ಬಾಕ್ಸ್‌ ಆಫೀಸ್‌ನಲ್ಲಿ ನೆಲಕಚ್ಚುತ್ತಿದೆ ಶಂಶೇರಾ: ರಣಬೀರ್ ಕಪೂರ್ ಕಮ್‌ಬ್ಯಾಕ್ ವಿಫಲ

Published : Jul 25, 2022, 06:03 PM ISTUpdated : Jul 25, 2022, 06:05 PM IST

ರಣಬೀರ್ ಕಪೂರ್ (Ranbir Kapoor) ಅಭಿನಯದ ಶಂಶೇರಾ (shamshera) ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ  ಸಂಚಲನ ಮೂಡಿಸಲು ವಿಫಲವಾಗಿದೆ . ಚಿತ್ರ ಬಿಡುಗಡೆಯಾದ ಮೂರು ದಿನಗಳ ಅಂಕಿ ಅಂಶಗಳು ನಿಜಕ್ಕೂ ಶಾಕಿಂಗ್ ಆಗಿದೆ. 3 ದಿನದಲ್ಲಿ ಚಿತ್ರ ಗಳಿಸಿದ್ದು 31.5 ಕೋಟಿ ಮಾತ್ರ. ಚಿತ್ರದ ವೀಕೆಂಡ್ ಕಲೆಕ್ಷನ್ ನೋಡಿ ಎಲ್ಲರೂ ಕೂಡ ಶಾಕ್ ಆಗಿದ್ದಾರೆ.

PREV
17
ಬಾಕ್ಸ್‌ ಆಫೀಸ್‌ನಲ್ಲಿ ನೆಲಕಚ್ಚುತ್ತಿದೆ ಶಂಶೇರಾ: ರಣಬೀರ್ ಕಪೂರ್ ಕಮ್‌ಬ್ಯಾಕ್ ವಿಫಲ

ಯಶ್ ರಾಜ್ ಬ್ಯಾನರ್ ಅಡಿಯಲ್ಲಿ ತಯಾರಾದ ಈ ಚಿತ್ರದಲ್ಲಿ ರಣಬೀರ್ ಕಪೂರ್, ಸಂಜಯ್ ದತ್ ಮತ್ತು ವಾಣಿ ಕಪೂರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರದ ಗಳಿಕೆಯ ವೇಗ ಮೊದಲ ದಿನದಿಂದ ಮಂದಗತಿಯಲ್ಲಿತ್ತು ಅಷ್ಟೇ ಅಲ್ಲ ಬಿಡುಗಡೆಗೂ ಮುನ್ನವೇ ಬಹಿಷ್ಕಾರ ಹಾಕಿ ಬಿಡುಗಡೆಯ ದಿನವೇ ಫ್ಲಾಪ್ ಎಂಬ ಟ್ಯಾಗ್ ನೀಡಲಾಗಿತ್ತು.
 

27

ಜುಲೈ 22 ರಂದು ಥಿಯೇಟರ್‌ಗಳಲ್ಲಿ ಬಿಡುಗಡೆಯಾದ ರಣಬೀರ್ ಕಪೂರ್ ಅವರ ಚಿತ್ರ ಶಂಶೇರಾ ಮೊದಲ ದಿನ 10.25 ಕೋಟಿ ಗಳಿಸಿತು. ಆದರೆ ಮುಂದಿನ ದಿನಗಳಲ್ಲಿ ಚಿತ್ರವು ಉತ್ತಮ ವ್ಯಾಪಾರ ಮಾಡುತ್ತದೆ ಎಂದು ನಿರೀಕ್ಷಿಸಲಾಗಿತ್ತು, ಆದರೆ ಅದು ಆಗಲಿಲ್ಲ.

37

ಎರಡನೇ ದಿನ ಗಳಿಕೆ ಅಂಕಿಅಂಶಗಳಲ್ಲಿ ಕೊಂಚ ಏರಿಕೆಯಾಗಿದೆ. ಎರಡನೇ ದಿನ ಚಿತ್ರ 10.50 ಕೋಟಿ ಗಳಿಸಿದೆ. ಇವೆರಡರ ಕಲೆಕ್ಷನ್ ಸೇರಿ ಚಿತ್ರ ಒಟ್ಟು 20.75 ಕೋಟಿ ಬ್ಯುಸಿನೆಸ್ ಮಾಡಿದೆ. 

47

ವರದಿಗಳ ಪ್ರಕಾರ, ಚಿತ್ರವು ಭಾನುವಾರ 10 ರಿಂದ 11 ಕೋಟಿ ಗಳಿಕೆ ಮಾಡಿದೆ. ವಾರಾಂತ್ಯದಲ್ಲಿ ಚಿತ್ರ ಉತ್ತಮ ಕಲೆಕ್ಷನ್ ಮಾಡುವ ನಿರೀಕ್ಷೆಯಿತ್ತು ಆದರೆ ಎಲ್ಲಾ ನಿರೀಕ್ಷೆಗಳು ಹುಸಿಯಾಗಿವೆ. ಹಿಂದಿ ಬೆಲ್ಟ್‌ನಿಂದ ದಕ್ಷಿಣ ಪ್ರೇಕ್ಷಕರನ್ನು ಸೆಳೆಯುವಲ್ಲಿ ಚಿತ್ರ ಯಶಸ್ವಿಯಾಗಲಿಲ್ಲ.
 

57

ಯಶ್ ರಾಜ್ ಫಿಲಂಸ್ ಬ್ಯಾನರ್ ಅಡಿಯಲ್ಲಿ ತಯಾರಾದ ಶಂಶೇರಾ ಚಿತ್ರ 150 ಕೋಟಿ ಬಜೆಟ್‌ನಲ್ಲಿ ತಯಾರಾಗಿದೆ. ಚಿತ್ರದ ಬಹುಪಾಲು ಚಿತ್ರೀಕರಣವನ್ನು ಲಡಾಖ್‌ನ ಸ್ಥಳಗಳಲ್ಲಿ ಮಾಡಲಾಗಿದೆ. ಚಿತ್ರದ ಗಳಿಕೆಯ ನಿಧಾನಗತಿಯನ್ನು ನೋಡಿದ ವಿಮರ್ಶಕರು ಚಿತ್ರದ ವೆಚ್ಚ ಸಹ ವಸೂಲಿಯಾಗುವುದು  ದೊಡ್ಡ ವಿಷಯ ಎಂದು ಹೇಳುತ್ತಾರೆ. 

67

ಅದೇ ಸಮಯದಲ್ಲಿ, ಯಶ್ ರಾಜ್‌ಗೆ ಈ ಸುದ್ದಿ ಕೂಡ ಆಶ್ಚರ್ಯಕರವಾಗಿದೆ. ಚಿತ್ರವು ಬಿಡುಗಡೆಯ ಜೊತೆಗೆ ಅನೇಕ ವೆಬ್‌ಸೈಟ್‌ಗಳಲ್ಲಿ ಲೀಕ್‌ ಆಗಿದೆ, ಇದು ಗಳಿಕೆಯ ಮೇಲೂ ಪರಿಣಾಮ ಬೀರುತ್ತಿದೆ. ವರದಿಗಳ ಪ್ರಕಾರ, ಮೂರು ದಿನಗಳಲ್ಲಿ ಚಿತ್ರದ ಪರಿಸ್ಥಿತಿ ಎಷ್ಟು ಹದಗೆಟ್ಟಿದೆ ಎಂದರೆ ಹಲವೆಡೆ ಪ್ರೇಕ್ಷಕರ ಕೊರತೆಯಿಂದಾಗಿ ಪ್ರದರ್ಶನಗಳನ್ನು ಸಹ ರದ್ದುಗೊಳಿಸಲಾಯಿತು.

77

ನವೆಂಬರ್‌ನಿಂದ ಇಲ್ಲಿಯವರೆಗೆ ಯಶ್ ರಾಜ್ ಬ್ಯಾನರ್‌ನ ಬಿಡುಗಡೆಯು ನಿರಂತರವಾಗಿ ಫ್ಲಾಪ್ ಆಗುತ್ತಿದೆ. ಬಂಟಿ ಔರ್ ಬಾಬ್ಲಿ 2, ಜಯೇಶ್‌ಭಾಯ್ ಜೋರ್ದಾರ್, ಸಾಮ್ರಾಟ್ ಪೃಥ್ವಿರಾಜ್ ನಂತರ ಈಗ ಶಂಶೇರಾ ಕೂಡ ಬಾಕ್ಸ್ ಆಫೀಸ್‌ನಲ್ಲಿ ನೆಲ ಕಚ್ಚಿದೆ.

Read more Photos on
click me!

Recommended Stories