ಪಾರ್ಟಿಗೆ ಅಮ್ಮನ ಹಳೆ ಡ್ರೆಸ್‌ ಧರಿಸಿದ ಸುಹಾನಾ ಖಾನ್‌: ಸೆಲೆಬ್ರೆಟಿಗಳೂ ಹಳೆ ಬಟ್ಟೆ ಇಟ್ಕೋತಾರಾ ಎಂದ ನೆಟ್ಟಿಗ್ಗರು!

First Published | Mar 31, 2023, 7:10 PM IST

ಶಾರುಖ್‌ ಖಾನ್‌ (Shah Rukh Khan)  ಪುತ್ರಿ ಸುಹಾನ್‌ ಖಾನ್‌ (Suhana Khan) ಪ್ರಚಾರದಲ್ಲಿರುವ ಯಾವುದೇ ಅವಕಾಶ ಬಿಡುವುದಿಲ್ಲ. ಈಗ ಮತ್ತೆ ಸುಹಾನಾ ಸುದ್ದಿಯಲ್ಲಿದ್ದಾರೆ.ಇದಕ್ಕೆ ಕಾರಣ ಕೇಳಿದರೆ ಆಶ್ಚರ್ಯ ಆಗುತ್ತದೆ. ಈ ಅಬರಿ ಸುಹಾನ ತಾಯಿಯ ಹಳೆ ಡ್ರೆಸ್‌ವೊಂದನ್ನು ಧರಿಸಿ ಗಮನ ಸೆಳೆದಿದ್ದಾರೆ.

ಸುಹಾನಾ ಖಾನ್ ಇತ್ತೀಚೆಗೆ ಮುಂಬೈನಲ್ಲಿ ಪಾರ್ಟಿಯಲ್ಲಿ ಭಾಗವಹಿಸಿದ್ದರು, ಆ ಸಮಯದ ಫೋಟೋಗಳನ್ನು  ಬುಧವಾರ ತಮ್ಮ ಸಾಮಾಜಿಕ ಮಾಧ್ಯಮದಲ್ಲಿ   ಪೋಸ್ಟ್ ಮಾಡಿದ್ದಾರೆ. 

ಪಾರ್ಟಿಯಲ್ಲಿ ಶಾರುಖ್ ಖಾನ್ ಅವರ ಪುತ್ರಿ ಸುಹಾನಾ ಅವರು ಗಾಢ ಬಣ್ಣದ ಪ್ರಿಂಟೆಡ್ ಡಿಸೈನರ್ ಟಾಪ್ ಧರಿಸಿದ್ದರು. ಆಕೆಯ  ಪೋಸ್ಟ್ ನೋಡಿದ ತಕ್ಷಣ ಸುಹಾನಾ ಧರಿಸರುವ ಡ್ರೆಸ್‌ ಹೊಸದಲ್ಲ ಎಂದು ಗಮನಿಸಿದರು.

Tap to resize

ಕೆಲವು ಅಭಿಮಾನಿಗಳು ಸುಹಾನಾ ಅವರ ತಾಯಿ ಮತ್ತು ಶಾರುಖ್ ಅವರ ಪತ್ನಿ ಗೌರಿ ಖಾನ್ ಸುಮಾರು 10 ವರ್ಷಗಳ ಹಿಂದಿನ ಪಾರ್ಟಿಯಲ್ಲಿ ಇದೇ ಟಾಪ್ ಧರಿಸಿರುವ ಥ್ರೋಬ್ಯಾಕ್ ಚಿತ್ರವನ್ನು ಪೋಸ್ಟ್ ಮಾಡಿದ್ದಾರೆ.

ಅನೇಕರು ಗೌರಿ ಮತ್ತು ಸುಹಾನಾ ಅವರ ಅಕ್ಕಪಕ್ಕದಲ್ಲಿರುವ ಫೋಟೋಗಳ ಕೋಲಾಜ್‌ ಸಹ ಹಂಚಿಕೊಂಡು, ಸಾಮಾನ್ಯ ಜನರಂತೆ, ಸೆಲೆಬ್ರಿಟಿಗಳು ಕೂಡ ತಮ್ಮ ಬಟ್ಟೆಗಳನ್ನು ಇಷ್ಟು ಸಮಯದವರೆಗೆ ಇಟ್ಟುಕೊಳ್ಳುತ್ತಾರೆ ಎಂದು ಇತರರು ಆಶ್ಚರ್ಯಪಟ್ಟರು.

'ಏನು? ಸೆಲೆಬ್ರಿಟಿಗಳು ನಿಜವಾಗಿಯೂ ತಮ್ಮ ಬಟ್ಟೆಗಳನ್ನು ಇಷ್ಟು ಸಮಯದವರೆಗೆ ಇಟ್ಟುಕೊಳ್ಳುತ್ತಾರೆಯೇ' ಎಂದು ಅಭಿಮಾನಿಯೊಬ್ಬರು  ಎರಡು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಈ 'ಸುಸ್ಥಿರ' ಫ್ಯಾಷನ್ ಆಯ್ಕೆಗಾಗಿ ಅನೇಕ ಅಭಿಮಾನಿಗಳು ಸುಹಾನಾ ಮತ್ತು ಗೌರಿಯನ್ನು ಹೊಗಳಿದರು. 

ಈ ಜೀವನಶೈಲಿಯನ್ನು ಸಂಪೂರ್ಣವಾಗಿ ಇಷ್ಟಪಡುತ್ತೇನೆ. ಇದು ಪರಿಸರಕ್ಕೆ ಮತ್ತು ವ್ಯಕ್ತಿತ್ವಕ್ಕೆ ಒಳ್ಳೆಯದು' ಎಂದು ಇನ್ನೊಬ್ಬರು ಬರೆದಿದ್ದಾರೆ,

22 ವರ್ಷದ ಸುಹಾನಾ ಖಾನ್ ತನ್ನ ತಂದೆಯ ಹೆಜ್ಜೆಗಳನ್ನು ಅನುಸರಿಸಿ ಈ ವರ್ಷ ಜೋಯಾ ಅಖ್ತರ್ ಅವರ ದಿ ಆರ್ಚೀಸ್ ಮೂಲಕ ಚಿತ್ರರಂಗಕ್ಕೆ ಪ್ರವೇಶಿಸಲು ಸಿದ್ಧರಾಗಿದ್ದಾರೆ.
 

 ಆರ್ಚಿ ಕಾಮಿಕ್ಸ್‌ನ ಕಥೆಗಳ ರೂಪಾಂತರವಾಗಿರುವ ಈ ಚಿತ್ರದಲ್ಲಿ ಅಮಿತಾಬ್ ಬಚ್ಚನ್ ಅವರ ಮೊಮ್ಮಗ ಅಗಸ್ತ್ಯ ನಂದಾ ಮತ್ತು ಶ್ರೀದೇವಿ ಮತ್ತು ಬೋನಿ ಕಪೂರ್ ಅವರ ಕಿರಿಯ ಮಗಳು ಖುಷಿ ಕಪೂರ್ ಕೂಡ ನಟಿಸಿದ್ದಾರೆ. ಇದು ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಲಿದೆ.

Latest Videos

click me!