ನೀಲಿ ಸೀರೆಯಲ್ಲಿ ಮತ್ಸ್ಯಕನ್ಯೆಯಂತೆ ಕಂಡ ಅನುಪಮಾ ಪರಮೇಶ್ವರನ್: ಏನಮ್ಮಾ ನಿನ್ನ ವಯ್ಯಾರ ಎಂದ ಫ್ಯಾನ್ಸ್‌!

Published : Apr 06, 2024, 10:33 AM IST

ಬಹುಭಾಷಾ ನಟಿ ಅನುಪಮಾ ಪರಮೇಶ್ವರನ್ ಬ್ಯೂಟಿಫುಲ್ ಫೋಟೋಗಳನ್ನು ಶೇರ್​ ಮಾಡಿದ್ದಾರೆ. ನೀಲಿ ಸೀರೆಯಲ್ಲಿ ಅನುಪಮಾ ಪರಮೇಶ್ವರ್​ ಮತ್ಸ್ಯಕನ್ಯೆಯಂತೆ ಕಾಣ್ತಿದ್ದಾರೆ.

PREV
18
ನೀಲಿ ಸೀರೆಯಲ್ಲಿ ಮತ್ಸ್ಯಕನ್ಯೆಯಂತೆ ಕಂಡ ಅನುಪಮಾ ಪರಮೇಶ್ವರನ್: ಏನಮ್ಮಾ ನಿನ್ನ ವಯ್ಯಾರ ಎಂದ ಫ್ಯಾನ್ಸ್‌!

ಬಹು ಭಾಷಾ ನಟಿ ಅನುಪಮಾ ಪರಮೇಶ್ವರನ್ ಫೋಟೋಶೂಟ್  ಮೂಲಕ ಮಿಂಚುತ್ತಿದ್ದಾರೆ. ಗ್ಲಾಮರಸ್ ಆಗಿ ಕಾಣಿಸಿಕೊಂಡ ಅನುಪಮಾ ಪರಮೇಶ್ವರನ್​ ನೋಟದಲ್ಲಿ ಜನರ ಮನಗೆದ್ದಿದ್ದಾರೆ.

28

ಅನುಪಮಾ ಪರಮೇಶ್ವರನ್ ಸಿಂಪಲ್ ಆಗಿಯೇ ಇರ್ತಾರೆ. ಪಾತ್ರಗಳು ಅಂತ ಬಂದ್ರೆ ಅದಕ್ಕೆ ತಕ್ಕನಾಗಿಯೇ ಬದಲಾಗುತ್ತಾರೆ. ಬೋಲ್ಡ್​ ಪಾತ್ರಗಳಿಗೂ ನಟಿ ಸೈ ಎಂದಿದ್ದಾರೆ.

38

ಇದೀಗ ಅನುಪಮಾ ಪರಮೇಶ್ವರನ್ ನೀಲಿ ಸೀರೆಯಲ್ಲಿ ಪೋಟೋಶೂಟ್ ಮಾಡಿಸಿದ್ದು, ವಿವಿಧ ಭಂಗಿಗಳಲ್ಲಿ ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ. ಸದ್ಯ ಕ್ಯೂಟ್ ಆಗಿರುವ ಈ ಫೋಟೋಸ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

48

ನೀಲಿ ಬಿಳಿ ಕಾಂಬಿನೇಷನ್ ಮತ್ಸ್ಯಕನ್ಯೆ ತರಹ ಅನುಪಮಾ ಪರಮೇಶ್ವರನ್ ಕಾಣುತ್ತಿದ್ದು, ಮ್ಯಾಚಿಂಗ್ ಕಲರ್‌ನ ಇಯರಿಂಗ್ ಕೂಡಾ ಹಾಕಿದ್ದಾರೆ. ಜೊತೆಗೆ ಕರ್ಲಿ ಹೇರ್​ ಲುಕ್ ಸಖತ್ ಆಗಿಯೇ ಇದೆ. ಅದೇ ಲುಕ್ ಅಲ್ಲಿಯೇ ಈಗ ಎಲ್ಲರ ದಿಲ್ ಕದಿಯುತ್ತಿದ್ದಾರೆ.

58

ಅನುಪಮಾ ಪರಮೇಶ್ವರನ್ ಕೇವಲ ಒಂದೇ ಭಾಷೆಗೆ ಸೀಮಿತವಾಗಿರೋ ನಟಿ ಅಲ್ವೇ ಅಲ್ಲ. ಕನ್ನಡ, ತೆಲುಗು, ತಮಿಳು, ಮಲೆಯಾಳಂ ಹೀಗೆ ದಕ್ಷಿಣದ ಅಷ್ಟೂ ಭಾಷೆಯಲ್ಲೂ ಅಭಿನಯಿಸಿದ್ದಾರೆ.

68

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿನಯದ ನಟಸಾರ್ವಭೌಮ ಚಿತ್ರದಲ್ಲಿ ಶೃತಿ ಹೆಸರಿನ ಪಾತ್ರದಲ್ಲಿ ಅನುಪಮಾ ಪರಮೇಶ್ವರನ್ ಅಭಿನಯಿಸಿದ್ದರು. ಸದ್ಯ ಅವರ ಫೋಟೋಸ್ ನೋಡಿದ ನೆಟ್ಟಿಗರು ಏನಮ್ಮಾ ನಿನ್ನ ವಯ್ಯಾರ ಎಂದಿದ್ದಾರೆ.

78

ಪುನೀತ್ ಅಭಿನಯದ ನಟಸಾರ್ವಭೌಮ ಚಿತ್ರದ ಮೂಲಕವೇ ನಟಿ ಅನುಪಮಾ ಪರಮೇಶ್ವರನ್ ಕನ್ನಡಕ್ಕೆ ಕಾಲಿಟ್ಟಿದ್ದರು. ನಟಿ ಅನುಪಮಾ ಹಲವು ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ.

88

ನಟಿ ಅನುಪಮಾ ಪರಮೇಶ್ವರನ್ ಸದ್ಯ ತಮ್ಮ ಟಿಲ್ಲು ಸ್ವೇರ್ ಸಿನಿಮಾದಿಂದ ಸಖತ್ ಸುದ್ದಿಯಲ್ಲಿದ್ದಾರೆ. ಚಿತ್ರದಲ್ಲಿ ಬೋಲ್ಡ್ ಆಗಿ ನಟಿಸಿ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ. 

Read more Photos on
click me!

Recommended Stories