ಬಾಲಿವುಡ್‌ನ ಅನಭಿಷಿಕ್ತ ದೊರೆ ಶಾರುಖ್ ಖಾನ್‌ಗೆ ಪರಿಚಯದ ಅಗತ್ಯವಿಲ್ಲ. ನಟ, ಅವರ ಮೊದಲ ಚಲನಚಿತ್ರದಿಂದಲೇ ವ್ಯಾಪಕ ಖ್ಯಾತಿ ಮತ್ತು ಮನ್ನಣೆಯನ್ನು ಗಳಿಸಿದ್ದಾರೆ. ಮೂರು ದಶಕಗಳಿಗೂ ಹೆಚ್ಚು ವೃತ್ತಿಜೀವನದೊಂದಿಗೆ ಶಾರುಖ್ ಹಲವಾರು ಚಲನಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
ತನ್ನ ಲೇಡಿಲವ್ ಗೌರಿ ಖಾನ್ ಜೊತೆ ಆರ್ಯನ್, ಸುಹಾನಾ ಮತ್ತು ಅಬ್ರಾಮ್ ಖಾನ್ ಎಂಬ ಮೂರು ಮಕ್ಕಳ ತಂದೆಯಾಗಿ ಶಾರೂಖ್, ಪ್ರೀತಿಯ 'ಮನ್ನತ್'ನಲ್ಲಿ ವಾಸವಿದ್ದಾರೆ.
ಶಾರುಖ್ ಖಾನ್ ಅವರ 'ಮನ್ನತ್' ಹೆಸರಾಂತ ಉದ್ಯಮಿಯೊಬ್ಬರಿಗೆ ಸೇರಿದ್ದು ಮತ್ತು 90ರ ದಶಕದಲ್ಲಿ ವಿಭಿನ್ನ ಹೆಸರನ್ನು ಹೊಂದಿತ್ತು. ಆದಾಗ್ಯೂ, ನಟ ಅದರ ಮಾಲೀಕರಾಗಬೇಕೆಂದು ಕನಸು ಕಂಡರು ಮತ್ತು ನಾಲ್ಕು ವರ್ಷಗಳಲ್ಲಿ ತನ್ನ ಕನಸನ್ನು ನನಸಾಗಿಸಿದರು.
ವಿಲ್ಲಾ ವಿಯೆನ್ನಾ
1997ರಲ್ಲಿ ಶಾರುಖ್ 'ಯೆಸ್ ಬಾಸ್' ಎಂಬ ಚಿತ್ರದಲ್ಲಿ ನಟಿಸಿದ್ದರು. ಇದರಲ್ಲಿ ಚಾಂದ್ ತಾರೆ ಎಂಬ ಹಾಡಿದೆ. ಆ ಹಾಡಿನಲ್ಲಿ 'ವಿಲ್ಲಾ ವಿಯೆನ್ನಾ' ಮನೆ ಕಾಣಿಸುತ್ತದೆ. ಈ ಮನೆಯನ್ನು ನೋಡಿದ ಶಾರೂಖ್ ತಾನು ಈ ಮನೆಯ ಒಡೆಯನಾಗಬೇಕೆಂದು ಕನಸು ಕಂಡರು.
ಕೇವಲ ಈ ಮನೆಯನ್ನು ಪಡೆಯಲೋಸುಗ ನಟ ಸಿಕ್ಕ ಸಿಕ್ಕ ಚಿತ್ರಗಳನ್ನೆಲ್ಲ ಒಪ್ಪಿಕೊಳ್ಳುತ್ತಿದ್ದರು ಎನ್ನಲಾಗಿದೆ. ನಾಲ್ಕು ವರ್ಷಗಳ ನಂತರ ಶಾರೂಖ್ ಈ ಮನೆಯನ್ನು ಪ್ರಸಿದ್ಧ ಉದ್ಯಮಿ ನಾರಿಮನ್ ದುಬಾಶ್ ಅವರಿಂದ ಖರೀದಿಸಿದರು.
ಈ ಮನೆ ಖರೀದಿಗೆ ಶಾರೂಖ್ ಕೊಟ್ಟ ಹಣ 13.32 ಕೋಟಿ ರೂ. ನಂತರ ಈ ವಿಲ್ಲಾ ವಿಯೆನ್ನಾಗೆ 'ಮನ್ನತ್' ಎಂದು ಹೆಸರಿಟ್ಟರು. ಮನೆಯನ್ನು ಖರೀದಿಸಿದ ಮೇಲೆ ಅದನ್ನು ಗೌರಿ ಖಾನ್ ಮತ್ತಷ್ಟು ಬೇರೆ ರೀತಿಯಲ್ಲಿ ವಿನ್ಯಾಸಗೊಳಿಸಿದರು.
ಇಂದು ಮುಂಬೈನ ಪ್ರಸಿದ್ಧ ಮನೆಗಳಲ್ಲಿ ಈ 'ಮನ್ನತ್' ಕೂಡಾ ಒಂದಾಗಿದ್ದು, ಇದರ ಮಾರುಕಟ್ಟೆ ಬೆಲೆ ಬರೋಬ್ಬರಿ 200 ಕೋಟಿ ರೂ.!
ಶಾರುಖ್ ಖಾನ್ ಅವರ ಡುಂಕಿ ಸಹನಟ ವಿಕ್ರಮ್ ಕೊಚ್ಚರ್ ಮನ್ನತ್‌ನಲ್ಲಿ ವಿಮಾನ ನಿಲ್ದಾಣದಂತಹ ಮತ್ತು ಪಂಚತಾರಾ ಹೋಟೆಲ್‌ನಂತಹ ಭದ್ರತೆಯ ಜೊತೆಗೆ ದೊಡ್ಡ ಹಾಲ್, ದೊಡ್ಡ ಪ್ರವೇಶದ್ವಾರ, ಲಾಬಿ ಮತ್ತು ಹೆಚ್ಚಿನವುಗಳಿವೆ ಎಂದು ಬಹಿರಂಗಪಡಿಸಿದ್ದಾರೆ.
IVM ಪಾಪ್ ಪಾಡ್‌ಕ್ಯಾಸ್ಟ್‌ನಲ್ಲಿ ಗುಲ್ಶನ್ ದೇವಯ್ಯ ಅವರು ಒಮ್ಮೆ ಪಾರ್ಟಿಯಲ್ಲಿ ಭಾಗವಹಿಸಲು ಮನ್ನತ್‌ಗೆ ಹೋಗಿರುವುದಾಗಿ, ಪ್ರವೇಶ ದ್ವಾರದಲ್ಲೇ ರಾಧಾ-ಕೃಷ್ಣ ವಿಗ್ರಹವಿರುವುದಾಗಿ ತಿಳಿಸಿದ್ದಾರೆ.
ಹೋಮ್ ಬೊಲಿವುಡ್‌ನ ಮತ್ತೊಂದು ಸಂದರ್ಶನದಲ್ಲಿ, ಶಾರುಖ್ ಖಾನ್ ಅವರು ಹೈ-ಟೆಕ್ನಾಲಜೀಸ್‌ಗಳಿಂದ ಆಕರ್ಷಿತರಾಗಿದ್ದಾರೆ ಮತ್ತು ಅವರ ಮನೆ ಮನ್ನತ್‌ನಲ್ಲಿ ಸಾಕಷ್ಟು ರೋಬೋಟ್‌ಗಳನ್ನು ಹೊಂದಿದ್ದಾರೆ ಎಂದು ವಿಕ್ರಮ್ ಪ್ರಸ್ತಾಪಿಸಿದ್ದಾರೆ.
ಅಂದ ಹಾಗೆ ಮನ್ನತ್‌ಗೆ ಹೋದವರಿಗೆ ಅತ್ಯಂತ ಪ್ರೀತಿಯಿಂದ ನಡೆಸಿಕೊಳ್ಳುತ್ತಾರೆ ಎಂದು ಶಾರೂಖ್‌ರನ್ನು ಇದುವರೆಗೂ ಹಲವಾರು ಸಹನಟರು ಮೆಚ್ಚಿ ಮಾತಾಡಿದ್ದಾರೆ.