ಅತೀ ಹೆಚ್ಚು ಸಿನಿಮಾದಲ್ಲಿ ನಟಿಸಿದ ಭಾರತೀಯ ನಟ; ಶಾರೂಕ್‌, ರಜನಿ, ಪ್ರಭಾಸ್ ಅಲ್ವೇ ಅಲ್ಲ..ಮತ್ಯಾರು?

First Published Aug 23, 2023, 10:15 AM IST

ದಕ್ಷಿಣ ಚಿತ್ರರಂಗದ ರಜನಿಕಾಂತ್, ಕಮಲ್ ಹಾಸನ್, ಚಿರಂಜೀವಿ, ಪ್ರಭಾಸ್, ಅಲ್ಲು ಅರ್ಜುನ್, ಯಶ್‌ ಮುಂತಾದವರು ಈಗಾಗಲೇ ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದಾರೆ. ಭಾರತದಲ್ಲಿ ಅತೀ ಹೆಚ್ಚು ಸಿನಿಮಾದಲ್ಲಿ ನಟಿಸಿದ ಹೆಗ್ಗಳಿಗೆ ದಕ್ಷಿಣಭಾರತದ ನಟರೊಬ್ಬರಿಗಿದೆ. ಆದರೆ ಅದು ಇವರ್ಯಾರು ಅಲ್ಲ. ಮತ್ಯಾರು?

ಭಾರತೀಯ ಚಿತ್ರರಂಗ ಬಾಲಿವುಡ್‌, ಕಾಲಿವುಡ್, ಟಾಲಿವುಡ್, ಸ್ಯಾಂಡಲ್‌ವುಡ್, ಮಾಲಿವುಡ್ ಎಂದು ಹೆಮ್ಮರವಾಗಿ ಬೆಳೆಯುತ್ತಲೇ ಇದೆ. ಹಲವು ಭಾಷೆಗಳಲ್ಲಿ ಹಲವು ದಿಗ್ಗಜ ನಟರಿದ್ದಾರೆ. ಅಮಿತಾಬ್, ಶಾರೂಕ್ ಖಾನ್, ಅಮೀರ್ ಖಾನ್‌, ಶಿವರಾಜ್‌ ಕುಮಾರ್, ಯಶ್‌, ದರ್ಶನ್, ಸುದೀಪ್‌, ರಜನೀಕಾಂತ್, ಚಿರಂಜೀವಿ, ಅಲ್ಲು ಅರ್ಜುನ್, ಪ್ರಭಾಸ್, ಮೋಹನ್‌ ಲಾಲ್, ಮಮ್ಮುಟ್ಟಿ ಹೀಗೆ ಹಲವರು ಭಾರತೀಯ ಚಿತ್ರರಂಗವನ್ನು ಆಳುತ್ತಿದ್ದಾರೆ.

ದಕ್ಷಿಣ ಚಿತ್ರರಂಗದ ಮೆಗಾಸ್ಟಾರ್‌ಗಳಾದ ರಜನಿಕಾಂತ್, ಕಮಲ್ ಹಾಸನ್, ಚಿರಂಜೀವಿ, ಪ್ರಭಾಸ್, ಅಲ್ಲು ಅರ್ಜುನ್, ಯಶ್‌ ಮುಂತಾದವರು ಈಗಾಗಲೇ ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದಾರೆ. ಇದರಲ್ಲಿ ಕೆಲವರು ಈಗಾಗ್ಲೇ ಹಲವಾರು ಬಾಲಿವುಡ್ ಚಿತ್ರಗಳಲ್ಲಿಯೂ ಕೆಲಸ ಮಾಡಿದ್ದಾರೆ.  ಪ್ಯಾನ್ ಇಂಡಿಯಾ ಸಿನಿಮಾ ಬಾಹುಬಲಿ ಭಾರತೀಯ ಚಿತ್ರರಂಗವನ್ನು ಸಂಪೂರ್ಣವಾಗಿ ಬದಲಾಯಿಸಿತು.  

Latest Videos


ಆದರೆ ಭಾರತದಲ್ಲಿ ಅತಿ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ಹೆಗ್ಗಳಿಕೆಗೆ ಪಾತ್ರರಾಗಿರೋದು ಇವರ್ಯಾರೂ ಅಲ್ಲ. ಇವರು ದಕ್ಷಿಣಭಾರತದ ಒಬ್ಬ ಹೆಸರಾಂತ ನಟ. ಗರಿಷ್ಠ ಸಂಖ್ಯೆಯ ಚಲನಚಿತ್ರಗಳಲ್ಲಿ ಕೆಲಸ ಮಾಡಿದ್ದಕ್ಕಾಗಿ ಗಿನ್ನೆಸ್ ವಿಶ್ವ ದಾಖಲೆಯಲ್ಲಿ ಇವರ ಹೆಸರನ್ನು ದಾಖಲಿಸಲಾಗಿದೆ.

ಅವರು ಮತ್ಯಾರೂ ಅಲ್ಲ. ದಕ್ಷಿಣ ಚಿತ್ರರಂಗದ ಹಿರಿಯ ನಟ ಬ್ರಹ್ಮಾನಂದಂ. ಅವರು ದಕ್ಷಿಣದ ಪ್ರತಿಯೊಂದು ಚಿತ್ರದಲ್ಲೂ ಕಾಣಿಸಿಕೊಳ್ಳುತ್ತಾರೆ. ಬ್ರಹ್ಮಾನಂದಂ ಇಲ್ಲದೆ ಯಾವುದೇ ಟಾಲಿವುಡ್ ಚಿತ್ರ ಮಾಡಲು ಸಾಧ್ಯವಿಲ್ಲ ಎಂದು ಹೇಳಿದರೆ ತಪ್ಪಾಗುವುದಿಲ್ಲ.

ಬ್ರಹ್ಮಾನಂದಂ ಅವರು ಫೆಬ್ರವರಿ 1, 1956 ರಂದು ಆಂಧ್ರಪ್ರದೇಶದ ಸತ್ತೇನಪಲ್ಲಿಯ ಚಗಂಟಿ ವರಿ ಪಾಲೆಮ್ ಗ್ರಾಮದಲ್ಲಿ ಜನಿಸಿದರು. ಬ್ರಹ್ಮಾನಂದಂ ಅವರು 35 ವರ್ಷಗಳ ವೃತ್ತಿಜೀವನದಲ್ಲಿ 6 ರಾಜ್ಯ ನಂದಿ ಪ್ರಶಸ್ತಿಗಳು, ಒಂದು ಫಿಲ್ಮ್‌ಫೇರ್ ಪ್ರಶಸ್ತಿ ಸೌತ್ ಮತ್ತು ಅನೇಕ ಇತರ ಪ್ರಶಸ್ತಿಗಳನ್ನು ಪಡೆದಿದ್ದಾರೆ.

ನಟನೆಗೆ ಪಾದಾರ್ಪಣೆ ಮಾಡುವ ಮೊದಲು, ಬ್ರಹ್ಮಾನಂದಂ ಅವರು ತಮ್ಮ ಮಾಸ್ಟರ್ ಆಫ್ ಆರ್ಟ್ಸ್ ಪದವಿಯನ್ನು ಪೂರ್ಣಗೊಳಿಸಿದರು ಮತ್ತು ಪಶ್ಚಿಮ ಗೋದಾವರಿ ಜಿಲ್ಲೆಯ ಅತ್ತಿಲಿಯಲ್ಲಿ ತೆಲುಗು ಉಪನ್ಯಾಸಕರಾಗಿ ಸೇರಿಕೊಂಡರು. 

ಬ್ರಹ್ಮಾನಂದಂ ಅವರು ತೆಲುಗು ಚಿತ್ರರಂಗದಲ್ಲಿ ತಮ್ಮ ಕೆಲಸಕ್ಕಾಗಿ ಹೆಸರುವಾಸಿಯಾಗಿದ್ದಾರೆ. ಅವರು ವಿಶೇಷವಾಗಿ ತಮ್ಮ ಕಾಮಿಕ್ ಪಾತ್ರಗಳಿಗೆ ಹೆಸರುವಾಸಿಯಾಗಿದ್ದಾರೆ.

ಇಲ್ಲಿಯವರೆಗೆ 1000 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸುವ ಮೂಲಕ  ಅತಿ ಹೆಚ್ಚು ಸ್ಕ್ರೀನ್ ಕ್ರೆಡಿಟ್‌ಗಳಿಗಾಗಿ ಬ್ರಹ್ಮಾನಂದಂ ಅವರ ಹೆಸರು ಗಿನ್ನೆಸ್ ವರ್ಲ್ಡ್ ರೆಕಾರ್ಡ್‌ನಲ್ಲಿ ದಾಖಲಾಗಿದೆ. ಅವರ ವೃತ್ತಿಜೀವನದಲ್ಲಿ ಹಲವಾರು ಚಿತ್ರಗಳಲ್ಲಿ ಕೆಲಸ ಮಾಡಿದ ವಿಶ್ವದ ಏಕೈಕ ನಟ.

67 ವರ್ಷದ ಬ್ರಹ್ಮಾನಂದಂ ಭಾರತದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಹಾಸ್ಯನಟರಲ್ಲಿ ಒಬ್ಬರು. ವರದಿಗಳ ಪ್ರಕಾರ, ಬ್ರಹ್ಮಾನಂದಂ ಅವರ ನಿವ್ವಳ ಮೌಲ್ಯ 367 ಕೋಟಿ ರೂಪಾಯಿಗಳು ಮತ್ತು ಅವರು ಪ್ರತಿ ಚಿತ್ರಕ್ಕೆ 1 ಕೋಟಿ ರೂಪಾಯಿ ಚಾರ್ಜ್ ಮಾಡುತ್ತಾರೆ.

ಬ್ರಹ್ಮಾನಂದಂ 1985 ರಲ್ಲಿ ಡಿಡಿ ತೆಲುಗಿನ ಪಕ್ಪಕಾಲು ಮೂಲಕ ದೂರದರ್ಶನಕ್ಕೆ ಪಾದಾರ್ಪಣೆ ಮಾಡಿದರು. ಪ್ರದರ್ಶನದಲ್ಲಿ ಅವರ ಅಭಿನಯವನ್ನು ನೋಡಿದ ನಂತರ, ನಿರ್ದೇಶಕ ಜಂಧ್ಯಾಲ ಅವರನ್ನು 1987 ರಲ್ಲಿ ಅಹಾ ನಾ ಪೆಲಾಂಟಾ ಚಿತ್ರದಲ್ಲಿ ನಟಿಸಿದರು. ಆ ನಂತರ ಸಾಲು ಸಾಲು ಚಿತ್ರಗಳಲ್ಲಿ ನಟಿಸುತ್ತಾ ಬಂದರು. 

click me!