ಕರಣ್ ಬೂಲಾನಿ ನಿರ್ದೇಶನದ 'ಥ್ಯಾಂಕ್ ಯೂ ಫಾರ್ ಕಮಿಂಗ್' ಸಿನಿಮಾ ನೆಟ್‌ಫ್ಲಿಕ್ಸ್‌ನಲ್ಲಿ ಭಾರೀ ಸದ್ದು ಮಾಡುತ್ತಿದೆ. ನೈಟ್ ಪಾರ್ಟಿಯೊಂದರಲ್ಲಿ ನಿಗೂಢ ವ್ಯಕ್ತಿಯೊಂದಿಗೆ ವಿಶೇಷ ಅನುಭವ ರೊಮ್ಯಾಂಟಿಕ್ ದೃಶ್ಯಗಳ ಕಥನ ನೀವೇ ನೋಡಿ..
ಇತ್ತೀಚೆಗೆ OTTಯಲ್ಲಿ ಬೋಲ್ಡ್ ಸಿನಿಮಾಗಳಿಗೆ ಬೇಡಿಕೆ ಹೆಚ್ಚಿದೆ. ಹಾರರ್, ಥ್ರಿಲ್ಲರ್‌ಗಳ ಜೊತೆ ರೊಮ್ಯಾಂಟಿಕ್ ಚಿತ್ರಗಳು ಯುವಕರನ್ನು ಸೆಳೆಯುತ್ತಿವೆ. ಇದೀಗ ಒಂದು ಸಿನಿಮಾ ಬೋಲ್ಡ್ ದೃಶ್ಯ, ಟ್ವಿಸ್ಟ್‌ಗಳಿಂದ ಸದ್ದು ಮಾಡ್ತಿದೆ.
25
ಆ ಸಿನಿಮಾ ಬೇರೆ ಯಾವುದೂ ಅಲ್ಲ, 'ಥ್ಯಾಂಕ್ ಯೂ ಫಾರ್ ಕಮಿಂಗ್'. ಬೋಲ್ಡ್ ನಿರೂಪಣೆಯ ಈ ಚಿತ್ರದ ಕಥೆ ಪ್ರೇಕ್ಷಕರನ್ನು ಸೆಳೆಯುತ್ತಿದೆ. ಸದ್ಯ ಈ ಸಿನಿಮಾ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮ್ ಆಗ್ತಿದೆ. ಇದನ್ನು ಕರಣ್ ಬೂಲಾನಿ ನಿರ್ದೇಶಿಸಿದ್ದಾರೆ.
35
ಭೂಮಿ ಪೆಡ್ನೇಕರ್, ಶೆಹನಾಜ್ ಗಿಲ್, ಡಾಲಿ ಸಿಂಗ್, ಕುಶಾ ಕಪಿಲಾ ಪ್ರಮುಖ ಪಾತ್ರಗಳಲ್ಲಿದ್ದಾರೆ. ಅನಿಲ್ ಕಪೂರ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರವು ಮಹಿಳಾ ಸಂತೋಷ, ಪ್ರೀತಿ, ಸ್ನೇಹದಂತಹ ವಿಷಯಗಳನ್ನು ಧೈರ್ಯವಾಗಿ ತೋರಿಸುತ್ತದೆ.
ಕಥಾನಾಯಕಿ ಕಣಿಕಾ ಕಪೂರ್ (ಭೂಮಿ ಪೆಡ್ನೇಕರ್) ಫುಡ್ ಬ್ಲಾಗರ್. ಆಕೆಗೆ ಜೀವನದಲ್ಲಿ ಎಂದಿಗೂ ಸಂಪೂರ್ಣ ತೃಪ್ತಿ ಸಿಕ್ಕಿರುವುದಿಲ್ಲ. ಪಾರ್ಟಿಯೊಂದರಲ್ಲಿ ನಿಗೂಢ ವ್ಯಕ್ತಿಯೊಂದಿಗೆ ವಿಶೇಷ ಅನುಭವ ಪಡೆಯುತ್ತಾಳೆ. ಈ ವಿಚಾರದಿಂದಾಗಿ ಆಕೆಯ ಮದುವೆ ಮುರಿದು ಬೀಳುತ್ತದೆ.
55
ಕೊನೆಗೆ ಆ ನಿಗೂಢ ವ್ಯಕ್ತಿ ಯಾರು, ಕಣಿಕಾ ಯಾವ ನಿರ್ಧಾರ ತೆಗೆದುಕೊಳ್ಳುತ್ತಾಳೆ ಎನ್ನುವುದೇ ಕ್ಲೈಮ್ಯಾಕ್ಸ್. ಯುವಕರನ್ನು ಗಮನದಲ್ಲಿಟ್ಟುಕೊಂಡು ಈ ಚಿತ್ರವನ್ನು ನಿರ್ಮಿಸಲಾಗಿದೆ. ಸದ್ಯ ಈ ಚಿತ್ರ ನೆಟ್‌ಫ್ಲಿಕ್ಸ್ ನಲ್ಲಿ ಲಭ್ಯವಿದೆ.