ಸೋನಂ ಕಪೂರ್ ಅವರ ಕ್ಯಾನೆಸ್ ರೆಡ್ ಕಾರ್ಪೆಟ್ ಕ್ಷಣಗಳಿಂದ ಹಿಡಿದು ಆಕೆಯ ಹೆರಿಗೆ ಬಟ್ಟೆವರೆಗಿನ ಫ್ಯಾಷನ್ ಹಿಂದೆ ತಂಗಿ ರಿಯಾ ಕಪೂರ್ ಅವರ ಕೈ ಚಳಕವಿದೆ.
ಈ ಮತ್ತೊಮ್ಮೆ ಅದೇ ರೀತಿಯ ಸ್ಟೈಲ್‌ನೊಂದಿಗೆ ಸೋನಂ ಪೋಸ್ ನೀಡಿದ್ದಾರೆ. ಇತ್ತೀಚಿನ ಪೋಟೋಶೂಟ್‌ವೊಂದರ ಕೆಲವು ಫೋಟೋಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ನಟಿ ಹಂಚಿಕೊಂಡಿದ್ದಾರೆ
ಹಂಚಿಕೊಂಡ ಫೋಟೋಗಳ ಸೆಟ್‌ನಲ್ಲಿ, ಸೋನಮ್ ಸಾಕ್ಷಾ ಮತ್ತು ಕಿನ್ನಿ ಅವರ ಡ್ರೆಸ್, ನೈಕ್ ಶೂಗಳು ಮತ್ತು ಕೆಲವು ಭಾರತೀಯ ಆಭರಣಗಳನ್ನು ಧರಿಸಿದ್ದಾರೆ.
ಬಾಲಿವುಡ್‌ನ ಹಲವು ಸೆಲಬ್ರೆಟಿಗಳು ಸೋನಂ ಅವರ ಫೋಟೋಗೆ ರಿಯಾಕ್ಟ್ ಮಾಡಿದ್ದಾರೆ. ಈ ಪಟ್ಟಿಯಲ್ಲಿ ಅವರ ತಂದೆ ಅನಿಲ್ ಕಪೂರ್, ಸೋನಂ ಅವರ ಪತಿ, ಉದ್ಯಮಿ ಆನಂದ್ ಅಹುಜಾ ಚಲನಚಿತ್ರ ನಿರ್ಮಾಪಕಿ ಫರಾಹ್ ಖಾನ್ ಸೋಫಿ ಚೌದ್ರಿ ಮುಂತಾದವರು ಸೇರಿದ್ದಾರೆ
ಕಳೆದ ವರ್ಷ ತಾಯಿಯಾದ ಸೋನಂ ಕಪೂರ್ ತನ್ನ ಪುಟ್ಟ ಮಗುವಿನೊಂದಿಗೆ ಫೋಟೋಗಳು ಮತ್ತು ವೀಡಿಯೊಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ, ಸೋನಂ ಲಂಡನ್‌ನಲ್ಲಿ ತನ್ನ ಪತಿ ಆನಂದ್ ಮತ್ತು ಮಗ ವಾಯು ಜೊತೆಗಿನ ಫೋಟೋವನ್ನು ಹಂಚಿಕೊಂಡಿದ್ದಾರೆ.
ಸೋನಮ್ ಕಪೂರ್ ಕೊನೆಯದಾಗಿ ನೆಟ್‌ಫ್ಲಿಕ್ಸ್‌ನ ಥ್ರಿಲ್ಲರ್ AK vs AK ನಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಅವರ ತಂದೆ ಅನಿಲ್ ಕಪೂರ್ ಮತ್ತು ಚಲನಚಿತ್ರ ನಿರ್ಮಾಪಕ ಅನುರಾಗ್ ಕಶ್ಯಪ್ ಅವರೂ ಈ ಸೀರಿಸ್‌ನಲ್ಲಿ ಕಾಣಿಸಿಕೊಂಡಿದ್ದರು.
ಆಕೆಯ ಕೊನೆಯ ಪೂರ್ಣ ಪ್ರಮಾಣದ ಪಾತ್ರ 2019ರಲ್ಲಿ ದಿ ಜೋಯಾ ಫ್ಯಾಕ್ಟರ್ ಚಿತ್ರದಲ್ಲಿ ದುಲ್ಕರ್ ಸಲ್ಮಾನ್ ಮತ್ತು ಅಂಗದ್ ಬೇಡಿ ಸಹ-ನಟರಾಗಿದ್ದರು. ಶೋಮ್ ಮಖಿಜಾ ಅವರ ಬ್ಲೈಂಡ್ ಚಿತ್ರದಲ್ಲಿ ಅವರು ಬರುವ ದಿನಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.