ಮಹತ್ ರಾಘವೇಂದ್ರ:
ತಮ್ಮ ಸಂಬಂಧಗಳನ್ನು ಖಾಸಗಿಯಾಗಿ ಇಟ್ಟುಕೊಳ್ಳಲು ಬಯಸುವ ತಂತ್ರವನ್ನು ತಾಪ್ಸಿ ಪನ್ನು ಕೂಡ ಅಳವಡಿಸಿಕೊಂಡಿದ್ದಾರೆ. ಆದಾಗ್ಯೂ, ತೆಲುಗು ನಟ ಮಹತ್ ರಾಘವೇಂದ್ರ ಅವರು ತಮ್ಮ ಮೊದಲ ತೆಲುಗು ಚಲನಚಿತ್ರ ಬ್ಯಾಕ್ ಬೆಂಚ್ ಸ್ಟೂಡೆಂಟ್ ಅನ್ನು ಪ್ರಚಾರ ಮಾಡುವಾಗ ತಾಪ್ಸಿಯೊಂದಿಗೆ ಎರಡು ವರ್ಷಗಳ ಕಾಲ ಡೇಟಿಂಗ್ ಮಾಡಿರುವುದಾಗಿ ಪತ್ರಿಕೆಯೊಂದರ ಸಂದರ್ಶನದಲ್ಲಿ ಒಪ್ಪಿಕೊಂಡಿದ್ದಾರೆ. ಇದು ಇನ್ನು ಮುಂದೆ ಕೆಲಸ ಮಾಡುವುದಿಲ್ಲ ಎಂದು ಅರಿತುಕೊಂಡ ನಂತರ ಅವರು ಬೇರ್ಪಟ್ಟರಂತೆ.
ಸಾಕಿಬ್ ಸಲೀಂ:
ಟ್ಯಾಬ್ಲಾಯ್ಡ್‌ಗಳು 2017 ರಲ್ಲಿ ತಾಪ್ಸೀ ಪನ್ನು ಮತ್ತು ಸಾಕಿಬ್ ಸಲೀಮ್ ಒಟ್ಟಿಗೆ ರೊಮ್ಯಾಂಟಿಕ್ ಕ್ಷಣಗಳನ್ನು ಹೊಂದಿದ್ದರು ಎಂದು ಆರೋಪಿಸಿವೆ. ಅವರ ಕೆಲವು ಫೋಟೋಗಳು ಆನ್‌ಲೈನ್‌ನಲ್ಲಿ ವೈರಲ್ ಆದ ನಂತರ ಅಫೇರ್ ಕ್ರೇಜ್ ಅನ್ನು ಹುಟ್ಟು ಹಾಕಿತು. ನಂತರ, ತಾನು ಮತ್ತು ತಾಪ್ಸಿ ಪನ್ನು ಡೇಟಿಂಗ್ ಮಾಡುತ್ತಿಲ್ಲ ಎಂದು ಸಾಕಿಬ್ ಸ್ಪಷ್ಟಪಡಿಸಿದರು. 'ನಾನು ಅವಳ ಜೊತೆ ಡೇಟಿಂಗ್ ಮಾಡುತ್ತಿಲ್ಲ. ಕೆಲವೇ ಜನರು ನನಗೆ ಈ ಪ್ರಶ್ನೆಯನ್ನು ಕೇಳಿದ್ದಾರೆ ಮತ್ತು ನಾನು ಅವರಿಗೆ ಹೇಳುತ್ತಲೇ ಇರುತ್ತೇನೆ. ತಾಪ್ಸಿ ನನ್ನ ಆತ್ಮೀಯ ಸ್ನೇಹಿತೆ, ಅದಕ್ಕಿಂತ ಹೆಚ್ಚೇನೂ ಇಲ್ಲ' ಎಂದಿದ್ದರು.
ಮಥಿಯಾಸ್ ಬೋ:
ವದಂತಿಗಳ ಪ್ರಕಾರ, ತಾಪ್ಸಿ ಪನ್ನು ಅವರು ಒಲಿಂಪಿಕ್ ಬೆಳ್ಳಿ ಪದಕ ವಿಜೇತ ಬ್ಯಾಡ್ಮಿಂಟನ್ ಆಟಗಾರ ಮಥಿಯಾಸ್ ಬೋ ಅವರೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆ.
ಬ್ಯಾಡ್ಮಿಂಟನ್ ಆಟಗಾರ ಮತ್ತು ತಾಪ್ಸಿಯ ರೂಮರ್ಡ್ ಬಾಯ್‌ಫ್ರೆಂಡ್ ಮಥಿಯಾಸ್ ಕೂಡ 2017 ರಲ್ಲಿ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದರು ಮತ್ತು ತಮ್ಮ ಗೆಳತಿ ತಾಪ್ಸಿಯ ಬಗ್ಗೆ ಜಗತ್ತಿಗೆ ಘೋಷಿಸಿದ್ದರು.
ತಾಪ್ಸಿ ಕೂಡ ಒಮ್ಮೆ ಚಿತ್ರರಂಗದ ಹೊರಗಿನವರೊಂದಿಗೆ ಡೇಟಿಂಗ್ ಮಾಡಲು ಬಯಸುವುದಾಗಿ ಬಹಿರಂಗಪಡಿಸಿದರು. ಕಳೆದ ವರ್ಷ, ಅವರ ಮಾಲ್ಡೀವ್ಸ್ ಹಾಲಿಡೇ ಫೋಟೋಗಳು ಮತ್ತು ವೀಡಿಯೊಗಳು ತಾಪ್ಸಿ ಪನ್ನು ಮತ್ತು ಮಥಿಯಾಸ್ ಬೋ ಅವರ ಸಂಬಂಧವನ್ನು ದೃಢಪಡಿಸಿದವು.
ಪನ್ನು ಅವರು ಬೋ ಅವರೊಂದಿಗಿನ ಸಂಬಂಧವನ್ನು ಸಾರ್ವಜನಿಕವಾಗಿ ಅಂಗೀಕರಿಸದಿದ್ದರೂ ಅಥವಾ ಅವರು ಹೇಗೆ ಭೇಟಿಯಾದರು ಎಂಬುದನ್ನು ವಿವರಿಸದಿದ್ದರೂ ಸಹ, 2019 ರಲ್ಲಿ ಅವರ ಸಹೋದರಿ ಶಗುನ್ ಅವರು ಈ ಪರಿಚಯಕ್ಕೆ ಕಾರಣ ಎಂದು ಹೇಳಿಕೊಂಡರು, 'ತಾಪ್ಸೀ ನನ್ನ ಮೂಲಕ ಅವರನ್ನು ಭೇಟಿಯಾದ ಕಾರಣ ನನಗೆ ಧನ್ಯವಾದ ಹೇಳಬೇಕು' ಎಂದು ಶಗುನ್ ಹೇಳಿಕೆ ನೀಡಿದ್ದರು.