ಶಾರುಖ್ ಖಾನ್‌ಗೆ ಗೌರಿಯೇ ಮೊದಲ ಲವ್ ಅಲ್ವಂತೆ! ಹೆಸರು ರಿವೀಲ್ ಮಾಡಿದ ಬಾಲಿವುಡ್ ಲವ್ ಬಾಯ್
First Published | Jan 13, 2023, 4:17 PM ISTಶಾರುಖ್ ಖಾನ್ (Shah Rukh Khan) ಈ ದಿನಗಳಲ್ಲಿ 'ಪಠಾಣ್' (Pathaan) ಕಾರಣದಿಂದಾಗಿ ಸಖತ್ ಟ್ರೆಂಡ್‌ನಲ್ಲಿದ್ದಾರೆ. ಇತ್ತೀಚೆಗೆ ಚಿತ್ರದ ಟ್ರೇಲರ್ ಕೂಡ ಬಿಡುಗಡೆಯಾಗಿದೆ. ಇದೇ ವೇಳೆ ಶಾರುಖ್ ಖಾನ್ ಟ್ವಿಟ್ಟರ್ ನಲ್ಲಿ ತಮ್ಮ ಅಭಿಮಾನಿಗಳೊಂದಿಗೆ ಸಂವಾದ ನಡೆಸಿದರು. ಈ ಸಂದರ್ಭದಲ್ಲಿ, #AskSrk ಸೆಷನ್‌ನಲ್ಲಿ, ಅವರು ಜನರ ಪ್ರಶ್ನೆಗಳಿಗೂ ಉತ್ತರಿಸಿದರು. ಇದರಲ್ಲಿ ಶಾರುಖ್ ತಮ್ಮ ಪಠಾಣ್ ಚಿತ್ರಕ್ಕೆ ಸಂಬಂಧಿಸಿದ ಪ್ರಶ್ನೆಗಳ ಬಗ್ಗೆಯೂ ಮಾತನಾಡಿದರು. ಅಷ್ಟೇ ಅಲ್ಲ ತಮ್ಮ ಮೊದಲ ಗರ್ಲ್‌ಫ್ರೆಂಡ್ ಬಗ್ಗೆಯೂ ಬಹಿರಂಗ ಪಡಿಸಿದ್ದಾರೆ.