ಕ್ಯಾಲಿಫೋರ್ನಿಯಾದಲ್ಲಿ ನಡೆದ ಸಮಾರಂಭದಲ್ಲಿ RRR ತಂಡ ಗೋಲ್ಡನ್ ಗ್ಲೋಬ್ ಪ್ರಶಸ್ತಿ (Golden Globe) ಗೆದ್ದ ನಂತರ ಆಲಿಯಾ ಭಟ್ (Alia Bhatt) RRR ಚಿತ್ರ ತಂಡಕ್ಕೆ ಪಾರ್ಟಿಯನ್ನು ಆಯೋಜಿಸಲಿದ್ದಾರೆ. 'ನಾಟು ನಾಟು' ಹಾಡು ಗೋಲ್ಡನ್ ಗ್ಲೋಬ್ ಗೆದ್ದ ನಂತರ ಇಡೀ ಆರ್‌ಆರ್‌ಆರ್ ತಂಡಗಾಗಿ ಆಲಿಯಾ ಭಟ್ ಅದ್ದೂರಿಯಾಗಿ ಪಾರ್ಟಿ ನೀಡಿ ಸಂಭ್ರಮಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.
ಮಂಗಳವಾರ ಕ್ಯಾಲಿಫೋರ್ನಿಯಾದ ಬೆವರ್ಲಿ ಹಿಲ್ಸ್‌ನಲ್ಲಿ ನಡೆದ ಗೋಲ್ಡನ್ ಗ್ಲೋಬ್ ಪ್ರಶಸ್ತಿ ಸಮಾರಂಭದಲ್ಲಿ ಎಸ್‌ಎಸ್ ರಾಜಮೌಳಿ ನಿರ್ದೇಶನದ ಬ್ಲಾಕ್‌ಬಸ್ಟರ್ ಚಲನಚಿತ್ರ ಆರ್‌ಆರ್‌ಆರ್ ನ ನಾಟು ನಾಟು ಒರಿಜಿನಲ್ಲಿ ದಿ ಬೆಸ್ಟ್ ಸಾಂಗ ಪ್ರಶಸ್ತಿ ಲಭ್ಯವಾಗಿದೆ.
29
ಎರಡು ವಿಭಾಗಗಲಲ್ಲಿ ಚಿತ್ರ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದು, RRR ಸಿನಿಮಾದ 'ನಾಟು ನಾಟು' ಗಾಗಿ ಅತ್ಯುತ್ತಮ ಮೂಲ ಗೀತೆಗಾಗಿ ಗೋಲ್ಡನ್ ಗ್ಲೋಬ್ ಪ್ರಶಸ್ತಿಯನ್ನು ಗೆದ್ದುಕೊಂಡಿತು. RRR ಗೋಲ್ಡನ್ ಗ್ಲೋಬ್ ಪ್ರಶಸ್ತಿಯನ್ನು ಗೆದ್ದ ಭಾರತದ ಏಕೈಕ ಚಲನಚಿತ್ರ.
39
ಈ ಮೂಲಕ ನಮ್ಮ ಭಾರತೀಯ ಚಿತ್ರರಂಗ ಹೊಸದೊಂದು ವಿಶ್ವ ದಾಖಲೆ ಮತ್ತು ಇತಿಹಾಸವನ್ನೇ ಸೃಷ್ಟಿಸಿದೆ. ಈ ಹಾಡಿನ ವಿಭಾಗದಲ್ಲಿ, ಸೆಲೆನಾ ಗೊಮೆಜ್ ಮತ್ತು ಟೇಲರ್ ಸ್ವಿಫ್ಟ್ ಸಹ ನಾಮನಿರ್ದೇಶನಗೊಂಡರು. ಆದರೆ ಈ ಹಾಡು ಎಲ್ಲರನ್ನು ಹಿಂದಿಕ್ಕಿ ಪ್ರಶಸ್ತಿ ಗೆದ್ದಿದೆ.
49
RRR ಹಾಡು ನಾಟು ನಾಟು ಗೋಲ್ಡನ್ ಗ್ಲೋಬ್ ಗೆದ್ದ ಕ್ಷಣದಿಂದ, ಸಾಮಾಜಿಕ ಮಾಧ್ಯಮ ಮತ್ತು ಇಂಟರ್ನೆಟ್‌ನಲ್ಲಿ ಅಭಿಮಾನಿಗಳಿಂದ ಚಿತ್ರ ತಂಡಕ್ಕೆ ಅಭಿನಂದೆಗಳ ಸುರಿ ಮಳೆಯಾಗುತ್ತಿದೆ.
59
ಸಂಗೀತ ಸಂಯೋಜಕ ಎಂಎಂ ಕೀರವಾಣಿ ಅವರು 80ನೇ ಗೋಲ್ಡನ್ ಗ್ಲೋಬ್ ಅವಾರ್ಡ್ಸ್‌ನಲ್ಲಿ ಅತ್ಯುತ್ತಮ ಮೂಲ ಗೀತೆ-ಚಲನ ಚಿತ್ರಕ್ಕಾಗಿ ವೇದಿಕೆಯಲ್ಲಿ ಪ್ರಶಸ್ತಿ ಸ್ವೀಕರಿಸಿದರು.
69
ಎಸ್‌ಎಸ್ ರಾಜಮೌಳಿ ನಿರ್ದೇಶನದ ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದ ಆಲಿಯಾ ಭಟ್‌ಗೂ ಸಹ ಇದು ಸಂತೋಷ ಕ್ಷಣವಾಗಿದೆ. ಈ ಹೆಗ್ಗುರುತು ಸಾಧನೆ ಮತ್ತು ಮೈಲಿಗಲ್ಲು ಗುರುತಿಸಲು ನಟಿ ಪಾರ್ಟಿ ನೀಡಲಿದ್ದಾರಂತೆ.
79
ಪ್ರಮುಖ ಮನರಂಜನಾ ಪೋರ್ಟಲ್‌ನ ವರದಿಗಳ ಪ್ರಕಾರ, ಆಲಿಯಾ ಭಟ್ ಅವರು ರಾಮ್ ಚರಣ್, ಎನ್‌ಟಿಆರ್ ಜೂನಿಯರ್, ಚಿತ್ರ ನಿರ್ದೇಶಕ ಎಸ್‌ಎಸ್ ರಾಜಮೌಳಿ ಮತ್ತು ಇಡೀ ಚಿತ್ರತಂಡ ಮತ್ತು ತಂಡದ ಸದಸ್ಯರಿಗೆ ಗ್ರ್ಯಾಂಡ್ ಪಾರ್ಟಿಯನ್ನು ನೀಡಲು ಸಿದ್ಧವಾಗಿದ್ದಾರೆ.
89
ಗೋಲ್ಡನ್ ಗ್ಲೋಬ್ಸ್ 2023 ಪ್ರಶಸ್ತಿ ಫಲಿತಾಂಶಗಳು ಅಧಿಕೃತವಾಗಿ ಬಹಿರಂಗವಾದ ತಕ್ಷಣ ಆಲಿಯಾ ಎಸ್‌ಎಸ್ ರಾಜಮೌಳಿ ಅವರಿಗೆ ಸಂದೇಶ ಕಳುಹಿಸಿದ್ದರು. ರಣಬೀರ್ ಕಪೂರ್ ಕೂಡ ಗೆಲುವಿಗೆ ಶುಭಾಶಯ ಕೋರಿದ್ದರು.
99
RRRನಲ್ಲಿ ರಾಮ್ ಚರಣ್ ರೊಮ್ಯಾಂಟಿಕ್ ಇಂಟರೆಸ್ಟ್ ಸೀತೆಯ ಪಾತ್ರದಲ್ಲಿ ಆಲಿಯಾ ಭಟ್ ಕಾಣಿಸಿಕೊಂಡಿದ್ದಾರೆ ನಟಿ ಆಕೆಯ ಅತಿಥಿ ಪಾತ್ರ ಚಿಕ್ಕದಾಗಿದ್ದರೂ, ಆಕೆಯ ನಟನೆಯು ಪ್ರಶಂಸಿಸಲ್ಪಟ್ಟಿತು. ಇದಲ್ಲದೆ ಎಸ್‌ಎಸ್ ರಾಜಮೌಳಿ ಅವರೊಂದಿಗೆ ಮತ್ತೊಂದು ಚಿತ್ರವನ್ನು ಸಹ ಪಡೆದುಕೊಂಡಿದ್ದಾರೆ, ಸೌತ್ ಸೂಪರ್‌ಸ್ಟಾರ್ ಮಹೇಶ್ ಬಾಬು ಅವರೊಂದಿಗೆ ಆಲಿಯಾ ಮುಖ್ಯ ಪಾತ್ರದಲ್ಲಿ ಇರಲಿದ್ದಾರೆ.