ಏರ್ಪೋರ್ಟ್‌ನಲ್ಲಿ ಕಿಯಾರಾ-ಸಿದ್ಧಾರ್ಥ್ ಮಲ್ಹೋತ್ರಾ; ಪಾಪಾರಾಜಿಗಳ ಮೇಲೆ ಸಿಡುಕಿದ ನಟ!

Published : Aug 02, 2022, 05:33 PM IST

ಇತ್ತೀಚಿಗೆ ನಟಿಯ ಕಿಯಾರಾ ಅಡ್ವಾಣಿ  (Kiara Advani) ತಮ್ಮ 30 ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ವದಂತಿಗಳ ಪ್ರಕಾರ ಈ ಸಮಯದಲ್ಲಿ ಸಿದ್ಧಾರ್ಥ್ ಮಲ್ಹೋತ್ರಾ (Sidharth Malhotra) ಮತ್ತು ಕಿಯಾರಾ ಅಡ್ವಾಣಿ ದುಬೈನಲ್ಲಿದ್ದರು. ಆಗಸ್ಟ್ 1ರಂದು ಮುಂಬೈ ವಿಮಾನ ನಿಲ್ದಾಣದಲ್ಲಿ ಮನೆಗೆ ಹಿಂದಿರುಗಿದಾಗ ಒಟ್ಟಿಗೆ ಕಾಣಿಸಿಕೊಂಡರು. ಈ ಸಮಯದಲ್ಲಿ ಸಿದ್ಧಾರ್ಥ್‌ ಮಲ್ಹೋತ್ರಾ ವಾರು ಪಾಪಾರಾಜಿಗಳ ಮೇಲೆ ರೇಗಿರುವುದು ಕಂಡುಬಂದಿದೆ.

PREV
18
ಏರ್ಪೋರ್ಟ್‌ನಲ್ಲಿ ಕಿಯಾರಾ-ಸಿದ್ಧಾರ್ಥ್ ಮಲ್ಹೋತ್ರಾ; ಪಾಪಾರಾಜಿಗಳ ಮೇಲೆ ಸಿಡುಕಿದ ನಟ!

ಕಿಯಾರಾ ಅಡ್ವಾಣಿ ಮತ್ತು ಸಿದ್ಧಾರ್ಥ್ ಮಲ್ಹೋತ್ರಾ  ಅವರು ಆಗಾಗ್ಗೆ ಒಟ್ಟಿಗೆ ಪ್ರಯಾಣಿಸುವುದು ಕಂಡುಬರುತ್ತದೆ.  ಆದಾಗ್ಯೂ, ಈ ಜೋಡಿ ಇದು ವರೆಗೂ  ತಮ್ಮ ಸಂಬಂಧವನ್ನು ಔಪಚಾರಿಕವಾಗಿ ಒಪ್ಪಿಕೊಂಡಿಲ್ಲ. 

28

ಜುಲೈ 31 ರಂದು ಕಿಯಾರಾ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ಇದೇ ಸಮಯದಲ್ಲಿ ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ಕಿಯಾರಾ  ದುಬೈಗೆ ಹಾರಿದ್ದರು ಆಗಸ್ಟ್ 1 ರಂದು ಮುಂಬೈ ವಿಮಾನ ನಿಲ್ದಾಣದಲ್ಲಿ ಮನೆಗೆ ಹಿಂದಿರುಗುವಾಗ ಸಿದ್ಧಾರ್ಥ್ ಮತ್ತು ಕಿಯಾರಾ ಒಟ್ಟಿಗೆ ಏರ್‌ಪೋರ್ಟ್‌ನಲ್ಲಿಮಕ್ಯಾಮಾರಾಕ್ಕೆ ಸಿಲುಕ್ಕಿದ್ದಾರೆ.

38

ದೀರ್ಘಕಾಲದದಿಂದ  ಸಿದ್ಧಾರ್ಥ್ ಮತ್ತು ಕಿಯಾರಾ ಸಂಬಂಧದ ವದಂತಿಗಳಿಂದ ಲಿಂಕ್ ಆಗಿದ್ದಾರೆ. ಆದರೆ  ಈ ಕಪಲ್‌ ತಮ್ಮ ರೋಮ್ಯಾನ್ಸ್‌ ಅನ್ನು ಒಪ್ಪಿಕೊಂಡಿಲ್ಲ ಹಾಗೂ ನಿರಾಕರಿಸಿಯೂ ಇಲ್ಲ. ಆದರೆ  ನಿಯಮಿತ ಭೇಟಿ ಮತ್ತು ಅವರ ಜೊತೆಯಾಗಿ ಪ್ರಯಾಣಗಳ ಕಾರಣದಿಂದ ರೂಮರ್‌ ಮತ್ತಷ್ಟು ಬಲಗೊಳ್ಳುತ್ತಿವೆ.
 


 

48

ಅದೇ ಸಮಯದಲ್ಲಿ ಸಿದ್ಧಾರ್ಥ್ ಮತ್ತು ಕಿಯಾರಾ ಅಭಿಮಾನಿಗಳೊಂದಿಗೆ ಪೋಸ್ ನೀಡಿದ ದುಬೈನ ಅವರ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೇಗವಾಗಿ ವೈರಲ್ ಆಗಿವೆ. ಪೋಟೋಗಳು ಸಾಮಾಜಿಕ ಮಾಧ್ಯಮ ಬಳಕೆದಾರರಿಂದ ಅನೇಕ   ಕಾಮೆಂಟ್‌ಗಳನ್ನು ಸಹ ಪಡೆದಿವೆ.
 


 

58

ವಿಮಾನದಲ್ಲಿ ಕಾಣಿಸಿಕೊಂಡ ಇಬ್ಬರೂ ತಾರೆಗಳು ಕಪ್ಪು ಬಟ್ಟೆಯನ್ನು ಧರಿಸಿದ್ದರು, ಸಿದ್ಧಾರ್ಥ್ ಬಿಳಿ ಟೀ ಶರ್ಟ್‌ ಜೊತೆ ಕಪ್ಪು ಜಾಕೆಟ್, ಕಪ್ಪು ಪ್ಯಾಂಟ್ ಧರಿಸಿದ್ದು ಬಿಳಿ ಸ್ನೀಕರ್ಸ್‌ ಮ್ಯಾಚ್‌ ಮಾಡಿಕೊಂಡಿದ್ದರು ಮತ್ತೊಂದೆಡೆ, ಕಿಯಾರಾ ಕಪ್ಪು ಹೂಡಿ ಮತ್ತು ಪ್ಯಾಂಟ್ ಧರಿಸಿದ್ದರು.  ಕಿಯಾರಾ  ಯಾವುದೇ ಮೇಕಪ್ ಧರಿಸಿರಲಿಲ್ಲ

68

ಈ ದಂಪತಿಗಳ ಫೋಟೋ ತೆಗೆಯಲು ಪ್ರಯತ್ನಸಿದ  ಛಾಯಾಗ್ರಾಹಕರಿಗೆ ಸಿದ್ಧಾರ್ಥ್‌ ಫೋಟೋ ತೆಗೆಯದಂತೆ ಹೇಳಿದ್ದಾರೆ ಮತ್ತು ಈ ಸಮಯದಲ್ಲಿ ನಟ ಪಾಪಾರಾಜಿಗಳ ಮೇಲೆ ಕೋಪಗೊಂಡಿದ್ದು ಕಂಡುಬಂದಿದೆ.

78

ಕಿಯಾರಾ ಶೀಘ್ರದಲ್ಲೇ ವಿಕ್ಕಿ ಕೌಶಲ್ ಮತ್ತು ಭೂಮಿ ಪೆಡ್ನೇಕರ್ ಜೊತೆ  ಗೋವಿಂದ ನಾಮ್ ಮೇರಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. , ಅವರು ಮತ್ತು ಕಾರ್ತಿಕ್ ಆರ್ಯನ್ ಅವರು  ಸತ್ಯಪ್ರೇಮ್ ಕಿ ಕಥಾ ಸಿನಿಮಾವನ್ನು ಹೊಂದಿದ್ದಾರೆ. 

88

ಮತ್ತೊಂದೆಡೆ, ಸಿದ್ಧಾರ್ಥ್ ಜೊತೆ  ರಶ್ಮಿಕಾ ಮಂದಣ್ಣ ಮಿಷನ್ ಮಜ್ನು ಹಾಗೂ. ದಿಶಾ ಪಟಾನಿ ಮತ್ತು ರಾಶಿ ಖನ್ನಾ ಜೊತೆಗೆ, ಅವರಿಗೆ ಯೋಧಾ  ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ವಿವೇಕ್ ಒಬೆರಾಯ್ ಮತ್ತು ಶಿಲ್ಪಾ ಶೆಟ್ಟಿ ಜೊತೆಗೆ, ಸಿದ್ಧಾರ್ಥ್ ರೋಹಿತ್ ಶೆಟ್ಟಿ ಅವರ ಇಂಡಿಯನ್‌ ಪೊಲೀಸ್ ಫೋರ್ಸ್‌ನಲ್ಲೂ ಕಾಣಿಸಿಕೊಳ್ಳಲಿದ್ದಾರೆ.

Read more Photos on
click me!

Recommended Stories