ನೋಡೋಕೆ ಕೋಲಿನಂತಿರುವೆ, ಶಾರೂಕ್‌ ಖಾನ್‌ ಗೇಲಿ ಮಾಡಿದ್ದ ಬಾಲಿವುಡ್‌ ಖ್ಯಾತ ನಟಿ!

First Published | Sep 24, 2023, 12:25 PM IST

ಶಾರುಖ್ ಖಾನ್‌ರನ್ನು ಕಿಂಗ್ ಆಫ್ ರೋಮ್ಯಾನ್ಸ್ ಎಂದು ಕರೆಯಲಾಗುತ್ತದೆ. ಆದರೆ ತಮ್ಮ ವೃತ್ತಿಜೀವನದಲ್ಲಿ ದೈಹಿಕ ನೋಟಕ್ಕಾಗಿ ಶಾರೂಕ್ ನಟಿಯೊಬ್ಬರಿಂದ ಅಪಹಾಸ್ಯಕ್ಕೊಳಗಾಗಿದ್ದರು ಎಂಬುದು ನಿಮಗೆ ತಿಳಿದಿದ್ಯಾ.ಬಾಲಿವುಡ್‌ನ ಖ್ಯಾತ ನಟಿ ಶಾರೂಕ್‌ ಬಗ್ಗೆ ವ್ಯಂಗ್ಯವಾಡಿದ್ದರು. ಆ ನಂತರ ಆಕೆ ಕಿಂಗ್ ಖಾನ್‌ ಜೊತೆ ನಟಿಸಿದ ಎಂಟು ಸಿನಿಮಾಗಳು ಸೂಪರ್‌ಹಿಟ್ ಆಯಿತು.

ಶಾರೂಕ್‌ ಖಾನ್‌, ಬಾಲಿವುಡ್‌ನ ಟಾಪ್ ಹೀರೋ. ಕಿಂಗ್‌ ಖಾನ್‌, ಬಾದ್ ಶಾ ಎಂದೆಲ್ಲಾ ಕರೆಸಿಕೊಳ್ಳೋ ನಟ. ಪಠಾಣ್‌, ಜವಾನ್ ಸಿನಿಮಾದ ಸಕ್ಸಸ್‌ನ ನಂತರ ಶಾರೂಕ್‌ ಖಾನ್‌ ಒಂದೇ ವರ್ಷದಲ್ಲಿ ಎರಡು 1000 ಕೋಟಿ ಚಲನಚಿತ್ರಗಳನ್ನು ನೀಡಿದ ಏಕೈಕ ಭಾರತೀಯ ನಟ ಎಂದು ಗುರುತಿಸಿಕೊಂಡಿದ್ದಾರೆ.

ಪಠಾಣ್ 1050 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದ್ದರೆ, ಜವಾನ್ ಶೀಘ್ರದಲ್ಲೇ ಪಠಾಣ್ ದಾಖಲೆಯನ್ನು ಮುರಿಯಲಿದೆ, ಜವಾನ್‌ ಇಲ್ಲಿಯವರೆಗೆ 937 ಕೋಟಿ ರೂಪಾಯಿ ಕಲೆಕ್ಷನ್ ಮಾಡಿ ಮುನ್ನುಗ್ಗುತ್ತಿದೆ. ದೇಶ-ವಿದೇಶಗಳಲ್ಲಿ ಕಿಂಗ್ ಖಾನ್‌ ನಟನೆಗೆ ಭಾರೀ ಪ್ರಶಂಸೆ ವ್ಯಕ್ತವಾಗ್ತಿದೆ.

Tap to resize

ಶಾರುಖ್ ಖಾನ್ ಅವರನ್ನು ಕಿಂಗ್ ಆಫ್ ರೋಮ್ಯಾನ್ಸ್ ಎಂದು ಕರೆಯಲಾಗುತ್ತದೆ. ಆದರೆ ತಮ್ಮ ವೃತ್ತಿಜೀವನದಲ್ಲಿ ದೈಹಿಕ ನೋಟಕ್ಕಾಗಿ ಶಾರೂಕ್ ನಟಿಯೊಬ್ಬರಿಂದ ಅಪಹಾಸ್ಯಕ್ಕೊಳಗಾಗಿದ್ದರು ಎಂಬುದು ನಿಮಗೆ ತಿಳಿದಿದ್ಯಾ. ಹಳೆಯ ಸಂದರ್ಶನವೊಂದರಲ್ಲಿ, ಅವರ ಸಹ ನಟರೊಬ್ಬರು ಈ ವಿಚಾರವನ್ನು ಬಹಿರಂಗಪಡಿಸಿದ್ದರು. 

ಉದ್ದನೆಯ ಕೂದಲು ಮತ್ತು ತೆಳ್ಳಗಿನ ದೇಹಕ್ಕಾಗಿ ನಟಿಯೊಬ್ಬರು ಶಾರೂಕ್‌ನ್ನು ಅಪಹಾಸ್ಯ ಮಾಡಿದರು. 1992ರಲ್ಲಿ, ಶಾರುಖ್ ಖಾನ್ ರಾಜು ಬನ್ ಗಯಾ ಜೆಂಟಲ್‌ಮ್ಯಾನ್ ಸಿನಿಮಾ ಮಾಡಿದರು.

ಚಿತ್ರದಲ್ಲಿ ಅವರು ಜೂಹಿ ಚಾವ್ಲಾ ಅವರೊಂದಿಗೆ ಜೋಡಿಯಾದರು. ಆದರೆ ಇದಕ್ಕೂ ಮೊದಲು ಈ ಚಿತ್ರದಲ್ಲಿ ನಟಿಸಲು ಚಿತ್ರದ ಸಹ-ನಿರ್ಮಾಪಕ ವಿವೇಕ್ ವಾಸ್ವಾನಿ, ಜೂಹಿ ಚಾವ್ಲಾ ಮನವೊಲಿಸಬೇಕಾಯಿತು.

ವಿವೇಕ್ ವಾಸ್ವಾನಿ, ಜೂಹಿಯನ್ನು ಚಿತ್ರಕ್ಕೆ ಸಹಿ ಹಾಕುವಂತೆ ಮನವೊಲಿಸಲು ಶಾರುಖ್ ಖಾನ್, ಅಮೀರ್ ಖಾನ್‌ನಂತೆ ಕಾಣುತ್ತಾರೆ ಎಂದು ಹೇಳಿದರು. ಜೂಹಿ ತನ್ನ ಮೊದಲ ದಿನ ಸೆಟ್‌ಗೆ ಬಂದಾಗ, 'ಹೀರೋ ಅಮೀರ್‌ ಖಾನ್‌ರಂತೆ ಇರುತ್ತಾರೆ ಎಂದು ನಿರ್ದೇಶಕರು ನನಗೆ ಹೇಳಿದ್ದರು. ಆದರೆ ಹುಡುಗ ಅಲ್ಲಿ ಉದ್ದನೆಯ, ತೆಳ್ಳಗಿನ ಹುಡುಗ ನಿಂತಿದ್ದ' ಎಂದು ಜೂಹಿ ಚಾವ್ಲಾ ಹೇಳಿದ್ದರು. 

ರಾಜು ಬನ್ ಗಯಾ ಜೆಂಟಲ್‌ಮ್ಯಾನ್, ಡರ್, ಒನ್ 2 ಕಾ 4, ಯೆಸ್ ಬಾಸ್, ರಾಮ್ ಜಾನೆ, ಡುಪ್ಲಿಕೇಟ್, ಫಿರ್ ಭಿ ದಿಲ್ ಹೈ ಹಿಂದೂಸ್ತಾನಿ ಮತ್ತು ಭೂತನಾಥ್ ಸೇರಿದಂತೆ ಶಾರುಖ್ ಖಾನ್ ಮತ್ತು ಜೂಹಿ ಒಟ್ಟಿಗೆ ಎಂಟು ಚಲನಚಿತ್ರಗಳನ್ನು ಮಾಡಿದ್ದಾರೆ.

ಜೂಹಿ ಡ್ರೀಮ್ಜ್ ಫಿಲ್ಮ್ಸ್ ಅನ್ಲಿಮಿಟೆಡ್, ಮತ್ತು IPL ತಂಡ ಕೋಲ್ಕತ್ತಾ ನೈಟ್ ರೈಡರ್ಸ್ ಎಂಬ ನಿರ್ಮಾಣ ಕಂಪನಿಯನ್ನು ಸಹ-ಮಾಲೀಕತ್ವವನ್ನು ಸಹ ಹೊಂದಿದ್ದಾರೆ.

Latest Videos

click me!