1 Month Anniversary: ಮದ್ವೆಯಾಗಿ 1 ತಿಂಗಳು, ಇಂದೋರ್‌ಗೆ ಹಾರಿದ ಕತ್ರಿನಾ ಕೈಫ್ !

First Published | Jan 8, 2022, 6:16 PM IST

ಜನವರಿ 09 ರಂದು ವಿಕ್ಕಿ ಕೌಶಲ್ (Vicky Kaushal) ಮತ್ತು ಕತ್ರಿನಾ ಕೈಫ್ (Katrina Kaif) ಅವರ ವಿವಾಹವಾಗಿ ಒಂದು ತಿಂಗಳು ಪೂರ್ಣಗೊಳ್ಳಲಿದೆ. ಇದನ್ನು ಆಚರಿಸಲು, ಕತ್ರಿನಾ ಕೈಫ್ ಶುಕ್ರವಾರ ತಡರಾತ್ರಿ ಮುಂಬೈನಿಂದ ಇಂದೋರ್‌ಗೆ ಹಾರಿದ್ದಾರೆ.ಕತ್ರಿನಾ ಕೈಫ್ ತಮ್ಮ ಮೊದಲ ತಿಂಗಳ ವಾರ್ಷಿಕೋತ್ಸವದಲ್ಲಿ ವಿಕ್ಕಿ ಕೌಶಲ್ ಅವರೊಂದಿಗೆ ಇರಲು ಇಂದೋರ್‌ಗೆ ತೆರಳಿದ್ದಾರೆ ಈ ಸಮಯದ ಅವರ ಏರ್‌ಪೋರ್ಟ್‌ ಫೋಟೋಗಳು ವೈರಲ್‌ ಆಗಿವೆ.

ಬಾಲಿವುಡ್ ನಟರಾದ ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಅವರು ತಮ್ಮ ವಿವಾಹದ ಒಂದು ತಿಂಗಳನ್ನು ಜನವರಿ 09, ಭಾನುವಾರದಂದು ಪೂರ್ಣಗೊಳಿಸಲಿದ್ದಾರೆ. ಈ ಜೋಡಿ ಡಿಸೆಂಬರ್ 09, 2021 ರಂದು ರಾಜಸ್ಥಾನದ ಸವಾಯಿ ಮಾಧೋಪುರ ಜಿಲ್ಲೆಯ ಫೋರ್ಟ್ ಬರ್ವಾರಾದಲ್ಲಿ ವಿವಾಹವಾದರು.

ಅವರ ಮದುವೆಯ ಒಂದು ತಿಂಗಳ ವಾರ್ಷಿಕೋತ್ಸವದ ಮೊದಲು, ಕತ್ರಿನಾ ಮಧ್ಯಪ್ರದೇಶದ ಇಂದೋರ್‌ಗೆ ಹೋಗಲು ನಿರ್ಧರಿಸಿದರು, ಅಲ್ಲಿ ವಿಕ್ಕಿ ಪ್ರಸ್ತುತ ಅವರ ಮುಂದಿನ ಸಿನಿಮಾದ ಚಿತ್ರೀಕರಣದಲ್ಲಿದ್ದಾರೆ.ಕತ್ರಿನಾ ಇಂದೋರ್‌ಗೆ ತೆರಳಲು ಮುಂಬೈ ಏರ್‌ಪೋರ್ಟ್‌ನಲ್ಲಿ ಕಾಣಿಸಿಕೊಂಡರು 

Tap to resize

ಶುಕ್ರವಾರ ತಡರಾತ್ರಿ ಮುಂಬೈ ವಿಮಾನ ನಿಲ್ದಾಣದಲ್ಲಿ ಕತ್ರಿನಾ ಕೈಫ್ ಕಾಣಿಸಿಕೊಂಡಿದ್ದಾರೆ. ನಂತರ, ಅವರು ಇಂದೋರ್‌ನ ದೇವಿ ಅಹಲ್ಯಾಬಾಯಿ ಹೋಳ್ಕರ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದರು. ಅವರ ವಿವಾಹದ ಒಂದು ತಿಂಗಳು ಪೂರ್ಣಗೊಳ್ಳುತ್ತಿದ್ದಂತೆ ಸೆಲಬ್ರೆಟ್‌ ಮಾಡಲು ನಟಿ ಇಂದೋರ್‌ಗೆ ಆಗಮಿಸಿದರು.

ಪ್ರಸ್ತುತ ವಿಕ್ಕಿ ಕೌಶಲ್ ಸಾರಾ ಅಲಿ ಖಾನ್ ಜೊತೆ ಅವರ ಮುಂಬರುವ ಸಿನಿಮಾದ ಚಿತ್ರೀಕರಣದಲ್ಲಿದ್ದಾರೆ. ಹೆಸರಿಡದ ಈ ಚಿತ್ರವು 'ಲುಕಾ ಚುಪಿ' ನ ಮುಂದುವರಿದ ಭಾಗ ಎಂದು ವರದಿಯಾಗಿದೆ. ಆದರೆ ಸಿನಿಮಾ ವಿಭಿನ್ನ ಶೀರ್ಷಿಕೆಯನ್ನು ಹೊಂದಿರುತ್ತದೆ. ಹಳೆಯ ನಗರ ಪ್ರದೇಶಗಳಾದ ನಂದಲಾಲ್‌ಪುರ ಮತ್ತು ರಾಜವಾಡದಲ್ಲಿ ಚಿತ್ರದ ಚಿತ್ರೀಕರಣ ನಡೆಯುತ್ತಿದೆ. ಕತ್ರಿನಾ ಕೈಫ್ ಇಂದೋರ್ ವಿಮಾನ ನಿಲ್ದಾಣದಿಂದ ನೇರವಾಗಿ ವಿಕ್ಕಿ ಪ್ರಸ್ತುತ ಇರುವ ದಿ ಪಾರ್ಕ್ ಹೋಟೆಲ್‌ಗೆ ತೆರಳಿದರು.

ಕೋವಿಡ್-19 ಪ್ರಕರಣಗಳು ಹೆಚ್ಚುತ್ತಿರುವ ಕಾರಣದಿಂದ ಇಂದೋರ್‌ಗೆ ವಿಮಾನ ಪ್ರಯಾಣವನ್ನು ಕೈಗೊಳ್ಳುವ ಮೊದಲು ಕತ್ರಿನಾ ಅತ್ಯಂತ ಜಾಗರೂಕರಾಗಿರುತ್ತಿದ್ದರು. ನಟಿ ಮಾಸ್ಕ್ ಮತ್ತು ಫೇಸ್‌ ಶೀಲ್ದ್‌ ಧರಿಸಿದ್ದರು. ಮುಂಬೈ ವಿಮಾನ ನಿಲ್ದಾಣದ ಒಳಗೆ ಕಾಲಿಡುವ ಮೊದಲು ಅವರು  ತಮ್ಮ ಕೈಗಳನ್ನು ಸ್ಯಾನಿಟೈಜ್‌ ಮಾಡಿಕೊಳ್ಳುತ್ತಿರುವುದು ಫೋಟೋದಲ್ಲಿ ಕಂಡುಬಂದಿದೆ.

ಗುರುವಾರ, ಕತ್ರಿನಾ ಕೈಫ್, ವಿಕ್ಕಿ ಕೌಶಲ್, ಸನ್ನಿ ಕೌಶಲ್ ಮತ್ತು ಇಸಾಬೆಲ್ಲೆ ಕೈಫ್ ಇಸಾಬೆಲ್ಲೆ ಅವರ ಹುಟ್ಟುಹಬ್ಬವನ್ನು ಆಚರಿಸಲು ವೀಡಿಯೊ ಕರೆ ಮಾಡಿದರು. ಕತ್ರಿನಾ ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಅದರ ಫೋಟೋವನ್ನು ಹಂಚಿಕೊಂಡಿದ್ದಾರೆ.

ವಿಕ್ಕಿ ಕೌಶಲ್ ಮತ್ತು ಕತ್ರಿನಾ ಕೈಫ್ ಡಿಸೆಂಬರ್ 09 ರಂದು ರಾಜಸ್ಥಾನದಲ್ಲಿ ಸಖತ್‌ ಗ್ರ್ಯಾಂಡ್‌ ಆಗಿ ವಿವಾಹವಾದರು. ಇಬ್ಬರು ನಟರು ತಮ್ಮ ಮದುವೆಯ ವಿವರಗಳನ್ನು ಮುಚ್ಚಿಡಲು ಪ್ರಯತ್ನಿಸಿದ್ದರಿಂದ ಅವರ ಮದುವೆ ಬಗ್ಗೆ ಬಿ-ಟೌನ್‌ನಲ್ಲಿ ಭಾರೀ ಚರ್ಚೆಯಾಯಿತು.

Latest Videos

click me!