ಕರಿಷ್ಮಾ, ಕಾಜೋಲ್‌ಗಿಂತ ಫೇಮಸ್ ಆದ ನಟಿಯೀಕೆ; ಬೆತ್ತಲೆ ಫೋಟೋಶೂಟ್‌ ಮಾಡಿ ಕೆರಿಯರ್ ಹಾಳಾಯ್ತು!

First Published | Oct 27, 2023, 10:07 AM IST

ಬಾಲಿವುಡ್‌ನಲ್ಲಿ ತಮ್ಮ ಸೌಂದರ್ಯ ಮತ್ತು ಪ್ರತಿಭೆಯಿಂದಲೇ ಮಿಂಚಿದ ಹಲವಾರು ನಟ-ನಟಿಯರಿದ್ದಾರೆ. ಹಾಗೆಯೇ ಈ ನಟಿ, 90ರ ದಶಕದಲ್ಲಿ ಶಾರೂಕ್‌ ಖಾನ್‌, ಸಲ್ಮಾನ್‌ ಖಾನ್‌ ಜೊತೆ ನಟಿಸಿ ಫೇಮಸ್ ಆಗಿದ್ದರು. ಆದರೆ ತಮ್ಮ ವೃತ್ತಿಜೀವನದ ಉತ್ತುಂಗದಲ್ಲಿ ಒಂದು ದೊಡ್ಡ ತಪ್ಪು ಮಾಡಿದ್ದು, ಇದರಿಂದಾಗಿ ಸಂಪೂರ್ಣ ಕೆರಿಯರ್ ಹಾಳಾಯಿತು. 
 

ಬಾಲಿವುಡ್‌ನಲ್ಲಿ ತಮ್ಮ ಸೌಂದರ್ಯ ಮತ್ತು ಪ್ರತಿಭೆಯಿಂದಲೇ ಮಿಂಚಿದ ಹಲವಾರು ನಟ-ನಟಿಯರಿದ್ದಾರೆ. ಮಾಧುರಿ ದೀಕ್ಷಿತ್‌, ರವೀನಾ ಟಂಡನ್‌, ಕಾಜೋಲ್‌, ಕರಿಷ್ಮಾ ಹೀಗೆ ಹಲವಾರು ನಟಿಯರು ತಮ್ಮ ಅಭಿನಯದಿಂದ ಕೋಟ್ಯಾಂತರ ಅಭಿಮಾನಿಗಳನ್ನು ಗಳಿಸಿದ್ದರು. ಹಾಗೆಯೇ ಈ ನಟಿಯು 90ರ ದಶಕದಲ್ಲಿ ಬಾಲಿವುಡ್‌ನಲ್ಲಿ ಇವರೆಲ್ಲರಿಗಿಂತ ಹೆಚ್ಚು ಖ್ಯಾತಿ ಗಳಿಸಿದ್ದರು.

90ರ ದಶಕದಲ್ಲಿಈ ನಟಿ, ಶಾರೂಕ್‌ ಖಾನ್‌, ಸಲ್ಮಾನ್‌ ಖಾನ್‌ ಜೊತೆ ನಟಿಸಿ ಫೇಮಸ್ ಆಗಿದ್ದರು. ಆದರೆ ತಮ್ಮ ವೃತ್ತಿಜೀವನದ ಉತ್ತುಂಗದಲ್ಲಿ ಒಂದು ದೊಡ್ಡ ತಪ್ಪು ಮಾಡಿದ್ದು, ಇದರಿಂದಾಗಿ ಸಂಪೂರ್ಣ ಕೆರಿಯರ್ ಹಾಳಾಯಿತು. ಬಾಲಿವುಡ್‌ನಲ್ಲಿ ನಟಿಸುವ ಅವಕಾಶ ಕಡಿಮೆಯಾಯಿತು. ಆ ನಟಿ ಮತ್ಯಾರು ಅಲ್ಲ, ಬಾಲಿವುಡ್‌ನಲ್ಲಿ ಹೆಸರು ಮಾಡಿದ್ದ ನಟಿ ಮಮತಾ ಕುಲಕರ್ಣಿ.

Tap to resize

ಸೌಂದರ್ಯದ ಗಣಿಯಂತಿದ್ದ ನಟಿ ಮಮತಾ ಕುಲಕರ್ಣಿ. 9 ರ ದಶಕದಲ್ಲಿ ಅವರ ಸ್ಟಾರ್‌ಡಮ್ ಹೇಗಿತ್ತು ಎಂದರೆ ಆ ಕಾಲದ ಕರಿಷ್ಮಾ ಕಪೂರ್, ರವೀನಾ ಟಂಡನ್, ಜೂಹಿ ಚಾವ್ಲಾ, ಮಾಧುರಿ ದೀಕ್ಷಿತ್ ಮತ್ತು ಇತರ ಟಾಪ್ ನಟಿಯರೂ ಸಹ ಅವರ ಜನಪ್ರಿಯತೆಗೆ ಹೆದರುತ್ತಿದ್ದರು.

ತಮ್ಮ ವೃತ್ತಿಜೀವನದ ಉತ್ತುಂಗದಲ್ಲಿ, ಮಮತಾ ಕುಲಕರ್ಣಿ ಉದ್ಯಮದ ಬಹುತೇಕ ಎಲ್ಲ ಸೂಪರ್‌ಸ್ಟಾರ್‌ಗಳೊಂದಿಗೆ ಕೆಲಸ ಮಾಡಿದರು. ಹಲವು ಸಿನಿಮಾಗಳು ಸೂಪರ್‌ಹಿಟ್ ಆದವು.

ಮಮತಾ ಕುಲಕರ್ಣಿ ಮಧ್ಯಮ ವರ್ಗದ ಕುಟುಂಬಕ್ಕೆ ಸೇರಿದವರು. ಚಿತ್ರರಂಗಕ್ಕೆ ಕಾಲಿಟ್ಟ ತಕ್ಷಣ ಬಾಲಿವುಡ್‌ನಲ್ಲಿ ಛಾಪು ಮೂಡಿಸುವಲ್ಲಿ ಯಶಸ್ವಿಯಾದರು. ನಟಿ, ತಮ್ಮ ದಿಟ್ಟ ವರ್ತನೆಗೆ ಹೆಸರುವಾಸಿಯಾಗಿದ್ದರು. ಗ್ಲಾಮರಸ್ ಪಾತ್ರಗಳನ್ನು ಮಾಡುವುದರಿಂದ ಹಿಂದೆ ಸರಿಯಲಿಲ್ಲ. ಮಮತಾ ಕುಲಕರ್ಣಿ ತಮ್ಮ ವೃತ್ತಿಜೀವನದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದರು. 

ಈ ಸಂದರ್ಭದಲ್ಲೇ ಮಮತಾ ಹಲವು ವಿವಾದಗಳಲ್ಲಿ ಸಿಲುಕಿಹಾಕಿಕೊಂಡರು. ಮೊದಲು ತನ್ನ ನಗ್ನ ಫೋಟೋಶೂಟ್ ವಿವಾದದಿಂದ ಸುದ್ದಿಯಾದರು. ನಂತರ ಭೂಗತ ಪಾತಕಿ ವಿಕ್ಕಿ ಗೋಸ್ವಾಮಿ ಜೊತೆಗಿನ ಸಂಬಂಧವು ಸಾಕಷ್ಟು ವಿವಾದವನ್ನು ಸೃಷ್ಟಿಸಿತು. .

ಡ್ರಗ್ಸ್ ಪ್ರಕರಣದಲ್ಲೂ ಅವರ ಹೆಸರು ಕೇಳಿ ಬಂದಿತ್ತು. ಇದು ಅವರ ವೃತ್ತಿಜೀವನದ ಮೇಲೆ ಕೆಟ್ಟ ಪರಿಣಾಮ ಬೀರಿತು. ಬಾಲಿವುಡ್‌ನಲ್ಲಿ ಅವಕಾಶಗಳು ಕಡಿಮೆಯಾದವು.

ನಂತರ  ಕೆಲವೇ ಸಮಯದಲ್ಲಿ ಅವರು ಉದ್ಯಮದಿಂದ ಕಣ್ಮರೆಯಾದರು. ಸದ್ಯ ಮಮತಾ ಕುಲಕರ್ಣಿ ಈಗ ಚಿತ್ರರಂಗದಿಂದ ದೂರ ಉಳಿದಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲೂ ಅವರು ಹೆಚ್ಚು ಸಕ್ರಿಯವಾಗಿಲ್ಲ. 

Latest Videos

click me!