ವಿವೇಕ್ ಅಗ್ನಿಹೋತ್ರಿಯವರ ಚಿತ್ರ ದಿ ಕಾಶ್ಮೀರ್ ಫೈಲ್ಸ್ ಬಿಡುಗಡೆಯಾದ ಒಂದು ತಿಂಗಳ ನಂತರ ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿದೆ. ಹಿಂದಿಯಲ್ಲೇ ಈ ಚಿತ್ರ 252 ಕೋಟಿ ರೂಪಾಯಿ ಗಳಿಸಿದೆ.
ಮತ್ತೊಂದೆಡೆ, ವಿಶ್ವಾದ್ಯಂತ ಕಲೆಕ್ಷನ್ ಬಗ್ಗೆ ಹೇಳುವುದಾದರೆ, ಚಿತ್ರದ ಗಳಿಕೆಯು ಸುಮಾರು 340 ಕೋಟಿ ರೂ. ತರಣ್ ಆದರ್ಶ್ ಅವರ ಟ್ವೀಟ್ ಪ್ರಕಾರ, ಹಿಂದಿಯಲ್ಲಿ ಕಳೆದ ವಾರ ಶುಕ್ರವಾರ 50 ಲಕ್ಷ, ಶನಿವಾರ 85 ಲಕ್ಷ, ಭಾನುವಾರ 1.15 ಕೋಟಿ, ಸೋಮವಾರ 30 ಲಕ್ಷ, ಮಂಗಳವಾರ 32 ಲಕ್ಷ, ಬುಧವಾರ 25 ಲಕ್ಷ ಮತ್ತು ಗುರುವಾರ,15 ಲಕ್ಷ ಗಳಿಸಿದೆ.
ಈ ಮೂಲಕ ಚಿತ್ರದ ಒಟ್ಟು ಕಲೆಕ್ಷನ್ ಸುಮಾರು 252 ಕೋಟಿ ರೂ. ತಲುಪಿದೆ. ಕೇವಲ 12 ಕೋಟಿ ವೆಚ್ಚದಲ್ಲಿ ತಯಾರಾದ ದಿ ಕಾಶ್ಮೀರ್ ಫೈಲ್ಸ್ ತನ್ನ ಬಜೆಟ್‌ಗಿಂತ 28 ಪಟ್ಟು ಹೆಚ್ಚು ಗಳಿಸಿದೆ.
ಕಾಶ್ಮೀರ್ ಫೈಲ್ಸ್ ಮುಂಬೈನಲ್ಲಿ ಅತಿ ಹೆಚ್ಚು ಹಣ ಗಳಿಸಿತು. ಅಲ್ಲಿ ಚಿತ್ರ ಇದುವರೆಗೂ ಸುಮಾರು 70 ಕೋಟಿ ರೂ ಗಳಿಸಿದೆ. ಮತ್ತೊಂದೆಡೆ, ದೆಹಲಿ ಮತ್ತು ಯುಪಿ ಎರಡನೇ ಸ್ಥಾನದಲ್ಲಿವೆ. ಇಲ್ಲಿ ಚಿತ್ರದ ಗಳಿಕೆ ಸುಮಾರು 68 ಕೋಟಿ ರೂ ಆಗಿದೆ.
ಇದರ ನಂತರ ಪೂರ್ವ ಪಂಜಾಬ್‌ನಿಂದ 34 ಕೋಟಿ, ರಾಜಸ್ಥಾನದಿಂದ 15 ಕೋಟಿ, ಚಂಡೀಗಢದಿಂದ 12 ಕೋಟಿ, ಮೈಸೂರಿನಿಂದ 12 ಕೋಟಿ, ಪಶ್ಚಿಮ ಬಂಗಾಳದಿಂದ 11 ಕೋಟಿ, ನಿಜಾಮ್-ಆಂಧ್ರಪ್ರದೇಶದಿಂದ 10 ಕೋಟಿ, ಬಿಹಾರ-ಜಾರ್ಖಂಡ್‌ನಿಂದ 5 ಕೋಟಿ, ತಮಿಳುನಾಡಿನಿಂದ 4 ಕೋಟಿ- ಕೇರಳ., ಒಡಿಶಾದಿಂದ 3 ಕೋಟಿ ಮತ್ತು ಅಸ್ಸಾಂನಿಂದ 3 ಕೋಟಿ ಗಳಿಸಿದೆ.
ದಿ ಕಾಶ್ಮೀರ್ ಫೈಲ್ಸ್ ನಂತರ, ಈಗ ಈ ಚಿತ್ರದ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ದೆಹಲಿ ಗಲಭೆ ಕುರಿತು 'ದೆಹಲಿ ಫೈಲ್ಸ್' ಚಿತ್ರ ಮಾಡುವುದಾಗಿ ಘೋಷಿಸಿದ್ದಾರೆ. 'ಕಾಶ್ಮೀರ ಫೈಲ್ಸ್ ಅನ್ನು ಯಶಸ್ವಿಗೊಳಿಸಿದ ಎಲ್ಲರಿಗೂ ನಾನು ಧನ್ಯವಾದ ಹೇಳಲು ಬಯಸುತ್ತೇನೆ. ಕಾಶ್ಮೀರಿ ಹಿಂದೂಗಳ ನರಮೇಧದ ಬಗ್ಗೆ ಜನರ ಕಣ್ಣು ತೆರೆಯುವುದು ಬಹಳ ಮುಖ್ಯವಾಗಿತ್ತು ಎಂದು' ವಿವೇಕ್ ಅಗ್ನಿಹೋತ್ರಿ ಟ್ವೀಟ್ ಮಾಡಿದ್ದಾರೆ.
'ಹಲವು ವರ್ಷಗಳಿಂದ ಅಡಗಿರುವ ಸತ್ಯವನ್ನು ಬಹಿರಂಗಪಡಿಸಿದ್ದಕ್ಕಾಗಿ ನಾವು ನಿಮಗೆ ಧನ್ಯವಾದಗಳು' ಎಂದು ಈ ಟ್ವೀಟ್‌ಗೆ ಬಳಕೆದಾರರು ಪ್ರತಿಕ್ರಿಯೆ ನೀಡಿದ್ದಾರೆ. ಇದರೊಂದಿಗೆ ಅನೇಕರು ಸಿನಿಮಾ ಮಾಡಬಹುದಾದ ಕೆಲವು ವಿಷಯಗಳನ್ನೂ ಸೂಚಿಸಿದ್ದಾರೆ.