ಸಮಂತಾ ರುತ್ ಪ್ರಭು ಪುತ್ರನಾಗಿ ಶಾಕುಂತಲಂ ಸಿನಿಮಾದಲ್ಲಿ ಅಲ್ಲು ಅರ್ಜುನ್ ಮಗಳು ಅಲ್ಲು ಅರ್ಹಾ ಅಭಿನಯಿಸಿದ್ದಾಳೆ. ಅರ್ಹಾ ಸೆಟ್‌ನಲ್ಲಿ ಹೇಗಿರುತ್ತಿದ್ದಳು ಎಂದು ಸ್ಯಾಮ್ ಹೇಳಿದ್ದಾರೆ.
ಶಾಕುತಲಂ ಸಿನಿಮಾದಲ್ಲಿ ಅಲ್ಲು ಅರ್ಹಾ ನನ್ನ ಮಗನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾಳೆ. ನೋಡಲು ತುಂಬಾ ಮುದ್ದಾಗಿದ್ದಾಳೆ. ಸೆಟ್‌ನಲ್ಲಿ ಪ್ರತಿಯೊಬ್ಬರಿಗೂ ಅರ್ಹಾ ಅಂದ್ರೆ ತುಂಬಾನೇ ಇಷ್ಟ ಎಂದು ಪಿಂಕ್‌ವಿಲ್ಲ ಸಂದರ್ಶನದಲ್ಲಿ ಮಾತನಾಡಿದ್ದಾರೆ
ಒಂದು ಸಣ್ಣ ಪದ ಕೂಡ ಇಂಗ್ಲಿಷ್‌ನಲ್ಲಿ ಅರ್ಹಾ ಮಾತನಾಡುವುದಿಲ್ಲ ಅದ್ಭುತವಾಗಿ ತೆಲುಗು ಮಾತನಾಡುತ್ತಾಳೆ. ಹೈದರಾಬಾದ್‌ನಲ್ಲಿರುವ ಹಳೆ ತಲೆಗಳಿಗಿಂತ ಚೆನ್ನಾಗಿ ತೆಲುಗು ಮಾತನಾಡುತ್ತಾಳೆ ಅಷ್ಟು ಸ್ಪಷ್ಟವಾಗಿರುವ ತೆಲುಗು ಭಾಷೆಯನ್ನು ಮಾತನಾಡುತ್ತಾಳೆ ಆಕೆಯಿಂದ ನಾನು ತುಂಬಾ ಕಲಿಯಬೇಕು ಎಂದು ಸ್ಯಾಮ್ ಹೇಳಿದ್ದಾರೆ.
ಮೊದಲ ದಿನದ ಚಿತ್ರೀಕರಣ ನಂತರ ನಾನೊಂದು ಟ್ವೀಟ್ ಮಾಡಿದ ಅರ್ಹಾ ದೊಡ್ಡ ಸೂಪರ್ ಸ್ಟಾರ್ ಆಗುತ್ತಾಳೆ ನಮ್ಮ ಸೆಟ್‌ನಲ್ಲಿದ್ದಾಳೆ ಎಂದು. ಸೆಟ್‌ನಲ್ಲಿ ಅಪ್ಪ ಬೇಕು ಅಮ್ಮ ಬೇಕು ಎಂದು ಹಠ ಮಾಡುವುದಿಲ್ಲ ತುಂಬಾ ಕೂಲ್ ಆಗಿ ಎಲ್ಲರೊಟ್ಟಿಗೆ ಚೆನ್ನಾಗಿದ್ದು ಅಭಿನಯಿಸಿದ್ದಾಳೆ ಎಂದಿದ್ದಾರೆ ಸ್ಯಾಮ್.
ಎರಡನೇ ದಿನವೇ ಬೆಳಗ್ಗೆ 9 ಗಂಟೆಗೆ ರಾತ್ರಿ 9 ಗಂಟೆವರೆಗೂ ಶೂಟಿಂಗ್ ಮಾಡಿದ್ದಾಳೆ. ಸೆಟ್‌ನಲ್ಲಿ ಸುಮಾರು 200 ಮಂದಿ ಇದ್ದರೂ ಹೆದರಿಕೊಳ್ಳದೆ ಕೂಲ್ ಆಗಿ ಶೂಟ್ ಮಾಡಿದ್ದಾಳೆ ಎಂದು ಸಮಂತಾ ಹೇಳಿದ್ದಾರೆ.
ಅರ್ಹಾ ಮೊದಲ ಸಿನಿಮಾ ಇದಾಗಿದ್ದು ಅಭಿಮಾನಿಗಳಲ್ಲಿ ಹೆಚ್ಚಿನ ನಿರೀಕ್ಷೆ ಇದೆ. ಸೆಟ್‌ನಲ್ಲಿ ಅರ್ಹಾ ಹೇಗಿರುತ್ತಿದ್ದಳು ಎಂದು ಸಣ್ಣ ವಿಡಿಯೋ ಕೂಡ ವೈರಲ್ ಅಗಿತ್ತು.