ಡಿಸ್ಕೋ ಕಲ್ಪನೆ ಬಪ್ಪಿ ಲಹಿರಿಗೆ ಬಂದಿದ್ದು ಹೇಗೆ ಗೊತ್ತಾ?
First Published | Feb 16, 2022, 4:31 PM ISTಬಾಲಿವುಡ್‌ಗೆ (Bollywood) ಡಿಸ್ಕೋ (Disco) ಮತ್ತು ರಾಕ್ ಸಂಗೀತವನ್ನು (Rock Music) ಪರಿಚಯಿಸಿದ ಸಂಗೀತಗಾರ 69 ವರ್ಷದ ಬಪ್ಪಿ ಲಹಿರಿ (Bappi Lahari) ನಿಧನರಾಗಿದ್ದಾರೆ. ನಿನ್ನೆ ರಾತ್ರಿ 11 ಗಂಟೆ ಸುಮಾರಿಗೆ ಬಪ್ಪಿ ಲಹರಿ ಕೊನೆಯುಸಿರೆಳೆದಿದ್ದಾರೆ. ಬಪ್ಪಿ ಲಹಿರಿ ಅವರು ಬಹಳ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು, ಕ್ರಿಟಿ ಕೇರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಬಪ್ಪಿ ಲಹಿರಿಯನ್ನು ಸಂಗೀತ ಉದ್ಯಮದಲ್ಲಿ (World of Music) ಡಿಸ್ಕೋ ಕಿಂಗ್ (Disco King) ಎಂದು ಫೇಮಸ್ ಆಗಿದ್ದರು. ಬಪ್ಪಿ ಅವರ ನಿಜವಾದ ಹೆಸರು ಅಲೋಕೇಶ್ ಲಹಿರಿ. ಬಪ್ಪಿ ದಾ ಅವರು ತಮ್ಮ ವಿಶಿಷ್ಟ ಧ್ವನಿ ಮತ್ತು ಸಂಗೀತಕ್ಕಾಗಿ ಉದ್ಯಮದಲ್ಲಿ ಹೆಸರುವಾಸಿಯಾಗಿದ್ದರು. ಅವರು 1975 ರ ಘಕ್ಮಿ ಚಲನಚಿತ್ರದಿಂದ ಗುರುತಿಸಲ್ಪಟ್ಟರು. ಭಾರತಕ್ಕೆ (India) ಪಾಪ್ ಸಂಗೀತವನ್ನು ತಂದ ಕೀರ್ತಿ ಬಪ್ಪಿ ಲಹಿರಿಗೆ ಸಲ್ಲುತ್ತದೆ. ಅವರು ಡಿಸ್ಕೋ ಕಲ್ಪನೆಯನ್ನು ಹೇಗೆ ಎಂಬುದನ್ನು ಸಂದರ್ಶನವೊಂದರಲ್ಲಿ (Interview) ಬಹಿರಂಗಪಡಿಸಿದರು. ಡಿಸ್ಕೋ ಎಂಬ ಪದವನ್ನು ಬಾಲಿವುಡ್‌ಗೆ ನಾನು ಭಾರತೀಯ ಸಿನಿ ಕ್ಷೇತ್ರಕ್ಕೆ ತಂದಿದ್ದೇನೆ ಎಂಬುದನ್ನು ಹೇಳಿದ್ದರು.