ಅಬ್ಬಾ.. ಏನ್‌ ಡ್ರೆಸ್‌ ಸೆನ್ಸ್‌: ಕಿಯಾರಾ ಬೋಲ್ಡ್‌ ಲುಕ್‌ಗೆ ಫ್ಯಾನ್ಸ್ ಫಿದಾ..!

ತಮ್ಮ ಬಹುಕಾಲದ ಬಾಯ್‌ಫ್ರೆಂಡ್‌ ಹಾಗೂ ನಟ ಸಿದ್ಧಾರ್ಥ್‌ ಮಲ್ಹೋತ್ರಾ ಅವರನ್ನು ಮದುವೆಯಾಗಿದ್ರೂ ಸಾಮಾಜಿಕ ಜಾಲತಾಣಗಳಲ್ಲಿ ಈಗಲೂ ಸಹ ತಮ್ ಬೋಲ್ಡ್‌ ಲುಕ್‌, ಮೈಮಾಟದಿಂದ ಕಿಯಾರಾ ಅಡ್ವಾಣಿ ಮಿಂಚುತ್ತಿರುತ್ತಾರೆ.

ಬಾಲಿವುಡ್‌ನ ಇತ್ತೀಚಿನ ಟಾಪ್ ಹಾಗೂ ಹಾಟ್‌ ನಟಿಯರಲ್ಲಿ ಕಿಯಾರಾ ಅಡ್ವಾಣಿ ಕೂಡ ಒಬ್ಬರು. ಇವರು ತಮ್ಮ ಬಹುಕಾಲದ ಬಾಯ್‌ಫ್ರೆಂಡ್‌ ಹಾಗೂ ನಟ ಸಿದ್ಧಾರ್ಥ್‌ ಮಲ್ಹೋತ್ರಾ ಅವರನ್ನು ಮದುವೆಯಾಗಿದ್ರೂ ಸಾಮಾಜಿಕ ಜಾಲತಾಣಗಳಲ್ಲಿ ಈಗಲೂ ಸಹ ತಮ್ ಬೋಲ್ಡ್‌ ಲುಕ್‌, ಮೈಮಾಟದಿಂದ ಮಿಂಚುತ್ತಿರುತ್ತಾರೆ. ಇವರ ಇತ್ತೀಚಿನ ಉಡುಗೆಗಳು ಪಡ್ಡೆ ಹುಡುಗರು ಮಾತ್ರವಲ್ಲ ಫ್ಯಾಷನ್‌ ಪ್ರಿಯರನ್ನೂ ನಾಚಿಸುತ್ತಿದೆ.

ನಟಿ ಕಿಯಾರಾ ಅಡ್ವಾಣಿ ಇತ್ತೀಚೆಗೆ ಹಲವು ಬಣ್ಣಗಳ ಕಲರ್‌ ಪಾಪ್‌ ಡ್ರೆಸ್‌ನಲ್ಲಿ ಮಿಂಚಿದ್ದರು. ತಮ್ಮ ಟೋನ್ಡ್‌ ಬಾಡಿಗೆ ಸರಿಹೊಂದುವಂತಹ ಈ ಲುಕ್‌ನಲ್ಲಿ ನಟಿ ಸಿಕ್ಕಾಪಟ್ಟೆ ಸುಂದರವಾಗಿ ಕಾಣ್ತಿದ್ದರು.


ಕಪ್ಪು ಬಣ್ಣದ ಹೈ ಸ್ಲಿಟ್‌ ಡ್ರೆಸ್‌ನಲ್ಲಿ ಸಹ ಇತ್ತೀಚೆಗೆ ಕಾಣಿಸಿಕೊಂಡಿದ್ದ ನಟಿ ಪಡ್ಡೆ ಹುಡುಗರ ಪಾಲಿಗೆ ಮಾತ್ರವಲ್ಲ ಫ್ಯಾಷನ್‌ ಪ್ರಿಯರನ್ನೂ ರಂಜಿಸಿದ್ದರು. 

ಕಿಯಾರಾ ಅಡ್ವಾಣಿ ತನ್ನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಮಾದಕ ಕಪ್ಪು ಉಡುಪಿನಲ್ಲಿ ತನ್ನ ದೇಹದ ಸೌಂದರ್ಯವನ್ನು  ಪ್ರದರ್ಶಿಸುವ ಕೆಲವು ಚಿತ್ರಗಳನ್ನು ಪೋಸ್ಟ್ ಮಾಡಿದ್ದರು.

ತನ್ನ ಹುಟ್ಟುಹಬ್ಬದ ದಿನವೂ ನಟಿ ಕಿಯಾರಾ ಅಡ್ವಾಣಿ ಮಾನೋಕಿನಿ ಡ್ರೆಸ್‌ನಲ್ಲಿ ಸಖತ್ ಗ್ಲ್ಯಾಮ್‌ ಆಗಿ ಕಾಣುತ್ತಿದ್ರು. ಸಾಮಾಜಿಕ ಜಾಲತಾಣದಲ್ಲಿ ಈ ಪೋಸ್ಟ್ ನಿಜಕ್ಕೂ ನಟಿಯ ಅಭಿಮಾನಿಗಳಿಗೆ ಇಷ್ಟ ಆಗುವಂತೆ ಮಾಡಿದೆ. 

ಇತ್ತೀಚೆಗೆ ಬಾಲಿವುಡ್‌ ನಿರ್ಮಾಪಕರೊಬ್ಬರ ಬತ್ಡೇ ಪಾರ್ಟಿಗೆ ನಟಿ ಕಿಯಾರಾ ಹಾಗೂ ಸಿದ್ಧಾರ್ಥ್‌ ಮಲ್ಹೋತ್ರಾ ಜತೆಯಾಗಿ ಹೋಗಿದ್ರು. ಈ ವೇಳೆ, ಹಾಟ್‌ ನಟಿಯ ಫ್ಲೋರಲ್‌ ಪ್ರಿಂಟ್‌ ಡ್ರೆಸ್‌ ಹಲವರ ಗಮನ ಸೆಳೆದಿದೆ. 

ದೆಹಲಿಯಲ್ಲಿ ಇತ್ತೀಚೆಗೆ ನಟಿ ಕಿಯಾರಾ ಅಡ್ವಾಣಿ ರ‍್ಯಾಂಪ್‌ ವಾಕ್‌ನಲ್ಲಿ ಮಿಂಚಿದ್ದರು. ಈ ವೇಳೆ ಅವರು ಧರಿಸಿದ್ದ ಪಿಂಕ್‌ ಡ್ರೆಸ್‌ ರಸಿಕರ ಗಮನ ಸೆಳೆದಿದೆ.

ಇತ್ತೀಚೆಗೆ ಹಾಲಿವುಡ್‌ನಲ್ಲಿ ಬಾರ್ಬಿ ಚಿತ್ರ ಬಿಡುಗಡೆಯಾಗಿ ಜಗತ್ತಿನ ಗಮನ ಸೆಳೆಯಿತು. ಆದರೆ, ಇಲ್ನೋಡಿ. ಬಾರತದ ಬಾರ್ಬಿ ಡಾಲ್ ಕಿಯಾರಾ ನಾನು ಯಾರಿಗಿಂತಲೂ ಕಮ್ಮಿ ಅಲ್ಲ ಎನ್ನುವಂತಿದೆ ಈ ಲುಕ್.

Latest Videos

click me!