Orange Dog: ನಾಯಿ ಫೋಟೋಶೂಟ್, ಕಲರಿಂಗ್‌ಗೆ ಖರ್ಚು ಮಾಡಿದ್ದು 5 ಲಕ್ಷ

Published : Nov 20, 2021, 09:57 AM ISTUpdated : Nov 20, 2021, 10:15 AM IST

ಜನರು ಕಲರಿಂಗ್(Coloring) ಮಾಡೋದನ್ನು ನೋಡಿರುತ್ತೀರಿ. ಹೇರ್ ಕಲರಿಂಗ್(Hair Coloring) ಎಂಬುದು ಈಗಿನ ಜಮಾನದ ಟ್ರೆಂಡ್. ಆದರೆ ನಾಯಿಗೂ ಕಲರಿಂಗ್ ಮಾಡ್ಸಿದ್ದು ನೋಡಿದ್ದೀರಾ ? ಇಲ್ಲಿ ನೋಡಿ

PREV
110
Orange Dog: ನಾಯಿ ಫೋಟೋಶೂಟ್, ಕಲರಿಂಗ್‌ಗೆ ಖರ್ಚು ಮಾಡಿದ್ದು 5 ಲಕ್ಷ

ರಷ್ಯಾದ ಮಾಡೆಲ್ (Russian Model)ಮತ್ತು ಇನ್‌ಸ್ಟಾಗ್ರಾಮ್ ಇನ್‌ಫ್ಲುಯೆನ್ಸರ್ ಅನ್ನಾ ಸ್ತೂಪಕ್ (Anna Stupak) ತನ್ನ ಮುದ್ದಿನ ಪೂಚ್‌ಗೆ ಫ್ಯಾಶನ್ ಟಚ್ ಕೊಟ್ಟಿದ್ದಾರೆ. ನಿಯಾನ್ ಕಿತ್ತಳೆ ಮೇಕ್ ಓವರ್ ಅನ್ನು ನೀಡಿದ್ದು ಇದನ್ನು ಮಾಡಿರೋದು ಫೋಟೋಶೂಟ್‌ಗಾಗಿ(Photoshooot) ಮಾಡೆಲ್ ತನ್ನ Instagram ಖಾತೆಯಲ್ಲಿ ತನ್ನ ಮೆಚ್ಚಿನ ನಾಯಿಯ ಅನೇಕ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

210

ಅದು ಅದರ ಬಾಲ ಮತ್ತು ಮುಖವನ್ನು ಹೊರತುಪಡಿಸಿ, ನಿಯಾನ್ ಕಿತ್ತಳೆ ಬಣ್ಣದಲ್ಲಿ ಸ್ಟೈಲಿಷ್ ಆಗಿ ಕಾಣಿಸಿದೆ. ಒಂದು ಪೋಸ್ಟ್‌ನಲ್ಲಿ, ಪ್ಲೇಬಾಯ್ ಮಾಡೆಲ್ ತನ್ನ ಚಂದದ ನಾಯಿಯನ್ನು (Dog)ಫೋಟೋಶೂಟ್‌ಗಾಗಿ ಕ್ಯಾಂಡಿಯಂತೆ ಕಾಣುವಂತೆ ಮಾಡಲು ಸುಮಾರು 5 ಲಕ್ಷ ಖರ್ಚು ಮಾಡಿದೆ ಎಂದು ಬಹಿರಂಗಪಡಿಸಿದ್ದಾರೆ.

310

ಆಕೆಯ Instagram ಖಾತೆಯಲ್ಲಿ ಸುಮಾರು 9 ಮಿಲಿಯನ್ ಫಾಲೋವರ್ಸ್‌ ಜೊತೆ ಹಂಚಿಕೊಂಡ ಫೋಟೋ ಪ್ರಪಂಚದಾದ್ಯಂತದ ಶ್ವಾನ ಪ್ರೇಮಿಗಳಿಂದ ತೀವ್ರ ಟೀಕೆಗೆ ಗುರಿಯಾಗಿದೆ. ಈ ಅಭ್ಯಾಸ ಸುರಕ್ಷಿತವಾಗಿದೆಯೇ ಎಂದು ಕೆಲವರು ಕಳವಳ ವ್ಯಕ್ತಪಡಿಸಿದರೆ, ಇನ್ನು ಕೆಲವರು ಪ್ರಾಣಿಗಳೀಗೆ ಕಲರಿಂಗ್ ಮಾಡೋದು ತಪ್ಪು ಎಂದಿದ್ದಾರೆ.

410

ಸ್ತೂಪಕ್ ತನ್ನ ಆರಾಧ್ಯ ಪುಟ್ಟ ಪೂಚ್ ಫೋಟೋವನ್ನು ಮೂರು ವಾರಗಳ ಹಿಂದೆ Instagram ನಲ್ಲಿ ಹಂಚಿಕೊಂಡಿದ್ದಾರೆ. ಡಾಗ್ಗೊದ ಪ್ರಕಾಶಮಾನವಾದ ನಿಯಾನ್ ಕಿತ್ತಳೆ ಬಣ್ಣ ನೆಟ್ಟಿಗರನ್ನು ಅಚ್ಚರಿಗೊಳಿಸಿದರೂ ಇಂಪ್ರೆಸ್ ಮಾಡಿಲ್ಲ.

510

ಕೆಲವರು ನಾಯಿಗೆ ಬಣ್ಣ ಬಳಿಯುವುದು ನಿಜವಾಗಿಯೂ ಸುರಕ್ಷಿತವೇ? ಎಂದು ಕೇಳಿದರೆ, ಇತರರು ನಾಯಿಯು ಅದರ ಬಣ್ಣ ಹಚ್ಚಿದ ನಂತರ ಆರಾಮದಾಯಕವಾಗಿದೆಯೇ ಎಂದು ಪ್ರಶ್ನಿಸಿದ್ದಾರೆ. ಬಣ್ಣವು ಪ್ರಾಣಿಗಳ ಚರ್ಮವನ್ನು ನೋಯಿಸಲಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ ಮಾಡೆಲ್.

610

ಸಾಕುಪ್ರಾಣಿಯನ್ನು ತುಂಬಾ ಚೆನ್ನಾಗಿ ನೋಡಿಕೊಳ್ಳಲಾಗಿದೆ ಎಂದು ಮತ್ತೊಂದು ಕುತೂಹಲಕಾರಿ ನಾಯಿ ಪ್ರೇಮಿಗೆ ವಿವರಿಸಿದ್ದಾರೆ. ನನ್ನ ನಾಯಿಯನ್ನು ಹೆಚ್ಚಿನ ಜನರಿಗಿಂತ ಉತ್ತಮವಾಗಿ ನೋಡಿಕೊಳ್ಳಲಾಗುತ್ತದೆ ಎಂದು ಅವರು ಒತ್ತಿ ಹೇಳಿದ್ದಾರೆ.

710

ಬಳಕೆದಾರರ ಕಾಮೆಂಟ್‌ಗೆ ವಿರುದ್ಧವಾಗಿ ಅವರು, ಇದು ನಾಯಿಯ ಬಣ್ಣ ಹೊರತರುವ ಬಣ್ಣವಾಗಿದೆ. ಏಕೆಂದರೆ, ವಾಸ್ತವವಾಗಿ, ಇದು ಈಗಾಗಲೇ ಬಹುತೇಕ ಕಿತ್ತಳೆ ಬಣ್ಣವಾಗಿದೆ. ಅವನ ಚರ್ಮಕ್ಕೆ ಹಾನಿಯಾಗದಂತೆ ಎಲ್ಲವನ್ನೂ ಹೆಚ್ಚಿನ ಜವಾಬ್ದಾರಿಯಿಂದ ಮಾಡಲಾಗಿದೆ ಎಂದಿದ್ದಾರೆ.

810

ಸ್ತೂಪಕ್ ತನ್ನ ಮುದ್ದಿನ ತುಪ್ಪಳಕ್ಕೆ ಬಣ್ಣ ಹಚ್ಚಿದ್ದು ಇದೇ ಮೊದಲಲ್ಲ. ಈ ಹಿಂದೆ 2020 ರಲ್ಲಿ, ಅವರು ತಮ್ಮ ಸಾಕುಪ್ರಾಣಿಗೆ ಪ್ರಕಾಶಮಾನವಾದ ಗುಲಾಬಿ ಬಣ್ಣದಲ್ಲಿ ಬಣ್ಣ ಹಚ್ಚಿದ್ದರು.

910

ನಾಯಿಗಳ ಲೋಕದಲ್ಲೂ ಫ್ಯಾಷನ್ ಬಂದು ಬಿಟ್ಟಿದೆ. ಅವುಗಳಲ್ಲಿ ಕೆಲವರು ತಮ್ಮ ಸಾಕುಪ್ರಾಣಿಗಳಿಗೆ ಒಂದು ಅಥವಾ ಹೆಚ್ಚಿನ ಬಣ್ಣಗಳಲ್ಲಿ ಕರಿಂಗ್ ಮಾಡುತ್ತಾರೆ. ಸಾಕುಪ್ರಾಣಿ ವೃತ್ತಿಪರ ವಾಶ್‌ಪಾ ಪ್ರಕಾರ, ನಾಯಿ ಗ್ರೂಮರ್ ಈ ಮುದ್ದಾದ ಜೀವಿಗಳ ಹೊಳೆಯುವ ತುಪ್ಪಳ ಕೋಟ್ ಅನ್ನು ಬಣ್ಣ ಮಾಡಲು ನೈಸರ್ಗಿಕ, ಹಾನಿಕಾರಕವಲ್ಲದ, ವಿಷ-ಮುಕ್ತ ವಸ್ತುವನ್ನು ಬಳಸಿದರೆ ಇದರಿಂದ ತೊಂದರೆ ಇಲ್ಲ ಎಂದಿದ್ದಾರೆ.

1010

ತಮ್ಮ ಸಾಕು ನಾಯಿಯ ರೋಮಕ್ಕೆ ಕೋಟ್‌ಗೆ ಬಣ್ಣ ಹಚ್ಚಿದ್ದು ಇದೇ ಮೊದಲಲ್ಲ. ಈ ಹಿಂದೆ ಒಂಟಾರಿಯೊದ ಕೆನಡಾದ ಮಹಿಳೆಯೊಬ್ಬರು ತನ್ನ ನಾಯಿಗೆ ಮಳೆಬಿಲ್ಲಿನ ಎಲ್ಲಾ ಬಣ್ಣಗಳನ್ನು ಹಚ್ಚಿದ್ದರು.

Read more Photos on
click me!

Recommended Stories