ಶಿಲ್ಪಾ ಶೆಟ್ಟಿ- ಶಾರುಖ್ ಖಾನ್ -surrogacy ಮೂಲಕ ಪೋಷಕರಾದ Bollywood ಸೆಲೆಬ್ರೆಟಿಗಳು!

First Published | Nov 20, 2021, 3:11 PM IST

ಬಾಲಿವುಡ್‌ನ ಡಿಂಪಲ್ ಗರ್ಲ್ ಅಂದರೆ ಪ್ರೀತಿ ಜಿಂಟಾ (Preity Zinta)  ಅವಳಿ ಮಕ್ಕಳ ತಾಯಿಯಾಗಿದ್ದಾರೆ. ಪ್ರೀತಿ ಜಿಂಟಾ ಸರೋಗೆಸಿ ಮೂಲಕ  (Surrogacy) ಮೂಲಕ ತಾಯಿಯಾಗಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ (Social Media) ಪೋಸ್ಟ್ ಅನ್ನು ಹಂಚಿಕೊಂಡ ಪ್ರೀತಿ, ನಾನು ಮತ್ತು ನನ್ನ ಪತಿ ಜೀನ್ ತುಂಬಾ ಸಂತೋಷವಾಗಿದ್ದೇವೆ. ನಮ್ಮ ಮನೆಯಲ್ಲಿ ಜೈ ಮತ್ತು ಜಿಯಾ ಎಂಬ ಅವಳಿ ಮಕ್ಕಳು ಜನಿಸಿದ್ದಾರೆಂದು ಪೋಸ್ಟ್ ಮಾಡಿದ್ದಾರೆ. ಈ ಸುದ್ದಿ ತಿಳಿದ ಪ್ರೀತಿ ಜಿಂಟಾ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಪ್ರೀತಿಯಿಂದ ಅಭಿನಂದಿಸುತ್ತಿದ್ದಾರೆ. ಅಂದಹಾಗೆ, ಬಾಡಿಗೆ ತಾಯಿಯ ಮಕ್ಕಳನ್ನು ಪಡೆದ ನಟಿ  ಪ್ರೀತಿ ಜಿಂಟಾ ಒಬ್ಬರೇ ನಟಿಯಲ್ಲ. ಸರೋಗೆಸಿ ಮೂಲಕ ಅನೇಕ ಬಾಲಿವುಡ್ ಸೆಲೆಬ್ರಿಟಿಗಳು ಪೋಷಕರಾಗಿದ್ದಾರೆ. 
 

ಶಿಲ್ಪಾ ಶೆಟ್ಟಿ-ರಾಜ್ ಕುಂದ್ರಾ:
ಫೆಬ್ರವರಿ 2020 ರಲ್ಲಿ ಬಾಡಿಗೆ ತಾಯ್ತನದ ಮೂಲಕ ಶಿಲ್ಪಾ ಶೆಟ್ಟಿ ಎರಡನೇ ಬಾರಿ ತಾಯಿಯಾದರು. ಶಿಲ್ಪಾ  ಫೆಬ್ರವರಿ 15, 2020 ರಂದು ಮಗಳು ಸಮಿಶಾಗೆ ಸರೋಗೆಸಿ ಮೂಲಕ ತಾಯಿಯಾದರು. ಆದರೆ, ಈ ಸುದ್ದಿಯನ್ನು ಶಿಲ್ಪಾ ಫೆ.21ರಂದು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ಶಿಲ್ಪಾ ಅವರಿಗೆ ಆಗಲೇ ವಿಯಾನ್ ರಾಜ್ ಕುಂದ್ರಾ ಎಂಬ ಮಗನಿದ್ದ.
 

ಆಮೀರ್ ಖಾನ್-ಕಿರಣ್ ರಾವ್:
ಬಾಲಿವುಡ್‌ನ ಮಿಸ್ಟರ್ ಪರ್ಫೆಕ್ಷನಿಸ್ಟ್ ಆಮೀರ್ ಖಾನ್ ಮತ್ತು ಅವರ ಮಾಜಿ ಪತ್ನಿ ಕಿರಣ್ ರಾವ್ ಪೋಷಕರಾಗಲು ಬಾಡಿಗೆ ತಾಯ್ತನದ ಮೊರೆ ಹೋಗಿದ್ದರು. ಬಾಡಿಗೆ ತಾಯಿಯಿಂದ ಡಿಸೆಂಬರ್ 5, 2011 ರಂದು ಜನಿಸಿದ ತಮ್ಮ ಮಗನಿಗೆ ಆಮೀರ್ ಮತ್ತು ಕಿರಣ್,ಆಜಾದ್ ಎಂದು ಹೆಸರಿಟ್ಟರು. ಆಜಾದ್‌ನ ಜನನದ ಸಮಯದಲ್ಲಿ, ಈ ಮಗು ತನಗೆ ತುಂಬಾ ವಿಶೇಷವಾಗಿದೆ ಏಕೆಂದರೆ ಅದರ ಜನನಕ್ಕಾಗಿ ಅವರು ಬಹಳ ಸಮಯ ಕಾಯುತ್ತಿದ್ದೆವು, ಎಂದು ಆಮೀರ್ ಹೇಳಿದ್ದರು.

Tap to resize

ಶಾರುಖ್ ಖಾನ್-ಗೌರಿ:
ಬಾಲಿವುಡ್‌ನ ಕಿಂಗ್ ಅಂದರೆ ಶಾರುಖ್ ಖಾನ್ ಅವರು ತಮ್ಮ ಮೂರನೇ ಮಗು ಅಬ್ರಾಮ್‌ಗಾಗಿ ಬಾಡಿಗೆ ತಾಯ್ತನವನ್ನು ಆಶ್ರಯಿಸಬೇಕಾಯಿತು. ಶಾರುಖ್ ಮತ್ತು ಗೌರಿ ಖಾನ್ ಆಗಲೇ ಇಬ್ಬರು ಮಕ್ಕಳನ್ನು ಹೊಂದಿದ್ದರೂ ಸರೋಗೆಸಿ ಮೂಲಕ ಮೂರನೇ ಮಗುವನ್ನು ಪಡೆದರು ಹಾಗೂ ಬಾಲಿವುಡ್‌ನಲ್ಲಿ ಬಾಡಿಗೆ ತಾಯ್ತನವನ್ನು ಆಶ್ರಯಿಸಿದವರಲ್ಲಿ ಈ ಕಪಲ್‌ ಮೊದಲಿಗರು. ಈಗ ಅವರ ಮಗನಿಗೆ 5 ವರ್ಷ

ಏಕ್ತಾ ಕಪೂರ್-ತುಷಾರ್ ಕಪೂರ್:
ನಟ ಜೀತೇಂದ್ರ ಅವರ ಮಗಳು ಮತ್ತು ಟಿವಿ ನಿರ್ಮಾಪಕಿ ಏಕ್ತಾ ಕಪೂರ್ ಮತ್ತು ಅವರ ಸಹೋದರ ತುಷಾರ್ ಕಪೂರ್ ಇಬ್ಬರೂ ಬಾಡಿಗೆ ತಾಯ್ತನದ ಸಹಾಯದಿಂದ ಮಗುವನ್ನು ಪಡೆದಿದ್ದಾರೆ. ಏಕ್ತಾ ಕಪೂರ್ ತನ್ನ ಮಗನಿಗೆ ಜಿತೇಂದ್ರನ ನಿಜವಾದ ಹೆಸರಾದ ರವಿ ಕಪೂರ್ ಎಂದು ನಾಮಕರಣ ಮಾಡಿದ್ದಾರೆ. ಏಕ್ತಾ ಕಪೂರ್‌ಗಿಂತ ಮೊದಲು, ತುಷಾರ್ ಕಪೂರ್ ಬಾಡಿಗೆ ತಾಯ್ತನವನ್ನು ಆಶ್ರಯಿಸಿದ್ದರು ಮತ್ತು ಅವರ ಮಗನ ಹೆಸರು ಲಕ್ಷ್ಯ.

ಕರಣ್ ಜೋಹರ್:
ಚಿತ್ರ ನಿರ್ಮಾಪಕ ಕರಣ್ ಜೋಹರ್ ಇಬ್ಬರು ಮಕ್ಕಳ ತಂದೆ. ಸರೋಗೆಸಿ ಸಹಾಯದಿಂದ ಕರಣ್‌ ಇಬ್ಬರು ಅವಳಿ ಮಕ್ಕಳ ಸಿಂಗಲ್‌ ಪೆರೆಂಟ್‌ ಆಗಿದ್ದಾರೆ. ಅವರ ಮಗನ ಹೆಸರು ಯಶ್ ಜೋಹರ್, ಮಗಳ ಹೆಸರು ರೂಹಿ ಜೋಹರ್. ಕರಣ್ ಮಕ್ಕಳಿಬ್ಬರಿಗೂ ತಾಯಿ ಹಿರಾ ಮತ್ತು ತಂದೆ ಯಶ್ ಅವರ ಹೆಸರಿಟ್ಟಿದ್ದಾರೆ.

ಸನ್ನಿ ಲಿಯೋನ್-ಡೇನಿಯಲ್ ವೆಬರ್:
ಅಡಲ್ಟ್ ಇಂಡಸ್ಟ್ರಿಯಿಂದ ಬಾಲಿವುಡ್ ಗೆ ಕಾಲಿಟ್ಟ ನಟಿ ಸನ್ನಿ ಲಿಯೋನ್ ಪ್ರಸ್ತುತ ಮೂರು ಮಕ್ಕಳ ತಾಯಿ. ಅವರು ಮೊದಲು 2017 ರಲ್ಲಿ ನಿಶಾ ಕೌರ್ ಎಂಬ ಹೆಣ್ಣು ಮಗುವನ್ನು ದತ್ತು ಪಡೆದರು. ಇದರ ನಂತರ, ಬಾಡಿಗೆ ತಾಯ್ತನದ ಸಹಾಯದಿಂದ, ಅವರು ಆಶರ್ ಸಿಂಗ್ ವೆಬರ್ ಮತ್ತು ನೋಹ್ ಸಿಂಗ್ ವೆಬರ್ ಎಂಬ ಇಬ್ಬರು ಅವಳಿ ಮಕ್ಕಳ ತಾಯಿಯಾದರು.

ಲಿಸಾ ರೇ-ಜೇಸನ್:
ಕಸೂರ್ ಚಿತ್ರದ ನಟಿ ಲಿಸಾ ರೇ ಅವರು ಸರೋಗೆಸಿ ಮೂಲಕ ಮಕ್ಕಳನ್ನು ಪಡೆದ ಇನ್ನೊಬ್ಬ ಸೆಲೆಬ್ರೆಟಿ. ಲೀಸಾ ರೇ 46ನೇ ವಯಸ್ಸಿನಲ್ಲಿ ಅವಳಿ ಹೆಣ್ಣುಮಕ್ಕಳ ತಾಯಿಯಾದರು. ತಾಯಿಯಾದ ಮೂರು ತಿಂಗಳ ನಂತರ ಇನ್ಸ್ಟಾಗ್ರಾಮ್ ಮೂಲಕ ಈ ವಿಷಯ ತಿಳಿಸಿದ್ದಾರೆ. ನಟಿ 2012 ರಲ್ಲಿ ಉದ್ಯಮಿ ಜೇಸನ್ ಡೆಹ್ನಿ ಅವರನ್ನು ವಿವಾಹವಾದರು ಮತ್ತು ಜೂನ್ 2020 ರಲ್ಲಿ ಬಾಡಿಗೆ ತಾಯ್ತನದ ಮೂಲಕ ತಾಯಿಯಾದರು.

ಕೃಷ್ಣ - ಕಾಶ್ಮೀರ:
ಬಾಲಿವುಡ್‌ ನಟ ಗೋವಿಂದ ಅವರ ಸೋದರಳಿಯ ಮತ್ತು ಕಾಮಿಡಿಯನ್‌ ಕೃಷ್ಣ ಅಭಿಷೇಕ್ ಕೂಡ ಬಾಡಿಗೆ ತಾಯ್ತನದ ಸಹಾಯದಿಂದ ಅವಳಿ ಮಕ್ಕಳ ತಂದೆಯಾಗಿದ್ದಾರೆ. ಕೃಷ್ಣ ಅಭಿಷೇಕ್ ಮತ್ತು ಅವರ ಪತ್ನಿ ಕಾಶ್ಮೀರಾ ಶಾ 2013 ರಲ್ಲಿ ವಿವಾಹವಾದರು. ಸರೋಗೆಸಿ ಸಹಾಯದಿಂದ ಇಬ್ಬರೂ ಮೊದಲ ಬಾರಿಗೆ ಪೋಷಕರಾಗಿದ್ದಾರೆ.

ಸೊಹೈಲ್ ಖಾನ್:
ಸಲ್ಮಾನ್ ಖಾನ್ ಅವರ ಕಿರಿಯ ಸಹೋದರ ಸೋಹೈಲ್ ಖಾನ್ ಬಾಡಿಗೆ ತಾಯ್ತನದ ಸಹಾಯದಿಂದ ಮತ್ತೊಂದು ಮಗುವಿನ ಸಂತೋಷವನ್ನು ಕಂಡುಕೊಂಡಿದ್ದಾರೆ. ಅವರು ಮೊದಲು ನಿರ್ವಾಣ ಎಂಬ ಮಗನ ತಂದೆಯಾಗಿದ್ದರು. ಆದರೆ ಮತ್ತೊಂದು ಮಗುವಿನ ಆಸೆಯಿಂದ ಸೊಹೈಲ್ ಖಾನ್ ಬಾಡಿಗೆ ತಾಯ್ತನವನ್ನು ಆಶ್ರಯಿಸಿದರು. ಅವರು ತಮ್ಮ ಕಿರಿಯ ಮಗನಿಗೆ ಜೋಹಾನ್ ಎಂದು ಹೆಸರಿಟ್ಟಿದ್ದಾರೆ.

Latest Videos

click me!