‌OTT Movies 2025: ಕೂತಲ್ಲೇ ಕೂರಿಸೋ ಬೆಸ್ಟ್‌ ಕೋರ್ಟ್‌ ಡ್ರಾಮಾ ಥ್ರಿಲ್ಲರ್ ಸಿನಿಮಾಗಳಿವು!

Published : Sep 18, 2025, 02:33 PM IST

Court Movies: ಕಾನೂನು, ಪ್ರಕರಣದ ಆಧಾರದ ಮೇಲೆ ಭಾರತದಲ್ಲಿ ಸಾಕಷ್ಟು ಸಿನಿಮಾ, ವೆಬ್‌ ಸಿರೀಸ್‌ಗಳು ಬಂದಿವೆ. ಇಲ್ಲಿ ಟಾಪ್‌ ಕೋರ್ಟ್‌ ಡ್ರಾಮಾ ಸಿನಿಮಾಗಳು ಇಲ್ಲಿವೆ. ಬಾಲಿವುಡ್‌ನಲ್ಲಂತೂ ವಿಭಿನ್ನವಾದ ಕೇಸ್‌ಗಳ ಮೇಲೆ ಸಿನಿಮಾ ಮಾಡಲಾಗಿದೆ. ಅವುಗಳು ಕುರ್ಚಿಯ ತುತ್ತತುದಿ ತಂದು ನಿಲ್ಲಿಸುತ್ತವೆ. 

PREV
18
ಟಾಪ್‌ ಸಿನಿಮಾಗಳು

ಪ್ರಕರಣಗಳನ್ನು ಬೇಧಿಸುವ, ಕೊನೆವರೆಗೂ ಕುತೂಹಲ ಮೂಡಿಸುವ ಸಿನಿಮಾಗಳು 

28
Guilty Minds - Amazon Prime Video

ಈ ಸಿನಿಮಾವು ಸ್ನೇಹಿತರು, ವಕೀಲರಾದ ಕಾಶಾಫ್ ಕ್ವಾಝೆ, ದೀಪಕ್ ರಾಣ ಬಗ್ಗೆ ಇದೆ. ಮಾನವೀಯ ವಿಷಯಗಳು, ಕಾನೂನು ಸಂಕಟಗಳ ಕುರಿತು ಈ ಸಿನಿಮಾವಿದೆ. ಶ್ರಿಯಾ ಪಿಲಗಾಂವಕರ್, ವರುಣ್ ಮಿತ್ರಾ ನಟಿಸಿದ್ದಾರೆ.

38
Jolly LLB - JioHotstar

ಮೀರತ್‌ನ ಸಣ್ಣ ಪಟ್ಟಣದಲ್ಲಿ ವಕೀಲ ಜಗದೀಶ್‌ ಜಗದೀಶ್‌ ತ್ಯಾಗಿ ಇರುತ್ತಾನೆ. ಹಿಟ್‌ & ರನ್‌ ಆಕ್ಸಿಡೆಂಟ್‌ನಲ್ಲಿ ತೀರಿಕೊಂಡವರ ಪರವಾಗಿ ಹೋರಾಡುವ ಕಥೆ ಇಲ್ಲಿದೆ. ಅರ್ಷದ್‌ ವಾರ್ಸಿ ಈ ಸಿನಿಮಾದಲ್ಲಿ ನಟಿಸಿದ್ದಾರೆ.

48
Trial by Fire - Netflix

1997ರ ಉಫಾರ್ ಸಿನಿಮಾ ಥಿಯೇಟರ್‌ನ ಅಗ್ನಿ ದುರಂತದ ನಂತರ ಏನಾಯ್ತು ಎನ್ನೋದರ ಮೇಲೆ ಈ ಸಿನಿಮಾವಿದೆ. ಈ ದುರಂತದಲ್ಲಿ ತಮ್ಮ ಮಕ್ಕಳನ್ನು ಕಳೆದುಕೊಂಡ ದುಃಖದಿಂದ ಕುಗ್ಗಿಹೋದ ದಂಪತಿಗಳಾದ ನೀಲಂ ಮತ್ತು ಶೇಖರ್ ಕೃಷ್ಣಮೂರ್ತಿಯವರ ಭಾವನಾತ್ಮಕ, ಕಾನೂನು ಜರ್ನಿ ಇದೆ. ಅಭಯ್ ದೇವೋಲ್, ರಾಜಶ್ರೀ ದೇಶಪಾಂಡೆ, ಆಶಿಶ್ ವಿದ್ಯಾರ್ಥಿ ನಟಿಸಿದ್ದಾರೆ.

58
Jana Gana Mana - Netflix

ಕಾಂಪ್ಲಿಕೇಟೆಡ್‌ ಮಲಯಾಳಂ ಲೀಗಲ್‌ ಡ್ರಾಮಾ ಇದೆ. ಕ್ರೈಂ ಥ್ರಿಲ್ಲರ್‌ ಕಥೆ ಇಲ್ಲಿದೆ. ಕಾಲೇಜ್‌ ಪ್ರೊಫೆಸರ್‌ ಕೇಸ್‌ನ್ನು ತನಿಖೆ ಮಾಡುವಾಗ ಪೊಲೀಸ್‌ ಆಫೀಸರ್‌ಗೆ ಅನಿರೀಕ್ಷಿತ ಸಮಸ್ಯೆ ಎದುರಾಗುವುದು. ಇಲ್ಲಿ ವಕೀಲರು ನ್ಯಾಯಕ್ಕಾಗಿ ಹೋರಾಟ ಮಾಡ್ತಾರೆ. ಸಾಮಾಜಿಕ ಸಮಸ್ಯೆಗಳ ಬಗ್ಗೆಯೂ ಚರ್ಚೆ ಆಗುವುದು. ಪೃಥ್ವಿರಾಜ್‌ ಸುಕುಮಾರನ್‌ ಇಲ್ಲಿ ನಟಿಸಿದ್ದಾರೆ.

68
Maamla Legal Hai - Netflix

ಕಾಮಿಡಿ ಡ್ರಾಮಾ ಇದಾಗಿದೆ. ಕೋರ್ಟ್‌ರೂಮ್‌ನಲ್ಲಿ ಯಾವಾಗಲೂ ಗಂಭೀರತೆ ಇರುತ್ತದೆ, ಆದರೆ ಇಲ್ಲಿ ಕಾಮಿಡಿ ಕೂಡ ಇದೆ. ನಿಜ ಜೀವನದಲ್ಲಿ ನಡೆದ ಕಥೆಗಳನ್ನು ಬಗೆಹರಿಸುವ ಕೋರ್ಟ್‌ರೂಮ್‌ ಡ್ರಾಮಾ ಇಲ್ಲಿದೆ. ರವಿ ಕಿಶನ್‌, ನೈಲಾ, ನಿಧಿ ಬಿಶ್ತ್‌, ಯಶ್‌ಪಾಲ್‌ ಶರ್ಮಾ ಮುಂತಾದವರು ನಟಿಸುತ್ತಿದ್ದಾರೆ.

78
The Trial - JioHotstar

‘ದಿ ಟ್ರಯಲ್’‌ ಸಿನಿಮಾವು ‘ದಿ ಗುಡ್‌ ವೈಫ್’‌ ಸಿನಿಮಾದ ಅಡಾಪ್ಶನ್‌ ಎನ್ನಲಾಗುತ್ತಿದೆ. ನೊಯೊನಿಕಾ ಸೆನ್‌ಗುಪ್ತಾ ಅವರು ಮಾಜಿ ವಕೀಲರಾಗಿದ್ದು, ಗೃಹಿಣಿ ಕೂಡ ಹೌದು. ಭಷ್ಟ್ರಾಚಾರ ಸಂಬಂಧಿತ ಕೇಸ್‌ನಲ್ಲಿ ಗಂಡನಿಗೆ ಜೈಲು ಶಿಕ್ಷೆ ಆದ ಬಳಿಕ ಅವಳು ಲಾ ಫರ್ಮ್‌ನಲ್ಲಿ ಜ್ಯೂನಿಯರ್‌ ಲಾಯರ್‌ ಆಗಿ ಕೆಲಸ ಮಾಡುತ್ತಾಳೆ. ವೈಯಕ್ತಿಕ, ಪ್ರೊಫೆಶನಲ್‌ ಜವಾಬ್ದಾರಿಯನ್ನು ಇವಳು ಹೇಗೆ ನಿಭಾಯಿಸುತ್ತಾಳೆ ಎಂದು ಕಾದು ನೋಡಬೇಕಿದೆ. ಕಾಜೋಲ್‌ ಈ ಸಿನಿಮಾದಲ್ಲಿ ನಟಿಸಿದ್ದಾರೆ.

88
Criminal Justice-JioHotstar

ಪಂಕಾಜ್ ತ್ರಿಪಾಠಿ, ವಿಕ್ರಾಂತ್ ಮಾಸ್ಸಿ ನಟಿಸಿರುವ ಈ ಕೋರ್ಟ್‌ರೂಂ ಡ್ರಾಮಾದಲ್ಲಿ, ಆದಿತ್ಯ ಶರ್ಮ ಎಂಬ ಕ್ಯಾಬ್ ಡ್ರೈವರ್‌ ಕಥೆ ಇದೆ. ಓರ್ವ ಪ್ರಯಾಣಿಕನ ಜೊತೆ ನೈಟ್‌ ಡ್ರೈವ್‌ ಮಾಡುವಾಗ ಅಲ್ಲಿ ಕೊಲೆ ಆಗುವುದು. ಇಲ್ಲಿಂದ ಹೊಸ ಟ್ವಿಸ್ಟ್ ಶುರುವಾಗುತ್ತದೆ. ವಕೀಲ ಮಾಧವ್‌ ಮಿಶ್ರಾ ಹೇಗೆ ಬಿಡಿಸ್ತಾನೆ ಎಂದು ಈ ಸಿನಿಮಾ ನೋಡಿ ತಿಳಿದುಕೊಳ್ಳಬೇಕು.

Read more Photos on
click me!

Recommended Stories