Hot ಲುಕ್‌ನಲ್ಲಿ ರಾ ರಾ ರಕ್ಕಮ್ಮ ಬೆಡಗಿ: ಜಾಕ್ವೆಲಿನ್ ಫರ್ನಾಂಡಿಸ್ Abs ನೋಡಿ ನೆಟ್ಟಿಗರೇ ಶಾಕ್!

Published : Oct 27, 2023, 12:30 AM IST

ಬಾಲಿವುಡ್‌ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಇದೀಗ ಹಾಟ್‌ ಗ್ಲಾಮರ್‌ನಲ್ಲಿ ಕಾಣಿಸಿಕೊಂಡು ಅಭಿಮಾನಿಗಳ ಹೃದಯದ ಬಡಿತ ಹೆಚ್ಚಿಸುತ್ತಿದ್ದಾರೆ. ಬಿಳಿ ಶರ್ಟ್‌ ಮತ್ತು ಕಪ್ಪು ಮಿನಿ ಸ್ಕರ್ಟ್‌ ತೊಟ್ಟು ಅವರು ಫೋಟೋಶೂಟ್‌ ಮಾಡಿಸಿಕೊಂಡಿದ್ದು, ಆ ಚಿತ್ರಗಳು ವೈರಲ್‌ ಆಗುತ್ತಿವೆ.

PREV
17
Hot ಲುಕ್‌ನಲ್ಲಿ ರಾ ರಾ ರಕ್ಕಮ್ಮ ಬೆಡಗಿ: ಜಾಕ್ವೆಲಿನ್ ಫರ್ನಾಂಡಿಸ್ Abs ನೋಡಿ ನೆಟ್ಟಿಗರೇ ಶಾಕ್!

ನಟಿ ಜಾಕ್ವೆಲಿನ್ ಫರ್ನಾಂಡಿಸ್ ಅವರು ಯಾವುದೇ ಉಡುಗೆ ಧರಿಸಿದರೂ ತುಂಬಾ ಸ್ಟೈಲಿಶ್‌ ಆಗಿ ಕಾಣಿಸುತ್ತಾರೆ. ಇತ್ತೀಚೆಗೆ ಇವರು ಪುಟ್ಟ ಸ್ಕರ್ಟ್‌ ತೊಟ್ಟು ಹಾಟ್ ಆಗಿ ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ.

27

ಜಾಕ್ವೆಲಿನ್ ಅವರು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಈ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಇವರು ಸ್ಯಾಂಡಲ್‌ವುಡ್‌ನ ಕಿಚ್ಚ ಸುದೀಪ್‌ ಜತೆಗೆ ವಿಕ್ರಾಂತ್‌ ರೋಣದಲ್ಲಿ ನಟಿಸಿದ್ದರು.

37

ಜಾಕ್ವೆಲಿನ್ ಪುಟ್ಟ ಅಂಗಿ ಮತ್ತು ಪುಟ್ಟ ಸ್ಕರ್ಟ್‌ನಲ್ಲಿ ಮುದ್ದಾಗಿ ಕಾಣಿಸುತ್ತಿರುವ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದು, ಸದ್ಯ ಈ ಫೋಟೋಗಳು ಸೋಷಿಯಲ್‌ ಮೀಡಿಯಾದಲ್ಲಿ ಸಖತ್ ವೈರಲ್‌ ಆಗಿದೆ, ಇನ್ನು ಜಾಕ್ವೆಲಿನ್ ಫರ್ನಾಂಡಿಸ್ Abs ನೋಡಿದ ನೆಟ್ಟಿಗರು ಶಾಕ್ ಆಗಿದ್ದಾರೆ. 

47

ಈ ಉಡುಗೆಯಲ್ಲಿ ಇವರು ವಿವಿಧ ಭಂಗಿಗಳಲ್ಲಿ ನಿಂತು ಆಕರ್ಷಕ ಪೋಸ್‌ಗಳನ್ನು ಕ್ಯಾಮೆರಾಗೆ ನೀಡಿದ್ದು, ಫೋಟೋಗಳ ನಡುವೆ ತನ್ನ ಅಚ್ಚುಮೆಚ್ಚಿನ ಶ್ವಾನದ ಜತೆಗೂ ಫೋಟೋ ತೆಗೆಸಿಕೊಂಡಿದ್ದಾರೆ. 

57

ಜಾಕ್ವೆಲಿನ್ ಫರ್ನಾಂಡಿಸ್ ಸಿನಿಮಾಗಳಿಗಿಂತ ವೈಯಕ್ತಿಕ ವಿಚಾರಕ್ಕೆ ಸುದ್ದಿಯಲ್ಲಿರುತ್ತಾರೆ. ಇತ್ತೀಚೆಗೆ ಕೇದರನಾಥ ದೇಗುಲಕ್ಕೆ ಸ್ನೇಹಿತರ ಜೊತೆ ಭೇಟಿ ನೀಡಿ ದೇವರ ದರ್ಶನ ಪಡೆದಿದ್ದರು.

67

ವರ್ಷದಲ್ಲಿ 6 ತಿಂಗಳು ಮಾತ್ರ ತೆರೆದಿರುವ ಕೇದಾರನಾಥ ದೇಗುಲಕ್ಕೆ ನಟಿ ಜಾಕ್ವೆಲಿನ್ ಅಕ್ಟೋಬರ್ 16 ರಂದು ಕೇದರನಾಥಕ್ಕೆ ಹೋಗಿ ವಿಶೇಷ ಪೂಜೆ ಸಲ್ಲಿಸಿದ್ದರು. ಇನ್‌ಸ್ಟಾಗ್ರಾಂ ಖಾತೆಯಲ್ಲಿ ದೇಗುಲದಲ್ಲಿರುವ ಫೋಟೋಗಳನ್ನು ಹಂಚಿಕೊಂಡಿದ್ದರು.

77

ಜಾಕ್ವೆಲಿನ್ ಫರ್ನಾಂಡಿಸ್ ಹಿಂದಿ ಸಿನಿಮಾಗಳಲ್ಲಿ ತನ್ನ ಸೌಂದರ್ಯದಿಂದ ಮಿಂಚುತ್ತಿರುವ ನಟಿ. ಈ ನಟಿ ಶ್ರೀಲಂಕಾದ ಪಶ್ಚಿಮ ಪ್ರಾಂತ್ಯದ ಕೊಲಂಬೊದಲ್ಲಿ ಜನಿಸಿದರು. ವಿಶೇಷವಾಗಿ 2006 ರಲ್ಲಿ ಶ್ರೀಲಂಕಾ ಯೂನಿವರ್ಸ್ ಕಿರೀಟವನ್ನು ಮುಡಿಗೇರಿಸಿಕೊಂಡರು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories