ಅಕ್ಕನ ಎಕ್ಸ್‌ ಬಾಯ್‌ಫ್ರೆಂಡ್‌ ಜೊತೆ ಖುಷಿ ಕಪೂರ್‌ ಡೇಟಿಂಗ್?

Published : Aug 19, 2022, 05:50 PM IST

ದಿವಂಗತ ನಟಿ ಶ್ರೀದೇವಿ ಮತ್ತು ಚಲನಚಿತ್ರ ನಿರ್ಮಾಪಕ ಬೋನಿ ಕಪೂರ್ ಅವರ ಕಿರಿಯ ಪುತ್ರಿ ಖುಷಿ ಕಪೂರ್ (Khushi Kapoor)  ಈಗ ಸುದ್ದಿಯಲ್ಲಿದ್ದಾರೆ.  ಹಿಂದೆ ತನ್ನ ಅಕ್ಕ ಜಾನ್ವಿ ಕಪೂರ್ (Janhvi Kapoor) ಅವರೊಂದಿಗೆ ಡೇಟಿಂಗ್ ಮಾಡುತ್ತಿದ್ದ ಅಕ್ಷತ್ ರಾಜನ್ ಅವರ ಜೊತೆ ಖುಷಿ ರೊಮ್ಯಾಂಟಿಕ್‌ ಸಂಭಾಷಣೆಯಲ್ಲಿ ತೊಡಗಸಿಕೊಂಡಿರವುದು ಕಂಡುಬಂದಿದೆ. ಈ ಬೆನ್ನಲ್ಲೇ ಇವರಿಬ್ಬರೂ ಡೇಟಿಂಗ್‌ ಮಾಡುತ್ತಿರುವ ವರದಿಗಳು ಹೊರಬಂದಿದೆ. 

PREV
19
ಅಕ್ಕನ ಎಕ್ಸ್‌ ಬಾಯ್‌ಫ್ರೆಂಡ್‌ ಜೊತೆ ಖುಷಿ ಕಪೂರ್‌ ಡೇಟಿಂಗ್?

ಜೋಯಾ ಅಖ್ತರ್ ನಿರ್ದೇಶನದ ದಿ ಆರ್ಚೀಸ್ ಚಿತ್ರದಲ್ಲಿ ಖುಷಿ ಕಪೂರ್ ಬಾಲಿವುಡ್ ಗೆ ಪಾದಾರ್ಪಣೆ ಮಾಡಲಿದ್ದಾರೆ.  ಆದರೆ ಖುಷಿ ಈಗಾಗಲೇ ತನ್ನ ವೈಯಕ್ತಿಕ ಜೀವನದ ಕಾರಣದಿಂದ ಎಲ್ಲರ ಗಮನ ಸೆಳೆತ್ತಿರುವಂತೆ ಎಂದು ಕಾಣುತ್ತದೆ. 

29

ಈ ಹಿಂದೆ ಅಕ್ಕ ಜಾನ್ವಿ ಕಪೂರ್‌ಗೆ ಸಂಪರ್ಕ ಹೊಂದಿದ್ದ ಅಕ್ಷತ್ ರಾಜನ್ ಅವರೊಂದಿಗೆ ಖುಷಿ ಕಪೂರ್‌ ರೊಮ್ಯಾಂಟಿಕ್‌ ಸಂಭಾಷಣೆ ಸಖತ್‌ ವೈರಲ್‌ ಆಗಿದ್ದು, ಇಬ್ಬರ ಸಂಬಂಧದ ರೂಮರ್‌ ಹರಿದಾಡುತ್ತಿದೆ.

39

ಖುಷಿ ಇತ್ತೀಚೆಗೆ ಕ್ಯಾಲಿಫೋರ್ನಿಯಾ ರಜೆಯ ಕೆಲವು ಫೋಟೋಗಳನ್ನು Instagram ನಲ್ಲಿ ಹಂಚಿಕೊಂಡಿದ್ದಾರೆ. ಮೊದಲ ಫೋಟೋದಲ್ಲಿ ಕ್ರಾಪ್ ಟಾಪ್ ಮತ್ತು ಟ್ರ್ಯಾಕ್ ಪ್ಯಾಂಟ್‌ನಲ್ಲಿ ಖುಷಿ ಕಾಣಿಸಿಕೊಂಡಿದ್ದಾರೆ

49

ಮುಂದಿನ ಪೋಟೋಗಳಲ್ಲಿ, ಜಾನ್ವಿ ಕಪೂರ್‌ ಅವರ  ಕ್ಲೋಸ್‌ ಫ್ರೆಂಡ್‌ ಆಗಿದ್ದ ಅಕ್ಷತ್  ರಾಜನ್‌ ಜೊತೆ ಖುಷಿ  ಪೋಸ್ ನೀಡುತ್ತಿರುವುದು ಕಂಡುಬಂದಿದೆ. ಈ ಪೋಸ್ಟ್‌ನಲ್ಲಿ ಖುಷಿ ಮತ್ತು ಅಕ್ಷತಾ ನಡುವಿನ 'ಐ ಲವ್ ಯೂ' ವಿನಿಮಯ ಎಲ್ಲರ ಗಮನ ಸೆಳೆದಿದೆ.
 

59

ಅಕ್ಷತ್ ಮೂರು ಹೃದಯದ ಎಮೋಜಿಗಳನ್ನು ಅನುಸರಿಸಿ 'ly' ಎಂದು ಕಾಮೆಂಟ್ ಮಾಡಿದರೆ, ಖುಷಿ 'iluuuuuu' ನಂತರ ಹೃದಯದ ಎಮೋಜಿಯೊಂದಿಗೆ ಪ್ರತಿಕ್ರಿಯಿಸಿದರು. ನನ್ನನ್ನು ಕ್ಷಮಿಸಿ’ ಎಂದು ಜಾನ್ವಿ ಕೂಡ ಕಾಮೆಂಟ್ ಮಾಡಿದ್ದಾರೆ. ನಿನ್ನನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ’ ಎಂದು ಖುಷಿ ಸಹ ಪ್ರತಿಕ್ರಿಯಿಸಿದ್ದಾರೆ.
 


 

69

ಖುಷಿ ಮತ್ತು ಅಕ್ಷತಾ ಅವರ ಈ ಪ್ರೀತಿಯ ವಿನಿಮಯವು ಡೇಟಿಂಗ್ ವದಂತಿಗಳನ್ನು ಹುಟ್ಟು ಹಾಕಿದೆ. ಆದರೆ ಅದು ನಿಜವಾ ಎಂದು ಕಾದು  ನೋಡಬೇಕಾಗಿದೆ. ಅಕ್ಷತ್ ಈ ಹಿಂದೆ 2016 ರಲ್ಲಿ ಗೌರಿ ಶಿಂಧೆ ಅವರ ಇಂಗ್ಲಿಷ್ ವಿಂಗ್ಲಿಷ್ ಚಲನಚಿತ್ರದ ವಿಶೇಷ ಪ್ರದರ್ಶನಕ್ಕೆ ಜಾನ್ವಿ ಮತ್ತು ಅವರ ತಾಯಿ ಶ್ರೀದೇವಿ ಅವರೊಂದಿಗೆ ಬಂದಿದ್ದರು.
 


 

79

ಆ ಸಮಯದಲ್ಲಿ ಜಾನ್ವಿ ಮತ್ತು ಅಕ್ಷತಾ ಸಂಬಂಧದಲ್ಲಿದ್ದರು ಎಂದು ವರದಿಯಾಗಿದೆ. ಮತ್ತೊಂದೆಡೆ, ವದಂತಿಗಳನ್ನು ತಳ್ಳಿ ಹಾಕಿರುವ ಜಾನ್ವಿ, ಅವನು ತನ್ನ ಬಾಲ್ಯದ ಆತ್ಮೀಯ ಸ್ನೇಹಿತ ಎಂದು ಹೇಳಿಕೊಂಡಿದ್ದಾರೆ. ಪಾಪರಾಜಿಯಿಂದಾಗಿ ಅವನು ತನ್ನೊಂದಿಗೆ ಕಾಣಿಸಿಕೊಳ್ಳಲು ಹೆದರುತ್ತಾನೆ ಎಂದು ಅವರು ಹೇಳಿದ್ದಾರೆ. 

89

ಖುಷಿ ಜೊತೆಗೆ ಶಾರುಖ್ ಖಾನ್ ಅವರ ಮಗಳು ಸುಹಾನಾ ಖಾನ್ ಮತ್ತು ಅಮಿತಾಬ್ ಮತ್ತು ಜಯಾ ಬಚ್ಚನ್ ಅವರ ಮೊಮ್ಮಗ ಅಗಸ್ತ್ಯ ನಂದಾ ಅವರು ದಿ ಆರ್ಚೀಸ್ ಮೂಲಕ ತಮ್ಮ ಚೊಚ್ಚಲ ಪ್ರವೇಶವನ್ನು ಮಾಡುತ್ತಾರೆ.  

99

ಆರ್ಚೀಸ್ 1960 ರ ದಶಕದಲ್ಲಿ ಸೆಟ್ ಮಾಡಿದ ಮ್ಯೂಸಿಕ್‌ ಡ್ರಾಮಾವಾಗಿದ್ದು ನೆಟ್‌ಫ್ಲಿಕ್ಸ್‌ನಲ್ಲಿ ಪ್ರಥಮ ಪ್ರದರ್ಶನಗೊಳ್ಳಲಿದೆ. ಯುವ ನಟರು ಆರ್ಚಿ ಕಾಮಿಕ್ಸ್‌ನ ಪ್ರಸಿದ್ಧ ಪಾತ್ರಗಳನ್ನು ನಿರ್ವಹಿಸುತ್ತಾರೆ. ಜೊತೆಗೆ, ಮಿಹಿರ್ ಅಹುಜಾ, ಡಾಟ್, ಯುವರಾಜ್ ಮೆಂಡಾ ಮತ್ತು ವೇದಂಗ್ ರೈನಾ ಪ್ರಮುಖ ಪಾತ್ರಗಳನ್ನು ನಿರ್ವಹಿಸಲಿದ್ದಾರೆ.

Read more Photos on
click me!

Recommended Stories