ಶಿಲ್ಪಾ ಶೆಟ್ಟಿ ಮಗಳ ಬರ್ತ್‌ಡೇಯಲ್ಲಿ ಶಮಿತಾ ಶೆಟ್ಟಿ ಜೊತೆ ರಾಕೇಶ್ ಬಾಪಟ್!
First Published | Feb 16, 2022, 5:21 PM ISTಫೆಬ್ರವರಿ 15, 2020 ರಂದು ಮುಂಬೈನಲ್ಲಿ ಜನಿಸಿದ ಶಿಲ್ಪಾ ಶೆಟ್ಟಿ (Shilpa Shetty) ಮಗಳು ಸಮೀಶಾ ಶೆಟ್ಟಿ ಕುಂದ್ರಾಗೆ (Samisha Kundra) ಎರಡು ವರ್ಷ ತುಂಬಿದೆ. ಶಿಲ್ಪಾ ತನ್ನ ಮಗಳ ಹುಟ್ಟುಹಬ್ಬದಂದು ಇನ್‌ಸ್ಟಾಗ್ರಾಮ್‌ನಲ್ಲಿ ಮುದ್ದಾದ ವೀಡಿಯೊವನ್ನು ಹಂಚಿಕೊಂಡಿದ್ದಾರೆ, ಇದರಲ್ಲಿ ಸಮೀಷಾ ಪಾಪಾ ರಾಜ್ ಕುಂದ್ರಾ ಅವರೊಂದಿಗೆ ಮೋಜು ಮಾಡುತ್ತಿರುವುದು ಕಂಡುಬಂದಿದೆ. ಶಿಲ್ಪಾ ಕೂಡ ತಮ್ಮ ಮಗಳ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿದರು. ಅಲಿಬಾಗ್‌ನಲ್ಲಿ ನಡೆದ ಈ ಆಚರಣೆಯಲ್ಲಿ ಕುಟುಂಬ (Family) ಮತ್ತು ವಿಶೇಷ ಸ್ನೇಹಿತರು (Friends) ಭಾಗಿಯಾಗಿದ್ದರು. ಶಿಲ್ಪಾ ಶೆಟ್ಟಿ ಅವರ ಮಗಳ ಹುಟ್ಟುಹಬ್ಬದ ಆಚರಣೆಯ ಕೆಲವು ಫೋಟೋಗಳು ಇಲ್ಲಿವೆ.