ಕನ್ನಡದ ಈ ನಟಿಗೆ ಹಿಗ್ಗಾಮುಗ್ಗಾ ಬೈದು, ಬೆದರಿಕೆ ಹಾಕಿದ್ರಂತೆ ಸೂಪರ್‌ಸ್ಟಾರ್‌ ರಜನಿಕಾಂತ್‌!

Published : Sep 23, 2023, 03:31 PM ISTUpdated : Sep 23, 2023, 03:47 PM IST

ರಜನೀಕಾಂತ್ ಸೂಪರ್‌ ಸ್ಟಾರ್‌ ಆಗಿದ್ದರೂ ಸರಳತೆ, ನಯ-ವಿನಯದಿಂದಲೇ ಎಲ್ಲರ ಮನಗೆಲ್ಲುವ ನಟ. ಇತ್ತೀಚಿಗೆ ತಾವು ಕೆಲಸ ಮಾಡುವ ಬಸ್ ಡಿಪೋಗೆ ಭೇಟಿ ನೀಡಿದ್ದರು. ಇಂಥಾ ನಟರೊಬ್ಬರು ಕನ್ನಡ ಚಿತ್ರದಲ್ಲಿ ಅಭಿನಯಿಸಿದ ಈ ನಟಿಗೆ ಹಿಗ್ಗಾಮುಗ್ಗಾ ಬೈದಿದ್ದರು ಅನ್ನೋದು ನಿಮ್ಗೆ ಗೊತ್ತಿದ್ಯಾ?

PREV
110
ಕನ್ನಡದ ಈ ನಟಿಗೆ ಹಿಗ್ಗಾಮುಗ್ಗಾ ಬೈದು, ಬೆದರಿಕೆ ಹಾಕಿದ್ರಂತೆ ಸೂಪರ್‌ಸ್ಟಾರ್‌ ರಜನಿಕಾಂತ್‌!

ಕಿಚ್ಚ ಸುದೀಪ್‌ ಅಭಿನಯದ ಹೆಬ್ಬುಲಿ ನಟಿ ಅಮಲಾ ಪೌಲ್‌ ಎಲ್ಲರಿಗೂ ಚಿರಪರಿಚಿತರ ಹೆಸರು. ತಮಿಳು, ಮಲಯಾಳಂ, ತೆಲುಗು ಭಾಷೆಗಳಲ್ಲಿ ಹಲವು ಸೂಪರ್ ಹಿಟ್ ಸಿನಿಮಾಗಳನ್ನು ಮಾಡಿದ್ದಾರೆ. ಆಗಾಗ ಸಖತ್ ಬೋಲ್ಡ್ ಆಗಿ ಫೋಟೋಶೂಟ್ ಸಹ ಮಾಡಿಸಿಕೊಳ್ಳುತ್ತಿರುತ್ತಾರೆ.

210

ಮಾತ್ರವಲ್ಲ, ನಮ್ಮ ದೇಶದಲ್ಲಿ ಸಿನಿಮಾದಲ್ಲಿ ಬೆತ್ತಲೆಯಾಗಿ ನಟಿಸಿದ ಕೆಲವೇ ಕೆಲವು ನಟಿಯರ ಪೈಕಿ ಅಮಲಾ ಪೌಲ್‌ ಕೂಡ ಒಬ್ಬರಾಗಿದ್ದಾರೆ. ಅಡೈ ಚಿತ್ರದಲ್ಲಿ ಅಮಲಾ ಬೆತ್ತಲೆಯಾಗಿ ನಟಿಸಿದ್ದಾರೆ. 

310

ಸಿನಿಮಾ ಜೀವನ ಮಾತ್ರವಲ್ಲದೆ ಅಮಲಾ ವೈಯುಕ್ತಿಕ ಜೀವನ ಆಗಾಗ ಸುದ್ದಿಯಾಗುತ್ತಿರುತ್ತದೆ. ಅಮಲಾ, ಚಿತ್ರರಂಗದಲ್ಲಿ ಹೆಸರು ಮಾಡುತ್ತಿರುವಾಗಲೇ ನಿರ್ದೇಶಕ ಎ.ಎಲ್​. ವಿಜಯ್​ ಅವರನ್ನು ಮದುವೆಯಾದರು. ಆ ಬಳಿಕವೂ ನಟನೆಯನ್ನು ಮುಂದುವರಿಸಿದರು. ಆದರೆ ವಿಜಯ್ ಕುಟುಂಬಕ್ಕೆ ಇದು ಇಷ್ಟವಿಲ್ಲದ ಕಾರಣ ಇಬ್ಬರ ದಾಂಪತ್ಯ ಡಿವೋರ್ಸ್‌ನಲ್ಲಿ ಕೊನೆಗೊಂಡಿತು. ಮದುವೆಯಾದ ಕೆಲವೇ ವರ್ಷಗಳಲ್ಲಿ ಅಮಲಾ ವಿಚ್ಛೇದನ ಪಡೆದುಕೊಂಡರು. 

410

ಅಮಲಾ, ಮದುವೆಯ ನಂತರವೂ ನಟನೆ ಮುಂದುವರಿಸಿದ್ದೇ ಜಗಳಕ್ಕೆ ಕಾರಣವಾಯ್ತು ಅನ್ನೋ ವಿಚಾರ ಎಲ್ಲೆಡೆ ಕೇಳಿ ಬಂತು. ಆದರೆ, ಅಮಲಾ ಮತ್ತು ಧನುಷ್ ನಡುವೆ ತೀರಾ​ ಆಪ್ತತೆ ಇದ್ದಿದ್ದೇ ಡಿವೋರ್ಸ್​ಗೆ ಕಾರಣ ಎಂಬ ಸುದ್ದಿ ಸಹ ಭಾರೀ ಚರ್ಚೆಯಾಯಿತು.

510

'ವೇಲೆಯಿಲ್ಲ ಪಟ್ಟದಾರಿ' ಸಿನಿಮಾದಲ್ಲಿ ಅಮಲಾ-ಧನುಷ್​ ಒಟ್ಟಿಗೆ ನಟಿನೆ ಮಾಡಿದ್ದರು. ಈ ಸಿನಿಮಾದಿಂದಲೇ ಇಬ್ಬರು ಆಪ್ತರಾಗಿದ್ದು, ಮದುವೆಯಾಚೆಗಿನ ಸಂಬಂಧಕ್ಕೂ ಕಾರಣವಾಯ್ತು ಎಂಬ ಮಾತು ಕೇಳಿ ಬಂದಿತ್ತು.

610

ಮಾತ್ರವಲ್ಲ, ಇತ್ತೀಚೆಗಷ್ಟೇ ಕಾಲಿವುಡ್​ನ ಖ್ಯಾತ ಪತ್ರಕರ್ತ ಮತ್ತು ಸಿನಿಮಾ ವಿಮರ್ಶಕ ಸೆಯ್ಯಾರು ಬಾಲು ಅವರು ಸಂದರ್ಶನವೊಂದರಲ್ಲಿ, ಅಮಲಾಗೆ ಸೂಪರ್​ಸ್ಟಾರ್​ ರಜಿನಿಕಾಂತ್​ ವಾರ್ನಿಂಗ್​ ಮಾಡಿದ್ದರು ಎಂಬುದನ್ನು ಬಹಿರಂಗಪಡಿಸಿದ್ದರು.
 

710

ಧನುಷ್​ ಮತ್ತು ಅಮಲಾ ನಡುವೆ ಆಪ್ತತೆ ಇರುವ ವಿಚಾರ ಧನುಷ್​ ಅವರ ಮಾವ ರಜನಿಕಾಂತ್​ಗೆ ತಿಳಿದಿತ್ತು. ಹೀಗಾಗಿ ಅಮಲಾ ಅವರ ಮನೆಗೆ ತೆರಳಿದ ರಜಿನಿಕಾಂತ್​, ಆಕೆಗೆ ವಾರ್ನಿಂಗ್​ ನೀಡಿದ್ದರು ಎಂದು ಸೆಯ್ಯಾರು ಬಾಲು ಮಾಹಿತಿ ನೀಡಿದ್ದರು.

810

'ಧನುಷ್ ಕುಟುಂಬಸ್ಥನಾಗಿದ್ದು, ಆತನಿಗೂ ಪತ್ನಿ ಮತ್ತು ಮಕ್ಕಳಿದ್ದಾರೆ. ಅತನೊಂದಿಗಿನ ಸಂಬಂಧ ಬಿಟ್ಟು ಬಿಡದಿದ್ದರೆ ನನ್ನ ಇನ್ನೊಂದು ಮುಖ ನೋಡುಬೇಕಾಗುತ್ತದೆ' ಎಂದು ರಜನೀಕಾಂತ್‌ ಅಮಲಾಗೆ ಬೆದರಿಕೆ ಹಾಕಿದ್ದರಂತೆ. ಈ ಘಟನೆಯ ನಂತರ ಅಮಲಾಗೆ ತಮಿಳಿನಲ್ಲಿ ಅವಕಾಶಗಳು ಕಡಿಮೆಯಾದ ಕಾರಣ ಅವರು ಕೇರಳಕ್ಕೆ ಹೋಗಿದ್ದಾರೆ ಎಂದು ಸೆಯ್ಯಾರು ಬಾಲು ಹೇಳಿದ್ದಾರೆ. 

910

ಕಾಲಿವುಡ್​ನ ಸ್ಟಾರ್​ ದಂಪತಿಗಳೆಂದೇ ಖ್ಯಾತರಾಗಿದ್ದ ನಟ ಧನುಷ್​ ಮತ್ತು ಸೂಪರ್​ಸ್ಟಾರ್​ ರಜನಿಕಾಂತ್​ ಅವರ ಹಿರಿಯ ಪುತ್ರಿ ಐಶ್ವರ್ಯಾ 18 ವರ್ಷಗಳ ದಾಂಪತ್ಯ ಜೀವನಕ್ಕೆ 2022ರ ಜನವರಿ 17ರಂದು ಏಕಾಏಕಿ ಗುಡ್​ ಬೈ ಹೇಳಿದ್ದರು. ಈ ಸುದ್ದಿ ಸಿನಿಮಾ ರಂಗದಲ್ಲೇ ಭಾರೀ ಚರ್ಚೆಗೆ ದಾರಿ ಮಾಡಿಕೊಟ್ಟಿತು.

1010

ಜ. 17 ರಂದು ಟ್ವೀಟ್​ ಮೂಲಕ ಧನುಷ್ ಡಿವೋರ್ಸ್​ ನಿರ್ಧಾರ ತಿಳಿಸಿದ್ದರು.  ಸ್ನೇಹಿತರಾಗಿ, ದಂಪತಿಯಾಗಿ, ಪೋಷಕರಾಗಿ ಮತ್ತು ಪರಸ್ಪರ ಹಿತೈಷಿಗಳಾಗಿ 18 ವರ್ಷಗಳು ಒಟ್ಟಿಗೆ ಕಳೆದೆವು. ಈ ಸುದೀರ್ಘ ಪ್ರಯಾಣವು ಬೆಳವಣಿಗೆ, ತಿಳುವಳಿಕೆ ಮತ್ತು ಹೊಂದಿಕೊಳ್ಳುವಿಕೆಯಿಂದ ಕೂಡಿತ್ತು. ಆದರೆ, ಇಂದು ನಾವು ನಮ್ಮ ದಾರಿಯಲ್ಲಿ ಬೇರೆಯಾಗುತ್ತಿದ್ದೇವೆ ಎಂದು ತಿಳಿಸಿದ್ದರು.

Read more Photos on
click me!

Recommended Stories