ಫೆಬ್ರವರಿ 7ರಂದು ವೈವಾಹಿಕ ಜೀವನಕ್ಕೆ ಕಾಲಿಟ್ಟ ಕಿಯಾರಾ ಅಡ್ವಾನಿ ಮತ್ತು ಸಿದ್ಧಾರ್ಥ್ ಮಲ್ಹೋತ್ರಾ ಫೆಬ್ರವರಿ 12ರಂದು ಮುಂಬೈನ ಸೇಂಟ್ ರೇಜಿಸ್‌ನಲ್ಲಿ ಆರತಕ್ಷತೆ ಹಮ್ಮಿಕೊಂಡಿದ್ದರು.
210
ಆರತಕ್ಷತೆಗೆ ಆಗಮಿಸುವ ಬಿ-ಟೌನ್ ಸೆಲೆಬ್ರಿಟಿಗಳು ಕ್ಯಾಮೆರಾಗೆ ಪೋಸ್ ನೀಡಲು SK ಮೋನೋಗ್ರಾಮ್‌ನ ಫೋಟೋಬೂತ್ ಮಾಡಲಾಗಿತ್ತು. ಗ್ರೀನ್ ಆಂಡ್ ವೈಟ್ ಥೀಮ್ ಅನ್ನಬಹುದು.
310
ಅಂಬಾನಿ ಫ್ಯಾಮಿಲಿ ಆರತಕ್ಷತೆಗೆ ಆಗಮಿಸುವ ಮುನ್ನ ಸೆಕ್ಯೂರಿಟಿ ಗಾರ್ಡ್‌ಗಳ ಶ್ವಾನಗಳ ಜೊತೆ ಆಗಮಿಸಿ ಇಡೀ ಪಾರ್ಟಿ ಹಾಲ್‌ನ ಚೆಕ್ ಮಾಡಿದ್ದರು. ಚೆಕಿಂಗ್ ನಡೆದ ನಂತರವೇ ಅಂಬಾನಿ ಫ್ಯಾಮಿಲಿ ಆಗಮಿಸಿದ್ದು.
410
ಮನೀಶ್ ಮಲ್ಹೋತ್ರಾ ಡಿಸೈನ್ ಮಾಡಿರುವ ಕಪ್ಪು ಸೀರೆಯಲ್ಲಿ ಸಿದ್ಧಾರ್ಥ್ ಅತ್ತಿಗೆ ಪೂರ್ಣಿಮಾ ಕಾಣಿಸಿಕೊಂಡರೆ, ಪಿಂಕ್ ಬಣ್ಣದ ಇಂಡೋ ವೆಸ್ಟ್ರನ್ ಲುಕ್‌ನಲ್ಲಿ ಕಿಯಾರಾ ಸಹೋದರಿ ಇಶಿತಾ ಮಿಂಚಿದ್ದಾರೆ.
510
ಬ್ಲ್ಯಾಕ್ ಸೂಟ್‌ನಲ್ಲಿ ಸಿದ್ಧಾರ್ಥ್ ಮಲ್ಹೋತ್ರಾ ಕಾಣಿಸಿಕೊಂಡರೆ ಸ್ಯಾಟಿನ್ ವೈಟ್ ಆಂಡ್ ಬ್ಲ್ಯಾಕ್ ಲುಕ್‌ನಲ್ಲಿ ಕಿಯಾರಾ ಮಿಂಚಿದ್ದಾರೆ. ನವ ಜೋಡಿಗಳ ಸಿಂಪಲ್ ಲುಕ್ ನೆಟ್ಟಿಗರ ಗಮನ ಸೆಳೆದಿದೆ.
610
ಈ ವೆಸ್ಟ್ರನ್ ಲುಕ್‌ಗೆ ಕಿಯಾರಾ ಕುತ್ತಿಗೆ ತುಂಬಾ ಪಚ್ಚೆ ಸರ ಧರಿಸಿದ್ದಾರೆ. ಮದುವೆಗೂ ಕಿಯಾರಾ Emerald ಧರಿಸಿದ್ದು... ಕೋಟಿ ಬೆಲೆ ಬಾಳುತ್ತದೆ ಎಂದು ಆಭರಣ ಡಿಸೈನರ್‌ಗಳು ಲೆಕ್ಕ ಮಾಡಿದ್ದಾರೆ.
710
ಅಭಿಷೇಕ್ ಬಚ್ಚನ್, ಕಾಜೋಲ್ ಅಗರ್ವಾಲ್, ಅಜಯ್ ದೇವಗನ್, ಆಲಿಯಾ ಭಟ್, ಅಯಾನ್ ಮುಖರ್ಜಿ ಆಗಮಿಸಿದ ನಂತರ ಸಿದ್ಧ- ಕಿಯಾ ಫ್ಯಾಮಿಲಿ ಕ್ಯಾಮೆರಾಗೆ ಪೋಸ್ ನೀಡಿದ್ದಾರೆ.
810
ವಿದ್ಯಾ ಬಾಲನ್, ಇಶಾನ್ ಕಪೂರ್, ಫಿಲ್ಮ್‌ಮೇಕರ್ ರಾಜ್ ಆಂಡ್ ಡಿಕೆ, ಶುಖಾನ್ ಬಾತ್ರ, ಕರೀನಾ ಕಪೂರ್ ಮತ್ತು ಕರಣ್ ಜೋಹಾರ್, ರಾಶಿ ಕನ್ನಾ, ವಿಕ್ಕಿ ಕೌಶಾಲ್, ಆಯುಶ್ಮಾನ್ ಕುರಾನಾ, ತ್ರಿಷಾ ಕಶ್ಯಪ್ ಆಗಮಿಸಿದ್ದರು.
910
ಆಕಾಶ್ ಅಂಬಾರಿ ಮತ್ತು ಶ್ಲೋಕ ಅಂಬಾನಿ ಬ್ಲ್ಯಾಕ್ ಮ್ಯಾಚಿಂಗ್ ಔಟ್‌ಫಿಟ್‌ನಲ್ಲಿ ಕಾಣಿಸಿಕೊಂಡರು. ರುಕಲ್ ಪ್ರೀತ್ ಮತ್ತು ಜಾಕಿ ಬಗ್ನಾನಿ ಒಟ್ಟಿಗೆ ಆಗಮಿಸಿ ನೆಟ್ಟಿಗರ ಗಮನ ಸೆಳೆದಿದ್ದಾರೆ.
1010
ರಣವೀರ್ ಸಿಂಗ್ ಕೆಂಪು ಬಣ್ಣದ ಡಿಸೈನರ್ ಸೂಟ್‌ನಲ್ಲಿ ಮಿಂಚಿದ್ದಾರೆ. ರಣವೀರ್ ಜೊತೆ ಆಗಮಿಸಿದ ಕೃತಿ ಸನೋನ್ ಗೋಲ್ಡ್ ಬಣ್ಣದ ಸೀರಿಯಲ್ಲಿ ಕಾಣಿಸಿಕೊಂಡಿದ್ದಾರೆ. ಇಬ್ಬರು ಒಟ್ಟಿಗೆ ಕಾಣಿಸಿಕೊಂಡಿದ್ದು ಕೊಂಚ ಶಾಕಿಂಗ್ ವಿಚಾರ.