ಹಣೆಯಲ್ಲಿ ಕೆಂಪು ಕುಂಕುಮ, ಕೈಯಲ್ಲಿ ರುದ್ರಾಕ್ಷಿ, ಕೆಂಪುದಾರ; Actor Aamir Khan ಈ ಅವತಾರ ಗೌರಿ ಕೃಪೆಯೇ?

Published : Sep 18, 2025, 03:52 PM IST

Actor Aamir Khan: ಬಾಲಿವುಡ್‌ ನಟ ಆಮಿರ್‌ ಖಾನ್‌ ಅವರು ವಿಡಿಯೋ ಮೂಲಕ ನರೇಂದ್ರ ಮೋದಿಗೆ ಜನ್ಮದಿನದ ಶುಭಾಶಯ ತಿಳಿಸಿದ್ದಾರೆ. ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು 75ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಈ ವೇಳೆ ಆಮೀರ್‌ ಖಾನ್‌ ಅವರ ಗೆಟಪ್‌ ದೊಡ್ಡ ಮಟ್ಟದಲ್ಲಿ ಅಚ್ಚರಿ ಮೂಡಿಸಿದೆ.  

PREV
15
ಮೋದಿಯನ್ನು ಕೊಂಡಾಡಿದ ಆಮಿರ್‌ ಖಾನ್

ಈ ಸಂದರ್ಭದಲ್ಲಿ ಆಮಿರ್ ಖಾನ್ ಅವರು ಮೋದಿಯವರ ದೇಶದ ಅಭಿವೃದ್ಧಿಗೆ ನೀಡಿರುವ ಕೊಡುಗೆಗಳನ್ನು ಕೊಂಡಾಡಿದ್ದಾರೆ. ಈ ವೇಳೆ ಅವರ ಹಣೆಯಲ್ಲಿ ಕೆಂಪು ಕುಂಕು, ಕೈಯಲ್ಲಿ ರುದ್ರಾಕ್ಷಿ ದಾರ ಇರೋದು ನೋಡಿ ವೀಕ್ಷಕರು ಆಶ್ಚರ್ಯಪಟ್ಟಿದ್ದಾರೆ.

25
ದೀರ್ಘಾಯುಷ್ಯಕ್ಕಾಗಿ ಪ್ರಾರ್ಥಿಸುತ್ತೇವೆ

"ನಿಮಗೆ ಹುಟ್ಟುಹಬ್ಬದ ಶುಭಾಶಯಗಳು ಸರ್. ಭಾರತದ ಅಭಿವೃದ್ಧಿಗಾಗಿ ನೀವು ನೀಡಿರುವ ಕೊಡುಗೆಗಳು ಎಂದಿಗೂ ಮರೆಯಲಾಗೋದಿಲ್ಲ. ಈ ಸಂತೋಷದ ಸಂದರ್ಭದಲ್ಲಿ, ನಿಮ್ಮ ದೀರ್ಘಾಯುಷ್ಯಕ್ಕಾಗಿ ಮತ್ತು ದೇಶವನ್ನು ಪ್ರಗತಿಯ ಪಥದಲ್ಲಿ ಮುನ್ನಡೆಸಿ ಎಂದು ನಾವು ಪ್ರಾರ್ಥಿಸುತ್ತೇವೆ" ಎಂದು ಆಮಿರ್ ಖಾನ್ ಅವರು ವಿಡಿಯೋ ಮೂಲಕ ಹೇಳಿದ್ದಾರೆ.

35
ದೇಶ ಪ್ರಗತಿ ಸಾಧಿಸಿದೆ

ಪ್ರಧಾನಿ ಮೋದಿಯವರ ನಾಯಕತ್ವದಲ್ಲಿ ಭಾರತವು ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಪ್ರಗತಿಯನ್ನು ಸಾಧಿಸಿದೆ ಎಂದು ಆಮಿರ್ ಖಾನ್ ತಮ್ಮ ಸಂದೇಶದಲ್ಲಿ ಒತ್ತಿ ಹೇಳಿದ್ದಾರೆ. ಈ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಲು ಇನ್ನೊಂದು ಕಾರಣವಿದೆ.

45
ಹಣೆಯಲ್ಲಿ ಕೆಂಪು ಕುಂಕುಮ, ರುದ್ರಾಕ್ಷಿ

ಆಮಿರ್‌ ಖಾನ್‌ ಅವರು ಹಣೆಗೆ ಕೆಂಪು ಕುಂಕುಮ ಇಟ್ಟಿದ್ದಾರೆ. ಅವರ ಕೈಗೆ ರಾಖಿಯನ್ನು ಕೂಡ ಕಟ್ಟಲಾಗಿದೆ. ಇದರ ಜೊತೆಗೆ ರುದ್ರಾಕ್ಷಿ ಕೂಡ ಇದೆ. ಈ ವಿಡಿಯೋ ಸಾಕಷ್ಟು ವೈರಲ್‌ ಆಗ್ತಿದೆ. ಈ ಬಗ್ಗೆ ಆಮಿರ್‌ ಖಾನ್‌ ಅವರೇ ಸ್ಪಷ್ಟನೆ ನೀಡಬೇಕಿದೆ.

55
ಹೊಸ ಪ್ರೇಯಸಿ ಗೌರಿ

ಸಿನಿಮಾದಲ್ಲಿ ನಟಿಸುತ್ತಿರವಾಗ ಈ ರೀತಿ ಗೆಟಪ್‌ ಹಾಕಿದ್ದರೋ ಅಥವಾ ಇಷ್ಟಪಟ್ಟು ಹಾಕಿದ್ದರೋ ಎಂಬ ಬಗ್ಗೆ ಅವರೇ ಮಾಹಿತಿ ನೀಡಬೇಕಿದೆ. ಅಂದಹಾಗೆ ಅವರ ಗರ್ಲ್‌ಫ್ರೆಂಡ್‌ ಗೌರಿ ಜೊತೆಗೆ ರಿಲೇಶನ್‌ಶಿಪ್‌ನಲ್ಲಿರುವುದಾಗಿ ಅವರು ಎಲ್ಲರ ಮುಂದೆ ಹೇಳಿಕೊಂಡಿದ್ದಾರೆ.

Read more Photos on
click me!

Recommended Stories