ಹಿಂದಿ, ತೆಲುಗು ಮತ್ತು ತಮಿಳು ಚಿತ್ರರಂಗದಲ್ಲಿ ಮಿಂಚಿರುವ ನಟಿ ಇಲಿಯಾನಾ ಡಿ ಕ್ರೂಸ್ ಜಿಮ್ ಮುಗಿಸಿಕೊಂಡು ತರಕಾರಿ ಶಾಪಿಂಗ್ ಮಾಡಿರುವ ಫೋಟೋ ಎಲ್ಲೆಡೆ ವೈರಲ್ ಆಗುತ್ತಿದೆ.
26
36 ವರ್ಷದ ಇಲಿಯಾನಾ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುತ್ತಾರೆ, ಹೀಗಾಗಿ ಒಂದು ದಿನವೂ ತಪ್ಪದೆ ವರ್ಕೌಟ್ ಮಾಡುತ್ತಾರೆ. ಹೆಲ್ತಿ ಫುಡ್ ಸೇವಿಸುತ್ತಾರೆ.
36
ಇಲಿಯಾನಾ ಡಿ ಕ್ರೂಸ್ ಈಗ ಜಿಮ್ ಮುಗಿಸಿಕೊಂಡು ರಸ್ತೆ ಬದಿಯಲ್ಲಿ ತರಕಾರಿ ಅಂಗಡಿಯಲ್ಲಿ ವ್ಯಾಪಾರ ಮಾಡಿದ್ದಾರೆ. ಈರುಳ್ಳಿ, ಆಲೂಗಡ್ಡೆ ಮತ್ತು ಬೆಳ್ಳುಳ್ಳಿ ಖರೀದಿ ಮಾಡಿದ್ದಾರೆ.
46
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ಫೋಟೋದ ಪ್ರಕಾರ ಇಲಿಯಾನಾ ಚೌಕಾಸಿ ಮಾಡುತ್ತಿರುವ ಹಾಗೆ ಕಾಣಿಸುತ್ತಿದ್ದಾರೆ. ಜಿಮ್ ವೇರ್‌ನಲ್ಲಿ ಮಿಂಚುತ್ತಿದ್ದಾರೆ.
56
ಟರ್ನ್ ಅಪ್ ಟ್ಯೂಸ್ಡೇ ಎಂದು ಬರೆದುಕೊಂಡು ಜಿಮ್ ಟೀ-ಶರ್ಟ್ ಮತ್ತು ಟೈಟ್ಸ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಇಲಿಯಾನಾ ಫಿಟ್ ಬಾಡಿ ನೋಡಿ ನೆಟ್ಟಿಗರು ಫಿದಾ ಆಗಿದ್ದಾರೆ.
66
ಸಾಮಾನ್ಯವಾಗಿ ಇಲಿಯಾ ಪ್ರವಾಸ ಮಾಡುವಾಗ ಅಥವಾ ಬೀಚ್ ಬಳಿ ಸಮಯ ಕಳೆಯುವಾಗ ಬಿಕಿನಿ ಧರಿಸುತ್ತಾರೆ. ಬಿಕಿನಿಯಲ್ಲಿ ದಪ್ಪ ಕಾಣುವ ಇಲಿಯಾನಾ ಜಿಮ್ ವೇರ್‌ನಲ್ಲಿ ಸಣ್ಣ ಕಾಣಿಸುತ್ತಿರುವುದು ಹೇಗೆಂದು ಪ್ರಶ್ನೆ ಮಾಡಿದ್ದಾರೆ ನೆಟ್ಟಿಗರು.