ಕಪಿಲ್ ಶರ್ಮಾ ಜೊತೆ ಟಿಪ್ ಬರ್ಸಾ ಪಾನಿ ಹಾಡಿಗೆ ಹೆಜ್ಜೆ ಹಾಕಿದ ರವೀನಾ ಟಂಡನ್!

Contributor Asianet   | Asianet News
Published : Mar 05, 2022, 06:18 PM IST

ರವೀನಾ ಟಂಡನ್  (Raveena Tandon)ಅವರ ಮೊಹ್ರಾ (Mohra)  ಚಿತ್ರದ ಪ್ರಸಿದ್ಧ ಹಾಡು ಟಿಪ್ ಟಿಪ್ ಬರ್ಸಾ ಪಾನಿ (Tip Tip Barsa Pani) ಇಂದಿಗೂ ಅಷ್ಟೇ ಜನಪ್ರಿಯವಾಗಿದೆ. ಈ ಹಾಡಿನಲ್ಲಿ ಅವಕಾಶ ಸಿಕ್ಕಾಗಲೆಲ್ಲಾ ಜನರು ಹೆಜ್ಜೆ ಹಾಕುವುದನ್ನು ತಪ್ಪಿಸುವುದಿಲ್ಲ. ರವೀನಾ ಟಂಡನ್ ಸ್ವತಃ ಕಪಿಲ್ ಶರ್ಮಾ ಅವರ ಕಾರ್ಯಕ್ರಮಕ್ಕೆ ಆಗಮಿಸಿದಾಗ ಇದೇ ರೀತಿಯ ಘಟನೆ ಸಂಭವಿಸಿದೆ.

PREV
16
ಕಪಿಲ್ ಶರ್ಮಾ ಜೊತೆ ಟಿಪ್ ಬರ್ಸಾ ಪಾನಿ ಹಾಡಿಗೆ ಹೆಜ್ಜೆ ಹಾಕಿದ ರವೀನಾ ಟಂಡನ್!

 ವಾಸ್ತವವಾಗಿ, ರವೀನಾ ಟಂಡನ್ ಮತ್ತು ಫರಾ ಖಾನ್ ಇತ್ತೀಚೆಗೆ ಕಪಿಲ್ ಶರ್ಮಾ ಶೋನಲ್ಲಿ ಕಾಣಿಸಿಕೊಂಡರು. ಈ ಸಮಯದ ವೀಡಿಯೊ  ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ, ಇದರಲ್ಲಿ ಕಾಮಿಡಿನ್‌ ಕಪಿಲ್ ಶರ್ಮಾ ಮತ್ತು ಫರಾ ಖಾನ್ ರವೀನಾ ಟಂಡನ್ ಅವರ ಸೂಪರ್‌ಟ್ ಹಾಡು ಟಿಪ್-ಟಿಪ್ ಬರ್ಸಾ ಪಾನಿಗೆ ನೃತ್ಯ ಮಾಡುತ್ತಿದ್ದಾರೆ.

26

ಫರಾ ಮತ್ತು ಕಪಿಲ್ ಶರ್ಮಾ ಡ್ಯಾನ್ಸ್ ಮಾಡುವುದನ್ನು ನೋಡಿದ ರವೀನಾ ಟಂಡನ್ ಕೂಡ ಮಧ್ಯದಲ್ಲಿ ಬಂದು ಡ್ಯಾನ್ಸ್ ಮಾಡಲು ಪ್ರಾರಂಭಿಸುತ್ತಾರೆ. ರವೀನಾ ಟಂಡನ್ ಅವರ ನೃತ್ಯವನ್ನು ನೋಡಿದ ಅಭಿಮಾನಿಗಳು ಸಾಕಷ್ಟು ಸಂಖ್ಯೆಯಲ್ಲಿ ಕಾಮೆಂಟ್  

36

ರವೀನಾಳನ್ನು ಯಾರೂ ಬದಲಾಯಿಸಲು ಸಾಧ್ಯವಿಲ್ಲ ಎಂದು ಒಬ್ಬ ವ್ಯಕ್ತಿ ಹೇಳಿದರು. ಇಂದಿಗೂ ಅದೇ ರೀತಿಯಲ್ಲಿ ಯಂಗ್ ಮತ್ತು ಎನರ್ಜಿಟಿಕ್ ಎಂದು ಮತ್ತೊಬ್ಬರು ಹೇಳಿದರು. ಕಪಿಲ್ ಶೋನಲ್ಲಿ ರವೀನಾ ಟಂಡನ್ ಪಿಂಕ್ ಕಲರ್ ಡ್ರೆಸ್‌ನಲ್ಲಿ ತುಂಬಾ ಸುಂದರವಾಗಿ ಕಾಣುತ್ತಿದ್ದರು.

46

ಈ ಹಿಂದೆ ಅಕ್ಷಯ್ ಕುಮಾರ್ ಮತ್ತು ಕತ್ರಿನಾ ಕೈಫ್ ಅಭಿನಯದ 'ಸೂರ್ಯವಂಶಿ' ಚಿತ್ರದಲ್ಲಿ ಟಿಪ್ ಟಿಪ್ ಬರ್ಸಾ ಪಾನಿ ಹಾಡನ್ನು ಮರುಸೃಷ್ಟಿಸಲಾಗಿತ್ತು. ಸೂರ್ಯವಂಶಿಯಲ್ಲಿ, ಕತ್ರಿನಾ ಕೈಫ್ ಕೂಡ ರವೀನಾರಂತೆ  ಹೆಜ್ಜೆಗಳನ್ನು ಹಾಕಲು ಪ್ರಯತ್ನಿಸಿದರು, ಆದರೆ   90 ರ ದಶಕದ ರವೀನಾ ಟಂಡನ್‌ನಂತೆ ಮ್ಯಾಜಿಕ್ ರಚಿಸಲು ಕತ್ರಿನಾ ಕೈಫ್‌ಗೆ ಸಾಧ್ಯವಾಗಲಿಲ್ಲ.

56

ಮೊಹ್ರಾ ಚಿತ್ರದ ಹಾಡನ್ನು ವರ್ಸೋವಾದಲ್ಲಿ ನಿರ್ಮಾಣ ಹಂತದಲ್ಲಿರುವ ಕಟ್ಟಡದಲ್ಲಿ ಚಿತ್ರೀಕರಿಸಲಾಗಿದೆ ಭಾರೀ ಮಳೆ ಮತ್ತು ಗಾಳಿಯ  ಜೊತೆಯ ರವೀನಾ ಟಂಡನ್ ಮತ್ತು ಅಕ್ಷಯ್ ಕುಮಾರ್ ಅವರ ರೊಮ್ಯಾಂಟಿಕ್ ಶೈಲಿಯನ್ನು ಜನರು ಸಖತ್‌ ಇಷ್ಟಪಟ್ಟಿದ್ದಾರೆ. ಅದೇ ಸಮಯದಲ್ಲಿ, ಸೂರ್ಯವಂಶಿ ಹಾಡನ್ನು ಜಾತ್ರೆಯ ಸ್ಥಳದಲ್ಲಿ ಚಿತ್ರೀಕರಿಸಲಾಗಿದೆ. ಅಲ್ಲಿ ರೊಮ್ಯಾಂಟಿಕ್ ಫೀಲ್ ಇಲ್ಲ.

 

66

ಇದಕ್ಕೂ ಮುನ್ನ ರವೀನಾ ಟಂಡನ್ ಟಿಪ್ ಟಿಪ್ ಬರ್ಸಾ ಪಾನಿ ಟ್ಯೂನ್‌ಗೆ ಪ್ರಭಾಸ್ ಜೊತೆ ಡ್ಯಾನ್ಸ್ ಮಾಡಿದ್ದರು. ವಾಸ್ತವವಾಗಿ, ಪ್ರಭಾಸ್ ತಮ್ಮ ಸಾಹೋ ಚಿತ್ರದ ಪ್ರಚಾರಕ್ಕಾಗಿ ನೃತ್ಯ ರಿಯಾಲಿಟಿ ಶೋ 'ನಾಚ್ ಬಲಿಯೆ' ಸೀಸನ್ 9 ನಲ್ಲಿ ಕಾಣಿಸಿಕೊಂಡಿದ್ದರು. ಇಲ್ಲಿ ಅವರು ಕಾರ್ಯಕ್ರಮದ ತೀರ್ಪುಗಾರರಾದ ರವೀನಾ ಟಂಡನ್ ಅವರೊಂದಿಗೆಈ ಹಾಡಿಗೆ ಸ್ಟೆಪ್ಸ್‌ ಹಾಕಿದ್ದರು.

Read more Photos on
click me!

Recommended Stories