ಸ್ಟಾರ್‌ಕಿಡ್ಸ್‌ ಲೇಟ್‌ ನೈಟ್‌ ಪಾರ್ಟಿ ಫೋಟೋ: ನಶೆಯಲ್ಲಿ ಅಜಯ್‌ ದೇವಗನ್‌ ಪುತ್ರಿ!

First Published Feb 13, 2023, 5:53 PM IST

ಭಾನುವಾರ ರಾತ್ರಿ ಅಂದರೆ ಫೆಬ್ರವರಿ 12ರಂದು ಕಿಯಾರಾ ಅಡ್ವಾಣಿ ಮತ್ತು ಸಿದ್ಧಾರ್ಥ್ ಮಲ್ಹೋತ್ರಾ ಅವರ ಮದುವೆಯ ಆರತಕ್ಷತೆ ನಡೆಯುತ್ತಿದ್ದರೆ, ಇನ್ನೊಂದೆಡೆ ಬಾಲಿವುಡ್‌ನ ಸ್ಟಾರ್ ಮಕ್ಕಳು ಪಾರ್ಟಿಯಲ್ಲಿ ತೇಲಾಡುತ್ತಿದ್ದರು. ಶಾರುಖ್ ಖಾನ್ ಅವರ ಮಗಳು ಬೋಲ್ಡ್ ಲುಕ್‌ನಲ್ಲಿ ಕಂಡುಬಂದರೆ, ಅಜಯ್ ದೇವಗನ್ ಅವರ ಮಗಳು ನೈಸಾ ಓವರ್ ಮೇಕಪ್‌ನಲ್ಲಿ ಕಾಣಿಸಿಕೊಂಡಿದ್ದಾರೆ.  ಸ್ಟಾರ್‌ಕಿಡ್ಸ್‌ ಪಾರ್ಟಿಯ ಪೋಟೋಗಳು ಸಖತ್‌ ವೈರಲ್‌ ಆಗಿವೆ.
 

ಸುಹಾನಾ ಖಾನ್, ನೈಸಾ ದೇವಗನ್, ಅಲಯಾ ಎಫ್ ಮತ್ತು ಬಾಲಿವುಡ್‌ನ ಇತರ ಕೆಲವು ಜನಪ್ರಿಯ ಸ್ಟಾರ್ ಮಕ್ಕಳು ಮತ್ತು ಯುವ ನಟಿಯರು ಭಾನುವಾರ ರಾತ್ರಿ ಮುಂಬೈನ ಪ್ರಸಿದ್ಧ ರೆಸ್ಟೋರೆಂಟ್‌ನಲ್ಲಿ ಕಾಣಿಸಿಕೊಂಡರು

ಲೇಟ್ ನೈಟ್ ಪಾರ್ಟಿಯಲ್ಲಿ ಸುಹಾನಾ ಖಾನ್ ವೈಟ್ ಆಫ್ ಶೋಲ್ಡರ್ ಶಾರ್ಟ್ ಡ್ರೆಸ್ ನಲ್ಲಿ ಕಾಣಿಸಿಕೊಂಡಿದ್ದಾರೆ. ನೈಸಾ ದೇವಗನ್ ಗುಲಾಬಿ ಬಣ್ಣದ ಶಾರ್ಟ್ ಫ್ರಾಕ್ ಧರಿಸಿ ಕಾಣಿಸಿಕೊಂಡಿದ್ದರು.
 

Latest Videos


ಅಜಯ್‌ ದೇವಗನ್‌ ಕಾಜೋಲ್‌ ಮಗಳು ನ್ಯಾಸಾ ದೇವಗನ್‌  ಪಾರ್ಟಿ ಫ್ರೀಕ್‌. ಹೊರಬಿದ್ದ ಫೋಟೋಗಳಲ್ಲಿ  ನ್ಯಾಸಾ ದೇವಗನ್‌ ನಶೆಯಲ್ಲಿರುವಂತೆ ಕಂಡುಬಂದಿದೆ.

ಈ ಸಂದರ್ಭದಲ್ಲಿ ಅಲಯಾ ಎಫ್ ಸಹ ಕಾಣಿಸಿಕೊಂಡರು. ಈ ಸಂದರ್ಭದಲ್ಲಿ ಆಲಯಾ ಬಿಳಿ ಟಾಪ್, ಕಪ್ಪು ಜಾಕೆಟ್ ಮತ್ತು ಪ್ಯಾಂಟ್ ಧರಿಸಿದ್ದರು.

ದಿಶಾ ಪಟಾನಿ ಕೂಡ ಪಾರ್ಟಿಯಲ್ಲಿ ಭಾಗವಹಿಸಿದ್ದು. ಈ ಸಂದರ್ಭದಲ್ಲಿ, ಅವರು ಪ್ರಕಾಶಮಾನವಾದ ನೀಲಿ ಬಣ್ಣದ ಸಣ್ಣ ಉಡುಗೆಯನ್ನು ಎಂದಿನಂತೆ ಸಖತ್‌ ಬೋಲ್ಡ್‌ ಆಗಿ ಕಾಣಿಸಿಕೊಂಡರು.
 

ಈ ಸಂದರ್ಭದಲ್ಲಿ ಶರ್ವರಿ ವಾಘ್ ಮತ್ತು ಇಸಾಬೆಲ್ ಕೈಫ್ ಕೂಡ ಕಂಡುಬಂದರು. ಇದಲ್ಲದೇ ವರುಣ್ ಧವನ್ ಅವರ ಸೊಸೆ ಅಂಜಲಿ ಧವನ್ ಕೂಡ ಕಾಣಿಸಿಕೊಂಡಿದ್ದರು.

ನಟಿ ಶ್ವೇತಾ ತಿವಾರಿ ಪುತ್ರಿ ಪಾಲಕ್ ತಿವಾರಿ ಕೂಡ ಪಾರ್ಟಿಗೆ ಆಗಮಿಸಿದ್ದರು. ತೆರೆದ ಕೂದಲು, ಓವರ್‌ ಮೇಕ್ಅಪ್ ಮತ್ತು ಡೀಪ್‌ ನೇಕ್‌ ಕಪ್ಪು ಹಾಟ್ ಡ್ರೆಸ್‌ನಲ್ಲಿ ಪಾಲಕ್‌ ಕಾಣಿಸಿಕೊಂಡರು.

ಸುಹಾನಾ ಖಾನ್ ಕ್ಯಾಮೆರಾಮನ್‌ಗೆ  ಪೋಸ್ ಕೊಟ್ಟಿದ್ದಾರೆ. ಆಕೆಯ ಬೋಲ್ಡ್ ಮತ್ತು ಸೆಕ್ಸಿ ಫೋಟೋಗಳು ಕೂಡ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ.

ಈ ಪಾರ್ಟಿಯಲ್ಲಿ ಆರ್ಯನ್ ಖಾನ್ ಕೂಡ ಕಾಣಿಸಿಕೊಂಡಿದ್ದರು.ಕಪ್ಪು ಜಾಕೆಟ್ ಮತ್ತು ಕೆಂಪು ಚೆಕ್ ಶರ್ಟ್ ಧರಿಸಿದ್ದ ಆರ್ಯನ್ ಎಂದಿನಂತೆ ಸೀರಿಯಸ್‌ ಮೂಡ್‌ನಲ್ಲಿದ್ದರು.

ಈ ಸಂದರ್ಭದಲ್ಲಿ ಕ್ರಿಕೆಟಿಗ ಶುಬ್ಮನ್‌ ಗಿಲ್ ಕಾಣಿಸಿಕೊಂಡಿದ್ದು ಒಂದು ದೊಡ್ಡ ಸರ್ಪ್ರೈಸ್‌ ಆಗಿದೆ. ಆದರೆ ಈ ದಿನಗಳಲ್ಲಿ  ಶುಬ್ಮನ್‌ ಗಿಲ್ ಹೆಸರು ಸಾರಾ ಆಲಿ ಖಾನ್‌ ಜೊತೆ ಕೇಳಿಬರುತ್ತಿದೆ.

ಬಾಲಿವುಡ್‌ ಸ್ಟಾರ್‌ ಮಕ್ಕಳ ಜೊತೆ ಎಲ್ಲಾ ಪಾರ್ಟಿಗಳಲ್ಲೂ ಕಾಣಿಸಿಕೊಳ್ಳುವ ಒರ್ಹಾನ್ ಅವತ್ರಮಣಿ ಸಹ ಈ ಇವೆಂಟ್‌ನಲ್ಲಿ ಇದ್ದರು. ಈತ ಆಗಾಗ ನ್ಯಾಸಾ ದೇವಗನ್‌ ಪಾರ್ಟಿ ಮಾಡುವ ಫೋಟೋಗಳು ವೈರಲ್‌ ಆಗಿವೆ.

ವರದಿಗಳ ಪ್ರಕಾರ, ಮುಂಬೈನ ವರ್ಲಿಯಲ್ಲಿರುವ ಬಾಸ್ಟಿಯನ್‌ನಲ್ಲಿ ಭಾನುವಾರ ರಾತ್ರಿ ನಡೆದ ಎಂವಿಎಂ ಲಂಡನ್ ಇವೆಂಟ್‌ನಲ್ಲಿ  ಜನಪ್ರಿಯ ಸ್ಟಾರ್ ಕಿಡ್ಸ್‌ ಮತ್ತು ಯುವ ನಟಿಯರು ಭಾಗವಹಿಸಿದ್ದರು.

click me!