಳನ್ನು ನಡೆಸಿಕೊಟ್ಟಿದ್ದಾರೆ.
 

Read more Photos on
click me!

Recommended Stories