Chandrayaan-3: ಚಂದ್ರನಲ್ಲಿ ಭೂಮಿ ಖರೀದಿ ಮಾಡೋದ್ಹೇಗೆ, ಯಾರೆಲ್ಲಾ ಖರೀದಿ ಮಾಡಿದ್ದಾರೆ?

Published : Aug 23, 2023, 12:04 PM ISTUpdated : Aug 23, 2023, 02:32 PM IST

ಚಂದ್ರಯಾನ 3 ನೌಕೆ ಚಂದ್ರ ದಕ್ಷಿಣ ಧ್ರುವದ ಮೇಲಿಳಿಯಲು ಕ್ಷಣಗಣನೆ ಆರಂಭವಾಗಿದ್ದು, ಈ ಐತಿಹಾಸಿಕ ಕ್ಷಣಕ್ಕೆ ಇಡೀ ವಿಶ್ವವೇ ಎದುರು ನೋಡುತ್ತಿದೆ. ಇದೆಲ್ಲದರ ಮಧ್ಯೆ ಚಂದ್ರನ ಬಗ್ಗೆ ಕುತೂಹಲಗಳೂ ಸಹ ಹೆಚ್ತಿದೆ. ಚಂದ್ರನಲ್ಲಿ ಭೂಮಿ ಖರೀದಿ ಮಾಡೋದ್ಹೇಗೆ, ಯಾರೆಲ್ಲಾ ಖರೀದಿ ಮಾಡಿದ್ದಾರೆ ಅನ್ನೋ ಇಂಟ್ರೆಸ್ಟಿಂಗ್ ವಿಚಾರ ಇಲ್ಲಿದೆ.

PREV
18
Chandrayaan-3: ಚಂದ್ರನಲ್ಲಿ ಭೂಮಿ ಖರೀದಿ ಮಾಡೋದ್ಹೇಗೆ, ಯಾರೆಲ್ಲಾ ಖರೀದಿ ಮಾಡಿದ್ದಾರೆ?

ಭಾರತ ದೇಶದ ಚಂದ್ರಯಾನ-3 ಲ್ಯಾಂಡಿಂಗ್‌ ಬಗ್ಗೆ ಜಾಗತಿಕ ಮಟ್ಟದಲ್ಲಿಯೇ ಭಾರಿ ಕುತೂಹಲ ಎದ್ದಿದೆ. ಆದರೆ, ಭೂಮಿಯಿಂದ 2,39,000 ಮೈಲುಗಳಷ್ಟು ದೂರದಲ್ಲಿರುವ ನೈಸರ್ಗಿಕ ಉಪಗ್ರಹ ಚಂದ್ರನ ಅಂಗಳಕ್ಕೆ ಈವರೆಗೆ 12 ಮಂದಿ ಹೋಗಿ ಬಂದಿದ್ದಾರೆ.

28

ಕೆಲವರು ಬಾಹ್ಯಾಕಾಶದಲ್ಲಿ ತಮ್ಮ ಆಸಕ್ತಿಯಿಂದಾಗಿ ಮತ್ತು ಇತರರು ಭವಿಷ್ಯದ ಹೂಡಿಕೆಯಾಗಿ, ಬಾಹ್ಯಾಕಾಶ ಅನ್ನೋದು ಎಲ್ಲರಿಗೂ ಆಸಕ್ತಿರ ವಿಚಾರವಾಗಿ ಮಾರ್ಪಟ್ಟಿದೆ. ಬಾಲಿವುಡ್‌ನ ಕೆಲವು ನಟರು ಚಂದ್ರನಲ್ಲಿ ಭೂಮಿ ಖರೀಸಿದಿಸಿದ್ದಾರೆ.

38

ಅಮೇರಿಕಾ ನಾಸಾದ ನೀಲ್‌ ಆರ್ಮ್‌ಸ್ಟ್ರಾಂಗ್‌ಗಿಂತ ಮುಂಚೆಯೇ 1960ರಲ್ಲಿಯೇ ಇಬ್ಬರು ಕನ್ನಡಿಗರು 'ಚಂದ್ರನ ಮೇಲೆ ಕಾಲಿಟ್ಟಿದ್ದರು'. ಪ್ರಪಂಚದಾದ್ಯಂತ ರಿಯಲ್ ಎಸ್ಟೇಟ್ ಬೆಲೆಗಳು ಉತ್ತುಂಗಕ್ಕೇರಿವೆ. ಹೀಗಾಗಿ ಅನೇಕ ಶ್ರೀಮಂತ ಉದ್ಯಮಿಗಳು ಮತ್ತು ಸೆಲೆಬ್ರಿಟಿಗಳು ಚಂದ್ರನ ಮೇಲೆ ಭೂಮಿಯನ್ನು ಖರೀದಿಸಲು ಉತ್ಸಾಹ ತೋರಿದ್ದಾರೆ.

48

ದಿವಂಗತ ನಟ ಸುಶಾಂತ್ ಸಿಂಗ್ ರಜಪೂತ್ ಅವರಿಗೆ ವಿಜ್ಞಾನ ಮತ್ತು ಆಕಾಶದ ಕುರಿತಾಗಿದ್ದ ಆಸಕ್ತಿ ಎಲ್ಲರಿಗೂ ತಿಳಿದಿರುವಂಥದ್ದೇ. ಈ ಪ್ರಸಿದ್ಧ ಬಾಲಿವುಡ್ ನಟ ಚಂದ್ರನ ಮೇಲೆ ಒಂದು ತುಂಡು ಭೂಮಿಯನ್ನು ಖರೀದಿಸಿದ್ದರು. ಅವರು ಚಂದ್ರನ ದೂರದ ಭಾಗದಲ್ಲಿ ಭೂಮಿಯನ್ನು ಖರೀದಿಸಿದ್ದರು ಮತ್ತು ಅವರು ಖರೀದಿಸಿದ ಪ್ರದೇಶವನ್ನು ಮೇರ್ ಮಸ್ಕೋವಿಯೆನ್ಸ್ ಅಥವಾ 'ಮಸ್ಕೋವಿ ಸಮುದ್ರ' ಎಂದು ಕರೆಯಲಾಗುತ್ತದೆ.

58

ಇದಲ್ಲದೆ, ಬಾಲಿವುಡ್ ಸೂಪರ್‌ಸ್ಟಾರ್ ಶಾರುಖ್ ಖಾನ್ ಅವರಿಗೆ ತಮ್ಮ 52 ನೇ ಹುಟ್ಟುಹಬ್ಬದಂದು ಆಸ್ಟ್ರೇಲಿಯಾದ ಅಭಿಮಾನಿಯೊಬ್ಬರು ಚಂದ್ರನ ಮೇಲೆ ಭೂಮಿಯನ್ನು ಉಡುಗೊರೆಯಾಗಿ ನೀಡಿದ್ದರು. ಈ ವಿಚಾರವನ್ನು ಸ್ವತಃ ಶಾರೂಕ್ ಖಾನ್ ಅವ್ರೇ  ಕೆಲವು ವರ್ಷಗಳ ಹಿಂದೆ ಬಹಿರಂಗಪಡಿಸಿದ್ದರು. ಗಮನಾರ್ಹವಾಗಿ, ಚಂದ್ರನ ಚಂದ್ರನ ಮೇಲ್ಮೈಯಲ್ಲಿರುವ ಒಂದು ಕುಳಿಗೂ SRK ಹೆಸರನ್ನು ಇಡಲಾಗಿದೆ ಎಂದು ಹೇಳಲಾಗ್ತಿತ್ತು.

68

ಚಂದ್ರನ ಮೇಲೆ ಎಲ್ಲರೂ ಆಸ್ತಿಯನ್ನು ಹೊಂದಬಹುದಾ? ಚಂದ್ರನ ಮೇಲೆ ಭೂಮಿಯ ಬೆಲೆ ಎಷ್ಟಿದೆ ಮತ್ತು ಚಂದ್ರನ ಮೇಲ್ಮೈಯಲ್ಲಿ ಭೂಮಿಯನ್ನು ಹೇಗೆ ಖರೀದಿಸುವುದು ಎಂಬುದರ ಕುರಿತು ನೀವು ತಿಳಿದುಕೊಳ್ಳಬೇಕಾದದ್ದು ಇಲ್ಲಿದೆ.

78

ಚಂದ್ರನ ಮೇಲೆ ಭೂಮಿ ಖರೀದಿಸುವುದು ಹೇಗೆ?
ಚಂದ್ರನ ಮೇಲೆ ಭೂಮಿಯನ್ನು ಖರೀದಿಸಲು ಒಂದು ಮಾರ್ಗವೆಂದರೆ ದಿ ಲೂನಾರ್ ರಿಜಿಸ್ಟ್ರಿ ಎಂಬ ವೆಬ್‌ಸೈಟ್. ಇಲ್ಲಿ  ತಮ್ಮ ಕುರಿತಾದ ಸಂಪೂರ್ಣ ಮಾಹಿತಿಯನ್ನು ನೀಡಿ ಭೂಮಿಯನ್ನು ಖರೀದಿಸಲು ಬಯಸುವ ಪ್ರದೇಶವನ್ನು ಆಯ್ಕೆ ಮಾಡಬಹುದು. ಇದು ಸಮುದ್ರ. ಸರೋವರದಂತಹ ಹಲವಾರು ಪ್ರದೇಶಗಳನ್ನು ಒಳಗೊಂಡಿದೆ.

88

ನಿಮ್ಮ ಆಯ್ಕೆಯ ಪ್ರದೇಶವನ್ನು ಆಯ್ಕೆ ಮಾಡಿದ ನಂತರ, ಸೆಟ್ ದಾಖಲೆಗಳನ್ನು ಒದಗಿಸಬಹುದು ಮತ್ತು ಖರೀದಿಯನ್ನು ಮಾಡಬಹುದು. ಚಂದ್ರನ ಮೇಲೆ ಒಂದು ಎಕರೆ ಭೂಮಿಗೆ USD 42.5 ವೆಚ್ಚವಾಗುತ್ತದೆ. ಇದರರ್ಥ ನೀವು 2 ಬೆಡ್‌ರೂಮ್ ಅಪಾರ್ಟ್‌ಮೆಂಟ್‌ನಷ್ಟು ದೊಡ್ಡ ಭೂಮಿಯನ್ನು ಖರೀದಿಸಿದರೆ, ಬೆಲೆ ಸುಮಾರು 35 ಲಕ್ಷ ರೂಪಾಯಿ ಆಗಿರಬಹುದು.
 

Read more Photos on
click me!

Recommended Stories