ಆದಿತ್ಯ ರಾಯ್ ಕಪೂರ್ - ಅನನ್ಯಾ ಪಾಂಡೆ ಮದುವೆ ಫಿಕ್ಸ್; ಕುಟುಂಬದ ಗ್ರೀನ್ ಸಿಗ್ನಲ್ !

First Published | Mar 28, 2023, 4:22 PM IST

ಬಾಲಿವುಡ್‌ನಲ್ಲಿ ಮತ್ತೊಂದು ಮದುವೆಯ ಸಡಗರ ಶುರುವಾಗಲಿದೆ ಎಂಬ ಸುದ್ದಿ ಬರುತ್ತಿದೆ. ವರದಿಗಳನ್ನು ನಂಬುವುದಾದರೆ, ಲವ್ ಬರ್ಡ್ಸ್ ಆದಿತ್ಯ ರಾಯ್ ಕಪೂರ್ (Aditya Roy Kapoor) ಮತ್ತು ಅನನ್ಯಾ ಪಾಂಡೆ  (Ananya Panday) ಶೀಘ್ರದಲ್ಲೇ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ. ಅವರ ಕುಟುಂಬಗಳು ಸಹ ಇದಕ್ಕೆ ಒಪ್ಪಿಗೆ ಸೂಚಿಸಿದ್ದಾರಂತೆ.

ಇತ್ತೀಚಿನ ದಿನಗಳಲ್ಲಿ ಅನನ್ಯ ಪಾಂಡೆ ಮತ್ತು ಆದಿತ್ಯ ರಾಯ್ ಕಪೂರ್ ಅವರ ಅಫೇರ್‌ ಬಿ-ಟೌನ್‌ನಲ್ಲಿ ತೀವ್ರವಾಗಿ ಚರ್ಚೆಯಾಗುತ್ತಿವೆ. ಇಬ್ಬರೂ  ಹಲವು ಬಾರಿ ಒಟ್ಟಿಗೆ ಕಾಣಿಸಿಕೊಂಡಿದ್ದರು.

ಬಾಲಿವುಡ್‌ಲೈಫ್‌ ವರದಿ ಪ್ರಕಾರ, ಆದಿತ್ಯ ಮತ್ತು ಅನನ್ಯಾ ಇಬ್ಬರೂ ತುಂಬಾ ಆತ್ಮೀಯರಾಗಿದ್ದಾರೆ ಮತ್ತು ಪರಸ್ಪರ ಪ್ರೀತಿಸುತ್ತಿದ್ದಾರೆ  ಇಬ್ಬರ ಕುಟುಂಬಗಳೂ ಇವರಿಬ್ಬರ ಸಂಬಂಧಕ್ಕೆ ಗ್ರೀನ್ ಸಿಗ್ನಲ್ ನೀಡಿದ್ದಾರೆ ಎನ್ನಲಾಗುತ್ತಿದೆ.

Tap to resize

ಅನನ್ಯಾ ಮತ್ತು ಆದಿತ್ಯ ಇಬ್ಬರೂ ತಮ್ಮ ಸಂಬಂಧವನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲು ಬಯಸುತ್ತಾರೆ. ಆದರೆ, ಅವರು ದುಡುಕುವ ಮನಸ್ಥಿತಿಯಲ್ಲಿಲ್ಲ. ಇಬ್ಬರೂ ಈಗ ಮದುವೆಯ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎನ್ನಲಾಗಿದೆ.

ಇಬ್ಬರೂ ಮದುವೆಯಾಗುತ್ತಾರೆ. ಆದರೆ ಶಹನಾಹಿ ನುಡಿಸಲು ಇನ್ನೂ ಸಮಯವಿದೆ ಎಂದು ಬಾಲಿವುಡ್‌ಗೆ ಸಂಬಂಧಿಸಿದ ಮೂಲವೊಂದು ಹೇಳುತ್ತದೆ. ಸದ್ಯಕ್ಕೆ ಇಬ್ಬರೂ ತಮ್ಮ ತಮ್ಮ ಕೆಲಸದತ್ತ ಗಮನ ಹರಿಸಿದ್ದಾರೆ.

ಅನನ್ಯಾ ಪಾಂಡೆ ಬಾಲಿವುಡ್‌ಗೆ ಸ್ಟೂಡೆಂಟ್ ಆಫ್ ದಿ ಇಯರ್ 2 ನೊಂದಿಗೆ ಪಾದಾರ್ಪಣೆ ಮಾಡಿದರು. ಆದರೆ, ಅವರ ಚೊಚ್ಚಲ ಚಿತ್ರವು ಸೂಪರ್ ಫ್ಲಾಪ್ ಆಗಿತ್ತು. ಅವರಿಗೆ ಇನ್ನೂ ಒಂದೇ ಒಂದು ಹಿಟ್ ಚಿತ್ರ ಸಿಕ್ಕಿಲ್ಲ. ಅವರ ಮುಂಬರುವ ಚಿತ್ರ ಡ್ರೀಮ್ ಗರ್ಲ್ 2.

ಮತ್ತೊಂದೆಡೆ, ನಾವು ಆದಿತ್ಯ ರಾಯ್ ಕಪೂರ್ ಬಗ್ಗೆ ಹೇಳುವುದಾದರೆ ಅವರ ವೃತ್ತಿ ಜೀವನವು ಅನನ್ಯ ಪಾಂಡೆ ಅವರ ವೃತ್ತಿಜೀವನದಂತೆಯೇ ಫ್ಲಾಪ್ ಆಗಿದೆ. ಅವರು ಇನ್ನೂ ಸ್ವಂತವಾಗಿ ಯಾವುದೇ ಹಿಟ್ ಚಿತ್ರ ನೀಡಿಲ್ಲ.

Latest Videos

click me!