Salman Khan ಮಾನಸಿಕ ಅಸ್ವಸ್ಥ, ಅವನನ್ನು ಆರಾಧಿಸುವುದು ನಿಲ್ಲಿಸಿ : ಮಾಜಿ ಗರ್ಲ್‌ಫ್ರೆಂಡ್‌

First Published | Aug 19, 2022, 6:31 PM IST

ಬಾಲಿವುಡ್‌ನ ಮಾಜಿ ನಟಿ ಸೋಮಿ ಅಲಿ (Somy Ali) ಅವರು ತಮ್ಮ ಎಕ್ಸ್‌ ಬಾಯ್‌ಫ್ರೆಂಡ್‌ ಸಲ್ಮಾನ್ ಖಾನ್ (Salamna Khan) ಅವರನ್ನು ತೀವ್ರವಾಗಿ ಟಾರ್ಗೆಟ್ ಮಾಡಿದ್ದಾರೆ. ಅವರು ಮಹಿಳೆಯರನ್ನು ಹೊಡೆಯುವ ಮತ್ತು ಮಾನಸಿಕ ಅಸ್ವಸ್ಥರು ಎಂದು ಬಣ್ಣಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಸಲ್ಮಾನ್ ಖಾನ್ ಅವರ ಫೋಟೋವನ್ನು ಹಂಚಿಕೊಂಡಿರುವ ಸೋಮಿ, ಜನರು ಅವರನ್ನು ಆರಾಧಿಸುವುದನ್ನು ನಿಲ್ಲಿಸುವಂತೆ ಮನವಿ ಮಾಡಿದ್ದಾರೆ. ಸಲ್ಮಾನ್ ಖಾನ್ ಬಗ್ಗೆ ಸೋಮಿ ಏನು ಬರೆದಿದ್ದಾರೆ ಇಲ್ಲಿದೆ ಪೂರ್ಣ ವಿವರ.

ಸಲ್ಮಾನ್ ಖಾನ್ ಮತ್ತು ಭಾಗ್ಯಶ್ರೀ ಅಭಿನಯದ 'ಮೈನೆ ಪ್ಯಾರ್ ಕಿಯಾ' ಚಿತ್ರದ ಪೋಸ್ಟರ್ ಅನ್ನು ಹಂಚಿಕೊಂಡ ಸೋಮಿ ಅಲಿ ಸಾಮಾಜಿಕ ಮಾಧ್ಯಮದಲ್ಲಿ ಜನರು ಅವರನ್ನು ಆರಾಧಿಸುವುದನ್ನು ನಿಲ್ಲಿಸುವಂತೆ ಮನವಿ ಮಾಡಿದ್ದಾರೆ

'ನನ್ನನ್ನು ಮಾತ್ರವಲ್ಲ, ಇನ್ನೂ ಅನೇಕ ಮಹಿಳೆಯರಿಗೆ ಹೊಡೆಯುತ್ತಾನೆ ದಯವಿಟ್ಟು ಅವನನ್ನು ಪೂಜಿಸುವುದನ್ನು ನಿಲ್ಲಿಸಿ. ಅವನು ಮಾನಸಿಕ ಅಸ್ವಸ್ಥ. ನಾನು ಅನಾರೋಗ್ಯದಿಂದ ಬಳಲುತ್ತಿದ್ದೇನೆ. ನಿಮಗೆ ಕಲ್ಪನೆಯೂ ಇಲ್ಲ' ಎಂಉ ಸೋಮಿ ಆಲಿ ಬರೆದಿದ್ದಾರೆ.

Tap to resize

ಕೆಲವು ತಿಂಗಳ ಹಿಂದೆಯೂ ಸಹ, ಸೋಮಿ ಸಲ್ಮಾನ್ ಖಾನ್ ಅವರನ್ನು ತೀವ್ರವಾಗಿ ಗುರಿಯಾಗಿಸಿಕೊಂಡಿದ್ದರು ಮತ್ತು ಅವರನ್ನು ಹೆಸರಿಸದೆ ಹಾರ್ವೆ ವೈನ್ಸ್ಟೈನ್ ಜೊತೆ ಹೋಲಿಸಿದ್ದರು. ಐಶ್ವರ್ಯಾ ರೈ ಬಚ್ಚನ್ ಮಾಡಿದಂತೆ ನೀನು ಶೋಷಣೆ ಮಾಡಿದ ಎಲ್ಲ ಹೆಂಗಸರು ಮುಂದೊಂದು ದಿನ ಹೊರಗೆ ಬಂದು ತಮ್ಮ ಸತ್ಯವನ್ನು ಬಯಲಿಗೆಳೆಯುತ್ತಾರೆ ಎಂದು ಸೋಮಿ ತಮ್ಮ ಪೋಸ್ಟ್‌ನಲ್ಲಿ ಬರೆದಿದ್ದರು. ಹಾರ್ವೆ ವೈನ್‌ಸ್ಟೈನ್ ಒಬ್ಬ ಜನಪ್ರಿಯ ಹಾಲಿವುಡ್ ಚಲನಚಿತ್ರ ನಿರ್ಮಾಪಕ ಅನೇಕ ಮಹಿಳೆಯರು ಅವರು ಮೇಲೆ ಲೈಂಗಿಕ ದೌರ್ಜನ್ಯ, ಅತ್ಯಾಚಾರ ಮತ್ತು ಆಕ್ರಮಣ ಆರೋಪ ಹೊರಿಸಿದ್ದಾರೆ.

90 ರ ದಶಕದಲ್ಲಿ, ಸೋಮಿ ಸಲ್ಮಾನ್ ಖಾನ್ ಅವರೊಂದಿಗೆ ಸುಮಾರು 8 ವರ್ಷಗಳ ಕಾಲ ಸಂಬಂಧದಲ್ಲಿದ್ದರು. ಸಂಭಾಷಣೆಯೊಂದರಲ್ಲಿ, ಐಶ್ವರ್ಯಾ ರೈ ಅವರ ಬ್ರೇಕಪ್ ಕಾರಣ ಎಂದು ಅವರು ಹೇಳಿದ್ದರು, ಸೋಮಿಅವರು ಹದಿಹರೆಯದಿಂದಲೂ ಸಲ್ಮಾನ್ ಖಾನ್ ಅವರನ್ನು ಇಷ್ಟಪಡುತ್ತಿದ್ದರು ಮತ್ತು ಸಲ್ಮಾನ್ ಅವರ ವ್ಯಾಮೋಹವೇ ತನ್ನನ್ನು ಫ್ಲೋರಿಡಾದಿಂದ ಮುಂಬೈಗೆ ಕರೆತಂದಿದೆ ಎಂದು ಹೇಳಿದ್ದರು.

ಸೋಮಿ 1991 ಮತ್ತು 1997 ರ ನಡುವೆ 'ಅಂತ್‌', 'ಕಿಶನ್', 'ತೀಸ್ರಾ ಕೌನ್', 'ಆಂದೋಲನ್‌' ಮತ್ತು 'ಅಗ್ನಿಚಕ್ರ' ಚಿತ್ರಗಳಲ್ಲಿ ಕೆಲಸ ಮಾಡಿದರು. 1997 ರಲ್ಲಿ, ಸಲ್ಮಾನ್ ಖಾನ್ 'ಹಮ್ ದಿಲ್ ದೇ ಚುಕೇ ಸನಮ್' ಚಿತ್ರೀಕರಣದಲ್ಲಿದ್ದಾಗ, ಐಶ್ವರ್ಯಾ ರೈ ಅವರೊಂದಿಗಿನ ಅವರ ನಿಕಟತೆ ಬೆಳೆದು ಅವರು ಸೋಮಿಯಿಂದ ದೂರ ಆದರು.

ಸೋಮಿ ಸಲ್ಮಾನ್ ಜೊತೆಯಲ್ಲಿ 'ಬುಲಂದ್' ಎಂಬ  ಚಿತ್ರ ಮಾಡುತ್ತಿದ್ದರು. ಆದರೆ ಶೇಕಡ 80ರಷ್ಟು  ಚಿತ್ರೀಕರಣದ ನಂತರ ಸಿನಿಮಾ ಸ್ಥಗಿತಗೊಂಡಿತು.

ಪ್ರಸ್ತುತ ಸೋಮಿಗೆ 46 ವರ್ಷ, ಆದರೆ ಅವರು ಇನ್ನೂ ಮದುವೆಯಾಗಿಲ್ಲ. ಕೌಟುಂಬಿಕ ದೌರ್ಜನ್ಯ ಮತ್ತು ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಮಹಿಳೆಯರು ಮತ್ತು ಹುಡುಗಿಯರಿಗೆ ಸಹಾಯ ಮಾಡಲು ಅವರು ಎನ್‌ಜಿಒ ನಡೆಸುತ್ತಿದ್ದಾರೆ.

Latest Videos

click me!