ಎಂಟರ್ಟೈನ್ ಇಂಡಸ್ಟ್ರಿಯ ಅತ್ಯಂತ ಪ್ರೀತಿಯ ಜೋಡಿಯಾದ ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಏಪ್ರಿಲ್ 14ರಂದು ವಿವಾಹವಾದರು. ವರನ ವಾಸ್ತು ಅಪಾರ್ಟ್‌ಮೆಂಟ್‌ನಲ್ಲಿ ವಿವಾಹ ನಡೆದಿದ್ದು, ದಂಪತಿಯ ಆತ್ಮೀಯ ಸ್ನೇಹಿತರು ಮತ್ತು ಕುಟುಂಬದವರು ಮಾತ್ರ ಭಾಗವಹಿಸಿದ್ದರು.
ದಂಪತಿಗಳ ವಿವಾಹದಲ್ಲಿ ಕೆಲವೇ ಆಪ್ತರು ಮತ್ತು ಕುಟುಂಬ ಸದಸ್ಯರು ಮಾತ್ರ ಭಾಗವಹಿಸಿದ್ದರು. ಕರೀನಾ ಕಪೂರ್ ಖಾನ್, ಸೈಫ್ ಅಲಿ ಖಾನ್, ನವ್ಯಾ ನವೇಲಿ ನಂದಾ, ಶ್ವೇತಾ ಬಚ್ಚನ್, ಆಕಾಶ್ ಅಂಬಾನಿ, ಶ್ಲೋಕಾ ಮೆಹ್ತಾ, ಆಕಾಂಶಾ ರಂಜನ್, ಅನುಷ್ಕಾ ರಂಜನ್, ಅಯಾನ್ ಮುಖರ್ಜಿ, ಕರಣ್ ಜೋಹರ್, ಲುವ್ ರಂಜನ್ ಮತ್ತು ಕೆಲವರು ಮದುವೆಯಲ್ಲಿ ಭಾಗವಹಿಸಿದ್ದರು.
ಆಲಿಯಾ ಮತ್ತು ರಣಬೀರ್ ಮ್ಯಾಚಿಂಗ್ ಔಟ್‌ಫಿಟ್‌ನಲ್ಲಿ ತುಂಬಾ ಗ್ರ್ಯಾಂಡ್ ಆಗಿ ಕಾಣುತ್ತಿದ್ದರು. ಸುಂದರ ವಧು ಆಲಿಯಾ ಭಟ್ ಆಗಮನದಿಂದ ಕಪೂರ್ ಫ್ಯಾಮಿಲಿ ತುಂಬಾ ಸಂತೋಷಪಟ್ಟಿದೆ.
ಅದರಲ್ಲೂ ನೀತು ಕಪೂರ್ ತಮ್ಮ ಮಗ ರಣಬೀರ್ ಕಪೂರ್ ಮದುವೆಯ ಖುಷಿಯಲ್ಲಿದ್ದಾರೆ. ಅಷ್ಟೇ ಅಲ್ಲ ಅವರು ಸೊಸೆ ಆಲಿಯಾಳನ್ನು ಹೊಗಳುತ್ತಿದ್ದಾರೆ. ಮಗನ ಮದುವೆಯ ಫೋಟೋಗಳನ್ನು ಪೋಸ್ಟ್ ಮಾಡುವಾಗ, ಅವರು ಆಲಿಯಾ ಮತ್ತು ರಣಬೀರ್ ಅವರನ್ನು ತನ್ನ 'ಯೂನಿವರ್ಸ್ ಎಂದು ಉಲ್ಲೇಖಿಸಿದ್ದಾರೆ.
ನವ ವಧು ಆಲಿಯಾ ಭಟ್, ತಮ್ಮ ಮೆಹೆಂದಿ ಪಾರ್ಟಿಯ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ ಮತ್ತು ಫ್ಯಾನ್ಸ್ ಆಲಿಯಾ ರಣಬೀರ್ ಅವರ ಫೋಟೋಗಳಿಗೆ ಫುಲ್ ಫಿದಾ ಆಗಿದ್ದಾರೆ.
ಒಬ್ಬರನ್ನೊಬ್ಬರು ಹಿಡಿದುಕೊಂಡ ಈ ಜೋಡಿ ಪ್ರೀತಿಯಲ್ಲಿ ಕಳೆದುಹೋಗಿದೆ. ಮೆಹಂದಿ ಸೆರಮನಿಯ ಫೋಟೊಗಳು ಸಖತ್ ವೈರಲ್ ಆಗುತ್ತಿವೆ. ಸೋಶಿಯಲ್ ಮೀಡಿಯಾದ ಫಾಲೋವರ್ಸ್ ಆಲಿಯಾರ ಈ ಫೋಟೋಗಳಿಗೆ ಸಖತ್ ಲೈಕ್ ಮಾಡಿದ್ದಾರೆ.
ರಣಬೀರ್ ಕಪೂರ್ ಅವರ ದಿವಂಗತ ತಂದೆ ರಿಷಿ ಕಪೂರ್ ಅವರ ಫೋಟೋವನ್ನು ಹಿಡಿದಿರುವ ಒಂದು ಫೋಟೋ ಸಹ ಇದೆ. ಸಾಮಾಜಿಕ ಮಾಧ್ಯಮದಲ್ಲಿ ಫೋಟೋ ಬಿಡುಗಡೆಯಾದ ತಕ್ಷಣ, ಅಭಿಮಾನಿಗಳು ಕಾಮೆಂಟ್‌ಗಳ ವಿಭಾಗದಲ್ಲಿ ಪ್ರೀತಿಯನ್ನು ಸುರಿಸಲಾರಂಭಿಸಿದರು.
ವರದಿಗಳ ಪ್ರಕಾರ, ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ಜೋಡಿಯು ಮೊದಲ ಬಾರಿಗೆ ಸಾರ್ವಜನಿಕವಾಗಿ ಗಂಡ ಮತ್ತು ಹೆಂಡತಿಯಾಗಿ ರಿಸೆಪ್ಷನ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ವರದಿಗಳು ಹೇಳುತ್ತಿವೆ. ಆದರೆ ಈ ಬಗ್ಗೆ ಇನ್ನೂ ಯಾವುದೇ ಪಕ್ಕ ಮಾಹಿತಿ ಇಲ್ಲ.
ಶನಿವಾರ ಸಂಜೆ, ಆಲಿಯಾ ರಣಬೀರ್ ದಂಪತಿಗಳು ತಮ್ಮ ವೃತ್ತಿಪರ ಸ್ನೇಹಿತರಿಗಾಗಿ ರಿಸೆಪ್ಷನ್ ಮತ್ತು ಗೆಟ್-ಟುಗೆದರ್ ಪಾರ್ಟಿ ಆಯೋಜಿಸಲಿದ್ದಾರೆ ಮತ್ತು ಸ್ಥಳ ಪ್ರೀಮಿಯಂ ಹೋಟೆಲ್ ಎಂದು ವರದಿಗಳು ಹೇಳಿವೆ.