ಸೌತ್‌ ಸಿನಿ ಇಂಡಸ್ಟ್ರಿಯಲ್ಲಿ ಅತೀ ದೊಡ್ಡ ಫ್ಲಾಪ್ ಸಿನಿಮಾ ಮಾಡಿದ ನಟ ಈ ಸೂಪರ್‌ಸ್ಟಾರ್‌!

First Published | Oct 13, 2023, 1:26 PM IST

ದಕ್ಷಿಣಭಾರತದ ಈ ನಟ ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ಮೋಸ್ಟ್ ಹಿಟ್ ಸಿನಿಮಾ ನೀಡಿದ ನಟನೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅಚ್ಚರಿಯ ವಿಷಯ ಅಂದ್ರೆ ಇದೇ ನಟ ದಕ್ಷಿಣಭಾರತದ ಅತೀ ಫ್ಲಾಪ್ ಸಿನಿಮಾ ಮಾಡಿದ್ದಾರೆ. ಕೋಟಿ ಕೋಟಿ ನಷ್ಟಕ್ಕೆ ಕಾರಣವಾಗಿದ್ದಾರೆ. ಯಾರವರು?

ಯಾವುದೇ ಚಿತ್ರವು ಸೂಪರ್‌ಹಿಟ್ ಆಗುತ್ತದೆಯೋ ಅಥವಾ ಫ್ಲಾಪ್ ಆಗುತ್ತದೆಯೋ ಎಂದು ನಿರ್ಧರಿಸುವುದು ಕಷ್ಟ. ಹೀಗಾಗಿ ಬಜೆಟ್ ಚೆನ್ನಾಗಿದ್ದರೂ ಕೆಲವೊಂದು ಸಿನ್ಮಾಗಳು ಬಾಕ್ಸಾಫೀಸಿನಲ್ಲಿ ಮುಗ್ಗರಿಸಿ ಬಿಡುತ್ತವೆ. 2022ರ ಈ ಫ್ಲಾಪ್ ಚಿತ್ರ ದಕ್ಷಿಣ ಭಾರತದ ಚಿತ್ರರಂಗದ ಇತಿಹಾಸದಲ್ಲಿ ಅತೀ ದೊಡ್ಡ ಲಾಸ್ ಮಾಡಿದ ಸಿನಿಮಾವಾಗಿದೆ. ಈ ಸಿನಿಮಾ ಮಾಡಿದ್ದು ಓರ್ವ ಸೂಪರ್‌ಸ್ಟಾರ್‌.

ದಕ್ಷಿಣ ಭಾರತದಲ್ಲಿ ನಾಲ್ಕು ಭಾಷೆಯ ಸಿನಿಮಾಗಳನ್ನು ನೋಡಬಹುದು. ತಮಿಳು, ತೆಲುಗು, ಮಲಯಾಳಂ ಮತ್ತು ಕನ್ನಡ. ಹಲವು ವರ್ಷಗಳ ಹಿಂದೆ ಸಿನಿಮಾ ಅಂದ್ರೆ ಕೇವಲ ಹಿಂದಿ ಚಿತ್ರರಂಗವಷ್ಟೇ ಹೆಚ್ಚು ಫೇಮಸ್ ಆಗಿತ್ತು. ಈಗ ದಕ್ಷಿಣಭಾರತದ ಸಿನಿಮಾಗಳು ಸಹ ಸೂಪರ್‌ಹಿಟ್ ಆಗುತ್ತವೆ. ಬಾಕ್ಸಾಫೀಸಿನಲ್ಲಿ ಕೋಟಿ ಕೋಟಿ ಗಳಿಸುತ್ತವೆ. ಅದಕ್ಕೆ ಇತ್ತೀಚಿನ ವರ್ಷಗಳಲ್ಲಿ ರಿಲೀಸ್ ಆದ ಬಾಹುಬಲಿ, ಕೆಜಿಎಫ್, ಜೈಲರ್ ಅತ್ಯುತ್ತಮ ಉದಾಹರಣೆ.

Latest Videos


ದಕ್ಷಿಣಭಾರತದ ಈ ನಟ ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ಮೋಸ್ಟ್ ಹಿಟ್ ಸಿನಿಮಾ ನೀಡಿದ ನಟನೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇವರು ನಟಿಸಿದ ಅದ್ಭುತ ಸಿನಿಮಾವೊಂದು ಕೇವಲ ದಕ್ಷಿಣ ಭಾರತದಲ್ಲಿ ಮಾತ್ರವಲ್ಲ, ಭಾರತದಾದ್ಯಂತ, ವಿಸ್ವಾದ್ಯಂತ ಜನಮೆಚ್ಚುಗೆಗೆ ಪಾತ್ರವಾಗಿದೆ. ಕೋಟ್ಯಾಂತರ ರೂ. ಗಳಿಕೆ ಮಾಡಿದೆ. ಅಚ್ಚರಿಯ ವಿಷಯ ಅಂದ್ರೆ ಇದೇ ನಟ ದಕ್ಷಿಣಭಾರತದ ಅತೀ ಫ್ಲಾಪ್ ಸಿನಿಮಾ ಮಾಡಿದ್ದಾರೆ. ಕೋಟಿ ಕೋಟಿ ನಷ್ಟಕ್ಕೆ ಕಾರಣವಾಗಿದ್ದಾರೆ.

ಆ ನಟ ಮತ್ಯಾರೂ ಅಲ್ಲ, ಬಾಹುಬಲಿ ಮೂಲಕ ಫೇಮಸ್ ಆದ ನಟ ಪ್ರಭಾಸ್‌. ಪ್ಯಾನ್ ಇಂಡಿಯಾ ಸಿನಿಮಾ ಬಾಹುಬಲಿ ಮೂಲಕ ಬಾಕ್ಸಾಫೀಸ್ ದೋಚಿದ್ದ ಪ್ರಭಾಸ್‌, ರಾಧೆ ಶ್ಯಾಮ್ ಚಿತ್ರದ ಅತಿ ಹೆಚ್ಚು ಲಾಸ್‌ಗೆ ಕಾರಣರಾದರು. 2022ರಲ್ಲಿ, ಪ್ರಭಾಸ್ ಮಹತ್ವಾಕಾಂಕ್ಷೆಯ ರೋಮ್ಯಾಂಟಿಕ್ ಮೂವಿ ರಾಧೆ ಶ್ಯಾಮ್‌ನಲ್ಲಿ ನಟಿಸಿದರು. 

300 ಕೋಟಿ ಬಜೆಟ್‌ನಲ್ಲಿ ತಯಾರಾದ ಚಿತ್ರ ನಿರೀಕ್ಷಿತ ಪ್ರದರ್ಶನ ನೀಡಲಿಲ್ಲ. ವ್ಯಾಪಾರದ ಮೂಲಗಳ ಪ್ರಕಾರ, ಚಿತ್ರವು ವಿಶ್ವಾದ್ಯಂತ 130 ಕೋಟಿ ನಿವ್ವಳ ವ್ಯವಹಾರವನ್ನು ಮಾಡಿದೆ. ಅಂದರೆ ಬರೋಬ್ಬರಿ 170 ಕೋಟಿ ರೂಪಾಯಿಗಳ ನಷ್ಟವನ್ನು ಅನುಭವಿಸಿದೆ.

ಆದಿಪುರುಷ್‌ ಸಹ 225 ಕೋಟಿ ರೂ. ನಷ್ಟಕ್ಕೆ ಕಾರಣವಾಗಿದೆ.  ಆದರೆ ಈ ಸಿನಿಮಾವನ್ನು ಹಿಂದಿ ಚಲನಚಿತ್ರೋದ್ಯಮದ ಜನರು ನಿರ್ದೇಶಿಸಿದ್ದಾರೆ ಮತ್ತು ನಿರ್ಮಿಸಿದ್ದಾರೆ. 

ರಾಧಾ ಕೃಷ್ಣ ಕುಮಾರ್ ನಿರ್ದೇಶನದ 'ರಾಧೆ ಶ್ಯಾಮ್' ಚಿತ್ರವನ್ನು ಹಿಂದಿ ಮತ್ತು ತೆಲುಗಿನಲ್ಲಿ ಏಕಕಾಲದಲ್ಲಿ ಚಿತ್ರೀಕರಿಸಲಾಗಿತ್ತು. ಚಿತ್ರದಲ್ಲಿ ಪ್ರಭಾಸ್ ಮತ್ತು ಪೂಜಾ ಹೆಗ್ಡೆ, ಭಾಗ್ಯಶ್ರೀ, ಕುನಾಲ್ ರಾಯ್ ಕಪೂರ್, ಸತ್ಯರಾಜ್, ಜಗಪತಿ ಬಾಬು, ಕೃಷ್ಣಂ ರಾಜು, ಸಚಿನ್ ಖೇಡೇಕರ್, ಮುರಳಿ ಶರ್ಮಾ ಮತ್ತು ಜಯರಾಮ್ ಪೋಷಕ ಪಾತ್ರಗಳಲ್ಲಿ ನಟಿಸಿದ್ದರು. 

ರಾಧೆ ಶ್ಯಾಮ್ ಹೊರತುಪಡಿಸಿ, ದಕ್ಷಿಣದ ನಾಲ್ಕು ಉದ್ಯಮಗಳು ಇತರ ಕೆಲವು ಪ್ರಮುಖ ಫ್ಲಾಪ್‌ ಸಿನಿಮಾಳನ್ನು ಸಹ ನೀಡಿವೆ. ಚಿರಂಜೀವಿ ಮತ್ತು ರಾಮ್ ಚರಣ್ ಅಭಿನಯದ ಆಚಾರ್ಯ 2021ರಲ್ಲಿ ಸುಮಾರು 80 ಕೋಟಿ ರೂಪಾಯಿಗಳಷ್ಟು ನಷ್ಟವನ್ನು ಅನುಭವಿಸಿದರೆ, ಉಪೇಂದ್ರ ಅವರ ಕನ್ನಡದ ದೊಡ್ಡ ಬಜೆಟ್ ಸಿನಿಮಾ 'ಕಬ್ಜಾ' ಕೂಡ ಅದೇ ಪ್ರಮಾಣದ ಹಣವನ್ನು ಕಳೆದುಕೊಂಡಿತು. ರಜನಿಕಾಂತ್ ಅವರ ಲಿಂಗಾ ಸುಮಾರು 40-50 ಕೋಟಿ ರೂಪಾಯಿಗಳನ್ನು ಕಳೆದುಕೊಂಡಿದೆ ಎಂದು ವರದಿಯಾಗಿದೆ.

click me!