ಸಿಂಪಲ್ ಲುಕ್​ನಲ್ಲೂ ಶ್ರೀಲೀಲಾ ಬ್ಯೂಟಿಫುಲ್: ಸ್ಯಾಂಡಲ್‌ವುಡ್‌ನ ಮರಿಬೇಡಿ ಅನ್ನೋದಾ ಫ್ಯಾನ್ಸ್‌!

Published : Oct 13, 2023, 01:00 AM IST

ಕನ್ನಡದ ಉದಯೋನ್ಮುಖ ನಟಿ ಮುದ್ದುಮುಖದ ಚೆಲುವೆ ಶ್ರೀಲೀಲಾ ಕನ್ನಡದಲ್ಲಿ ಬೆರಳೆಣಿಕೆಯಷ್ಟು ಸಿನಿಮಾಗಳನ್ನು ಮಾತ್ರ ಮಾಡಿದ್ದಾರೆ. ಆದರೆ ಅದೇ ಸಿನಿಮಾಗಳಿಂದ ಸಾಕಷ್ಟು ಅಭಿಮಾನಿಗಳನ್ನು ಗಳಿಸಿದ್ದಾರೆ. 

PREV
17
ಸಿಂಪಲ್ ಲುಕ್​ನಲ್ಲೂ ಶ್ರೀಲೀಲಾ ಬ್ಯೂಟಿಫುಲ್: ಸ್ಯಾಂಡಲ್‌ವುಡ್‌ನ ಮರಿಬೇಡಿ ಅನ್ನೋದಾ ಫ್ಯಾನ್ಸ್‌!

ಶ್ರೀಲೀಲಾ ಟಾಲಿವುಡ್‌ನಲ್ಲಿ ಬಹುಬೇಡಿಕೆಯ ನಟಿಯಾಗಿ ಹೊರಹೊಮ್ಮಿದ್ದಾರೆ. ಇನ್ನು ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುವ ಈ ನಟಿ ಇದೀಗ ತಮ್ಮ ಸೌಂದರ್ಯ ಪ್ರದರ್ಶನದ ಪೋಟೋಗಳನ್ನು ಶೇರ್‌ ಮಾಡಿಕೊಂಡಿದ್ದಾರೆ. 

27

ಕಿಸ್‌ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿಕೊಟ್ಟ ಶ್ರೀಲೀಲಾ ಟಾಲಿವುಡ್‌ನಲ್ಲಿ ಬಾರಿ ಮೋಡಿ ಮಾಡ್ತಿದ್ದಾರೆ. ಇದೀಗ ಹೊಸ ಫೋಟೋಗಳನ್ನು ಶೇರ್ ಮಾಡುವ ಮೂಲಕ ಮಸ್ತ್ ಆಗಿ ಕಾಣಿಸಿಕೊಂಡಿದ್ದಾರೆ.

37

ಶ್ರೀಲೀಲಾ ಸಲ್ವಾರ್ ಡ್ರೆಸ್‌ನಲ್ಲಿ ಕಾಣಿಸಿಕೊಂಡಿದ್ದು, ಅವರ ನಗುವಿಗೆ ಅಭಿಮಾನಿಗಳು ಮಾರು ಹೋಗಿದ್ದು, ಸೂಪರ್, ಹಾಟ್, ನೈಸ್ ಸ್ಮೈಲ್, ಕ್ಯೂಟಿ, ಕನ್ನಡದಲ್ಲಿ ಯಾವಾಗ ಸಿನಿಮಾ ಮಾಡ್ತೀರಾ, ಸ್ಯಾಂಡಲ್‌ವುಡ್‌ನ ಮರಿಬೇಡಿ, ಅಂತೆಲ್ಲಾ ಕಾಮೆಂಟ್‌ ಮಾಡಿದ್ದಾರೆ.

47

ಅತ್ಯಂತ ಕಿರಿ ವಯಸ್ಸಿನಲ್ಲೇ ಸಿನಿಮಾ ರಂಗದಲ್ಲಿ ಸಾಧನೆ ಮಾಡಿರುವ ಪ್ರತಿಭೆ ಶ್ರೀಲೀಲಾ. ವಯಸ್ಸು ಕೇವಲ 22. ಆದರೆ ಸಾಧನೆ ಮಾತ್ರ ಸೂಪರ್​. ಹಿಟ್​ ಫ್ಲಾಪ್​ ಅನ್ನು ಲೆಕ್ಕಿಸದೇ ಸಿಗುವ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಇಷ್ಟು ಕಿರಿ ವಯಸ್ಸಿನಲ್ಲೇ ಸಾಲು ಸಾಲು ಆಫರ್​ಗಳನ್ನು ಪಡೆಯುತ್ತಿದ್ದಾರೆ. 

57

ಹೊಸ ನಟರಿಂದ ಹಿಡಿದು ಸ್ಟಾರ್ ನಟರವರೆಗೂ ಶ್ರೀಲೀಲಾ ಸ್ಕ್ರೀನ್​ ಶೇರ್ ಮಾಡುತ್ತಿದ್ದಾರೆ. ಸದ್ಯ ಶ್ರೀಲೀಲಾ ಕೈಯಲ್ಲಿ 10ಕ್ಕೂ ಹೆಚ್ಚು ಚಿತ್ರಗಳಿವೆ. ಹೀಗೆ ನಿರಂತರವಾಗಿ ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ನಟಿ ಶ್ರೀಲೀಲಾ ಸೋಷಿಯಲ್​ ಮೀಡಿಯಾದಲ್ಲೂ ಸಕ್ರಿಯ. 

67

ಶ್ರೀಲೀಲಾ ಸಿನಿಮಾದ ವಿಚಾರಕ್ಕೆ ಬಂದರೆ ನಟಿಗೆ ಮತ್ತೊಂದು ಅವಕಾಶ ಸಿಕ್ಕಿದೆಯಂತೆ. ಇನ್ನು ಸಿನಿಮಾ ವಿಚಾರಕ್ಕೆ ಬಂದರೆ ಪ್ರಭಾಸ್ ಜೊತೆ ನಟಿಸುವ ಅವಕಾಶ ಶ್ರೀಲೀಲಾಗೆ ಸಿಕ್ಕಿದೆ ಎಂಬ ಮಾಹಿತಿ ಇದೆ. 

77

ಶ್ರೀಲೀಲಾ ಚಿತ್ರರಂಗಕ್ಕೆ ಬಂದಿದ್ದೇ ಆಶ್ಚರ್ಯಕರ ರೀತಿಯಲ್ಲಿ. ‘ಕೆಜಿಎಫ್‌’ ಸಿನಿಮಾದ ಸಿನಿಮಾಟೋಗ್ರಾಫರ್‌ ಭುವನ್‌ ಗೌಡ ಅವರು ನಿರ್ದೇಶಕ ಎ ಪಿ ಅರ್ಜುನ್‌ ಅವರನ್ನು ಒಮ್ಮೆ ಶ್ರೀಲೀಲಾ ಅವರ ಮನೆಗೆ ಕರೆತಂದಿದ್ದರು. ಅಲ್ಲಿ ಅರ್ಜುನ್‌, ಶ್ರೀಲೀಲಾರನ್ನು ನೋಡಿ ತಮ್ಮ ಸಿನಿಮಾಗೆ ಆಯ್ಕೆ ಮಾಡಿಕೊಂಡರು.

Read more Photos on
click me!

Recommended Stories