ಗೋಲ್ಡನ್ ಬಾರ್ಡರ್ ಸೀರೆಯಲ್ಲಿ ಅಣ್ಣಾಬಾಂಡ್ ನಟಿ: ತುಂಬಾ ನೋಡ್ಬೇಡಿ ಲವ್ವು ಆಯ್ತದೆ ಎಂದ ಫ್ಯಾನ್ಸ್‌!

Published : Apr 06, 2024, 12:22 PM IST

ಬೆಂಗಳೂರಿನ ಬೆಡಗಿ ಪ್ರಿಯಾಮಣಿ ಇದೀಗ ಬಾಲಿವುಡ್‌ನಲ್ಲಿ ಮಿಂಚುತ್ತಿದ್ದಾರೆ. ‘ಜವಾನ್’ ಸಕ್ಸಸ್ ನಂತರ ಕನ್ನಡದ ಹುಡುಗಿಗೆ ಬಿಟೌನ್‌ನಲ್ಲಿ ಬೇಡಿಕೆ ಜಾಸ್ತಿ ಆಗಿದೆ. ಹಾಗಾಗಿ ಹೊಸ ಹೊಸ ಫೋಟೋ ಶೂಟ್‌ಗಳಲ್ಲಿ ಅವರು ಭಾಗಿಯಾಗುತ್ತಲೇ ಇದ್ದಾರೆ.   

PREV
17
ಗೋಲ್ಡನ್ ಬಾರ್ಡರ್ ಸೀರೆಯಲ್ಲಿ ಅಣ್ಣಾಬಾಂಡ್ ನಟಿ: ತುಂಬಾ ನೋಡ್ಬೇಡಿ ಲವ್ವು ಆಯ್ತದೆ ಎಂದ ಫ್ಯಾನ್ಸ್‌!

ಪ್ರಿಯಾಮಣಿ ಅವರು ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿಯೂ ಆ್ಯಕ್ಟಿವ್ ಆಗಿದ್ದಾರೆ. ಫೋಟೋ ಹಾಗೂ ವಿಡಿಯೋಗಳನ್ನು ಆಗಾಗ ಫ್ಯಾನ್ಸ್ ಜೊತೆ ಶೇರ್ ಮಾಡುತ್ತಿರುತ್ತಾರೆ.

27

ಇದೀಗ ಅವರು ಹೊಸ ಫೋಟೋಗಳನ್ನು ಹಂಚಿಕೊಂಡಿದ್ದು, ಬಿಳಿ ಸೀರೆ ತೊಟ್ಟು ಕ್ಯಾಮೆರಾಗೆ ಸಖತ್ತಾಗಿಯೇ ಪೋಸ್ ನೀಡಿದ್ದಾರೆ. ಆ ಫೋಟೋಗಳಿಗೆ ಅಭಿಮಾನಿಗಳು ಫಿದಾ ಆಗಿ ತುಂಬಾ ನೋಡ್ಬೇಡಿ ಲವ್ವು ಆಯ್ತದೆ ಎಂದಿದ್ದಾರೆ.

37

ಪ್ರಿಯಾಮಣಿ ಬಿಳಿ ಬಣ್ಣದ ಗೋಲ್ಡನ್ ಬಾರ್ಡರ್ ಸೀರೆಯಲ್ಲಿ ಮಿಂಚಿದ್ದು, ಅದಕ್ಕೆ ಮ್ಯಾಚಿಂಗ್ ಆಗುವ ಹಾಗೆ ಬಿಳಿ ಸ್ಟೋನ್‌ನ ಬಳೆ ಹಾಗೂ ಮ್ಯಾಚಿಂಗ್ ಕಿವಿಯೋಲೆ ಧರಿಸಿದ್ದಾರೆ.

47

ಪ್ರಿಯಾಮಣಿ ಅವರು ಹೊಸ ಅವಕಾಶಗಳನ್ನು ಎಕ್ಸ್​ಪ್ಲೋರ್ ಮಾಡುತ್ತಿದ್ದಾರೆ. ನಟಿ ಜವಾನ್ ಸಿನಿಮಾ, ಫ್ಯಾಮಿಲಿ ಮ್ಯಾನ್ ವೆಬ್ ಸಿರೀಸ್, ನೆರು ಮಲಯಾಳಂ ಮೂವಿಯಲ್ಲಿ ಕಾಣಿಸಿಕೊಂಡಿದ್ದರು.

57

ಇದೀಗ ಪ್ರಿಯಾಮಣಿ ಮೈದಾನ್ ಸಿನಿಮಾದಲ್ಲಿಯೂ ಮಹತ್ವದ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ನಟಿ ಈ ಬಿಳಿ ಸೀರೆ ಉಟ್ಟು ಸಿನಿಮಾದ ಪ್ರಚಾರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

67

ಪ್ರಿಯಾಮಣಿ ಅವರು ಸೌತ್ ಚಿತ್ರರಂಗದಲ್ಲಿ ಅದ್ಭುತವಾಗಿ ಹೆಸರು ಗಳಿಸಿದ್ದಾರೆ. ಮಲಯಾಳಂ, ತಮಿಳು, ಕನ್ನಡ ಸಿನಿಮಾಗಳಲ್ಲಿ ನಟಿಸಿ ಅಪಾರ ಅಭಿಮಾನಿಗಳನ್ನು ಗಳಿಸಿದ್ದಾರೆ.

77

ಪ್ರಿಯಾಮಣಿ ಕನ್ನಡದಲ್ಲೂ ಹಲವು ಸಿನಿಮಾದಲ್ಲಿ ನಟಿಸಿದ್ದಾರೆ. ಅಣ್ಣಾಬಾಂಡ್‌, ನನ್ನ ಪ್ರಕಾರ, ಧ್ವಜ, ಚೌಕ, ಇದೊಳ್ಳೆ ರಾಮಾಯಾಣ, ದನ ಕಾಯೋನು, ಕಲ್ಪನಾ 2, ಕಥೆ ಚಿತ್ರಕಥೆ ನಿರ್ದೇಶನ ಪುಟ್ಟಣ್ಣ ಹೀಗೆ ಹಲವು ಸಿನಿಮಾಗಳ ಮೂಲಕ ಕನ್ನಡ ಸಿನಿಪ್ರೇಕ್ಷಕರಿಗೆ ಚಿರಪರಿಚಿತರಾಗಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories