ದೀಪಿಕಾ ಪಡುಕೋಣೆ ಹೊಸ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ತನ್ನ ಚಿಕ್ಕ ಕೂದಲಿನಿಂದ ಎಲ್ಲರಿಗೂ ಸರ್‌ಪ್ರೈಸ್ ನೀಡಿದ್ದಾರೆ. ಅವರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. ನಟಿ ಹೇರ್ ಸ್ಟೈಲಿಸ್ಟ್ ಕ್ಲಾರಾಬೆಲ್ಲೆ ಸಲ್ಡಾನಾ ಅವರಿಂದ ಕೂದಲಿನ ಮೇಕ್ ಓವರ್ ಮಾಡಿಸಿಕೊಂಡರು. ಅವರ ಹೊಸ ನೋಟವನ್ನು ಅಭಿಮಾನಿಗಳು ತುಂಬಾ ಇಷ್ಟಪಡುತ್ತಾರೆ.
ಅನುಷ್ಕಾ ಶರ್ಮಾ ಕೂಡ ಕೂದಲನ್ನು ಚಿಕ್ಕದಾಗಿ ಇಟ್ಟುಕೊಂಡಿದ್ದಾರೆ. ಶಾರ್ಟ್ ಹೇರ್ ಕಟ್ ಅವರಿಗೆ ತುಂಬಾ ಚೆನ್ನಾಗಿ ಕಾಣುತ್ತದೆ. ಗರ್ಭಾವಸ್ಥೆಯಲ್ಲಿ ಆಕೆಗೆ ಸಾಕಷ್ಟು ಕೂದಲು ಉದುರುತ್ತಿತ್ತು. ಇದರಿಂದಾಗಿ ಅವರು ತಮ್ಮ ಕೂದಲನ್ನು ಚಿಕ್ಕದಾಗಿ ಕತ್ತರಿಸಿಕೊಂಡರು.
ಮಂದಿರಾ ಬೇಡಿ ಕಳೆದ ಹಲವು ವರ್ಷಗಳಿಂದ ಬಾಬ್ ಕಟ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಆಕೆಯ ಈ ಹೇರ್ ಕಟ್ ವೆಸ್ಟ್ರನ್ ಜೊತಗೆ ಎಥ್ನಿಕ್ ಔಟ್‌ಫಿಟ್‌ಗಳಿಗೆ ಸಹ ಹೊಂದುತ್ತದೆ. ದೇಸಿ ಡ್ರೆಸ್‌ಗಳ ಜೊತೆ ಶಾರ್ಟ್ ಹೇರ್ ಹೇಗೆ ಕ್ಯಾರಿ ಮಾಡಬಹುದು ಎಂಬುದಕ್ಕೆ ಮಂದಿರಾ ಅವರ ಈ ಹೇರ್ ಸ್ಟೈಲ್ ಸಾಕ್ಷಿಯಾಗಿದೆ.
ನೇಹಾ ಧೂಪಿಯಾ ಇಬ್ಬರು ಮಕ್ಕಳ ತಾಯಿ. ಅವರು ಕೂದಲನ್ನು ಕೂಡ ಚಿಕ್ಕದಾಗಿ ಇಟ್ಟುಕೊಂಡಿದ್ದಾರೆ. ಅವರು ತಮ್ಮ ಲುಕ್ ಬಗ್ಗೆ ಯಾರ ಮಾತಿಗೂ ಮಣಿಯುವುದ್ದಿಲ್ಲ. ಅವರು ಕೆಲವು ಬಾರಿ ಬಿಳಿ ಕೂದಲಿನಲ್ಲೂ ಕಾಣಿಸಿಕೊಳ್ಳುತ್ತಾರೆ. ನಾನು ನನಗಾಗಿ ಇರುವುದು. ಯಾರ ಒತ್ತಾಯಕ್ಕೂ ಅಲ್ಲ. ನನಗೆ ಬೇಕಾದಾಗ ಕೂದಲಿಗೆ ಬಣ್ಣ ಹಚ್ಚುತ್ತೇನೆ ಎನ್ನುತ್ತಾರೆ ನೇಹಾ .
ಸುಶ್ಮಿತಾ ಸೇನ್ ಉದ್ದನೆಯ ಕೂದಲಿಗೆ ಹೆಸರುವಾಸಿಯಾಗಿದ್ದಾರೆ. ಆದರೆ ಕೆವು ದಿನಗಳ ಹಿಂದೆ ಅವರು ಚಿಕ್ಕ ಕೂದಲಿನಲ್ಲಿ ಕಾಣಿಸಿಕೊಂಡಾಗ, ಅದರಲ್ಲಿಯೂ ಅವರು ತುಂಬಾ ಸುಂದರವಾಗಿ ಕಾಣುತ್ತಾರೆ ಎಂದು ಫ್ಯಾನ್ಸ್ ಅಭಿಪ್ರಾಯ ಪಟ್ಟಿದ್ದಾರೆ. ಇತ್ತೀಚೆಗಷ್ಟೇ ಸುಶ್ಮಿತಾ ಅವರು ದೊಡ್ಡ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು, ಅದಕ್ಕಾಗಿ ಅವರು ತಮ್ಮ ಕೂದಲನ್ನು ಚಿಕ್ಕದಾಗಿ ಕತ್ತರಿಸಿದ್ದರು.
ಕ್ಯಾನ್ಸರ್ ಚಿಕಿತ್ಸೆ ವೇಳೆ ಸೋನಾಲಿ ಬೇಂದ್ರೆ ತಮ್ಮ ಕೂದಲನ್ನು ಕಳೆದುಕೊಂಡಿದ್ದರು. ಆದರೆ ಅವಳು ಚೇತರಿಸಿಕೊಂಡ ನಂತರ, ಅವರು ಶಾರ್ಟ್ ಹೇರ್‌ಸ್ಟೈಲ್ ಹೊಂದಿದ್ದಾರೆ. ಉದ್ದ ಕೂದಲಿನಲ್ಲಿ ಮನಮೋಹಕವಾಗಿ ಕಾಣುತ್ತಿದ್ದ ಸೋನಾಲಿ ಅವರಿಗೆ ಹೊಸ ಹೇರ್ ಕಟ್ ಸಹ ತುಂಬಾ ಚೆನ್ನಾಗಿ ಸೂಟ್ ಆಗಿತ್ತದೆ.
ಹಿನಾ ಖಾನ್ ಈಗ ಟಿವಿ ತೊರೆದು ಬಾಲಿವುಡ್‌ಗೆ ಪ್ರಯಾಣ ಬೆಳೆಸುತ್ತಿದ್ದಾರೆ. ತಮ್ಮ ಉದ್ದನೆಯ ಕೂದಲನ್ನು ಕೂಡ ಮೊಟಕುಗೊಳಿಸಿದ್ದಾರೆ. ಹಿನಾ ಖಾನ್ ಅವರು ಶಾರ್ಟ್ ಹೇರ್‌ಸ್ಟೈಲಿನಲ್ಲಿ ಸಹ ಆಕರ್ಷಕವಾಗಿ ಕಾಣುತ್ತಾರೆ.