ಕೊರೋನಾ ನಂತರ ಬಪ್ಪಿ ದಾ ಧ್ವನಿ ಕಳೆದು ಕೊಂಡಿದ್ರಾ?
First Published | Feb 16, 2022, 3:52 PM ISTಡಿಸ್ಕೋ ಸಂಗೀತವನ್ನು ಹೊಸ ಎತ್ತರಕ್ಕೆ ಕೊಂಡೊಯ್ದ ಖ್ಯಾತ ಗಾಯಕ ಮತ್ತು ಸಂಯೋಜಕ ಬಪ್ಪಿ ಲಹಿರಿ (Bappi Lahiri) ಮಂಗಳವಾರ ರಾತ್ರಿ 11 ಗಂಟೆಗೆ ಮುಂಬೈನ ಕ್ರಿಟಿ ಕೇರ್ ಆಸ್ಪತ್ರೆಯಲ್ಲಿ ನಿಧನರಾದರು. ಅವರು ಹಲವು ದಿನಗಳಿಂದ ಅನಾರೋಗ್ಯದಿಂದ (Ill) ಬಳಲುತ್ತಿದ್ದರು. ಕಳೆದ ವರ್ಷವೂ ಅವರಿಗೆ ಕೊರೋನಾ (Covid19) ಸೋಂಕು ತಗುಲಿತ್ತು. ಅಂದಿನಿಂದ ಅವರ ಆರೋಗ್ಯ ನಿರಂತರವಾಗಿ ಕ್ಷೀಣಿಸುತ್ತಿತ್ತು. ಅಂದಹಾಗೆ, ಕಳೆದ ವರ್ಷ ಅವರ ಧ್ವನಿಯ ಬಗ್ಗೆ ವದಂತಿಯೂ ಇತ್ತು, ವಾಸ್ತವವಾಗಿ, ಅವರು ತಮ್ಮ ಧ್ವನಿಯನ್ನು ಕಳೆದುಕೊಂಡಿದ್ದಾರೆ ಎಂದು ವದಂತಿಗಳಿತ್ತು. ನಂತರ ಬಪ್ಪಿ ದಾ ಇದಕ್ಕೆ ಹೇಗೆ ಪ್ರತಿಕ್ರಿಯೆ ನೀಡಿದ್ದರು ಗೊತ್ತಾ?