ಕೆಂಪು ದಾವಣಿಯಲ್ಲಿ ಮಿಂಚಿದ ವಜ್ರಕಾಯ ಬೆಡಗಿ: Nabha Natesh ನಾಚಿಕೆಗೆ ಫಿದಾ ಆದ ಪಡ್ಡೆಹೈಕ್ಳು!

First Published | Oct 27, 2023, 1:00 AM IST

ಶೃಂಗೇರಿಯ ಹುಡುಗಿ ನಭಾ ನಟೇಶ್‌ ಸೋಷಿಯಲ್‌ ಮಿಡಿಯಾದಲ್ಲಿ ಸಕ್ರಿಯವಾಗಿರುವ ನಟಿ. ಇವರು ಕನ್ನಡದ ವಜ್ರಕಾಯ ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟರು. ಸದ್ಯ ಸಿನಿಮಾ ಆಫರ್​ಗಾಗಿ ಕಾಯುತ್ತಿರುವ ಇವರು ಹೊಸ ಹೊಸ ಪೋಟೋ ಶೂಟ್‌ನಿಂದ ಅಭಿಮಾನಿಗಳ ಗಮನ ಸೆಳೆಯುತ್ತಿದ್ದಾರೆ.
 

ಕನ್ನಡತಿ ನಭಾ ನಟೇಶ್‌ ಸದ್ಯ ಟಾಲಿವುಡ್‌ನಲ್ಲಿಯೇ ನೆಲೆಕಂಡುಕೊಂಡಿದ್ದಾರೆ. ಕನ್ನಡ ಸಿನಿಮಾಗಳಿಗಿಂತ ತೆಲುಗು ಚಿತ್ರಗಳಲ್ಲಿಯೇ ಹೆಚ್ಚು ಬಿಜಿಯಾಗಿದ್ದಾರೆ. ಇದೀಗ ಅವರು ಹಂಚಿಕೊಂಡಿರುವ ಫೋಟೋಗಳು ಯುವಕರನ್ನು ಫಿದಾ ಮಾಡಿದೆ.

ವಜ್ರಕಾಯ ಬೆಡಗಿ ನಭಾ ನಟೇಶ್ ದಸರಾ ಹಬ್ಬದಂದು ಸುಂದರವಾಗಿರುವ ಫೋಟೋಗಳನ್ನು ಸಾಮಾಜಿಕ  ಜಾಲತಾಣಲದಲ್ಲಿ ಹಂಚಿಕೊಂಡಿದ್ದಾರೆ. ಆಕರ್ಷಕವಾಗಿರುವ ಲಂಗ-ದಾವಣಿ ಧರಿಸಿಕೊಂಡು ನಟಿ ಸಖತ್ತಾಗಿ ಕಾಣಿಸಿಕೊಂಡಿದ್ದಾರೆ.

Tap to resize

ಚಿನ್ನದ ಬಣ್ಣದ ರೇಷ್ಮೆ ಮತ್ತು ಅದರ ಮೇಲೆ ಕೆಂಪು ಗುಲಾಬಿ ಬಣ್ಣದ ದಾವಣಿ ಧರಿಸಿರುವ ನಟಿ ಮರದ ಕೆಳಗೆ ಕುಳಿತು ನಗುಮುಖದಿಂದ ಪೋಸ್ ಕೊಟ್ಟಿದ್ದಾರೆ. ಫೋಟೋಗಳಲ್ಲಿ ನಟಿ ನಾಚಿಕೊಳ್ಳೋದನ್ನು ಸಹ ಕಾಣಬಹುದು.

ನಭಾ ನಟೇಶ್ ಅವರು ಟ್ರೆಡಿಷನಲ್ ಆಗಿ ತುಂಬಾ ಮುದ್ದಾಗಿ ಕಾಣಿಸಿದ್ದಾರೆ. ಅವರ ಆಕರ್ಷವಾದ ಲುಕ್ ನೋಡಿದ ಮಂದಿ ಎಷ್ಟೊಂದು ಕ್ಯೂಟ್ ಎಂದು ಹೇಳಿದ್ದಾರೆ. ಈ ಸ್ಮಾರ್ಟ್ ಚೆಲುವೆ ಸುಂದರವಾದ ನೋಟದೊಂದಿಗೆ ಫೋಟೋಗಳನ್ನು ಹಂಚಿಕೊಂಡಿದ್ದಾರೆ. 

ನಭಾ ನಟೇಶ್ ಅವರ ಫೋಟೋಗಳಿಗೆ ಮಿಲಿಯನ್ ಲೈಕ್ಸ್ ಬಂದಿದೆ. ಅವರ ಫ್ಯಾನ್ಸ್ ನೀವು ತುಂಬಾ ಕ್ಯೂಟ್ ಮೇಡಂ ಎಂದು ಕಮೆಂಟ್ ಮಾಡಿದ್ದಾರೆ. ಇನ್ನೂ ಕೆಲವರು ಸಖತ್ ಆಗಿ ಕಾಣಿಸ್ತಿದ್ದೀರಿ ಎಂದಿದ್ದಾರೆ.

ನಟಿ ನಭಾ ನಟೇಶ್ ಅವರು 2015ರಲ್ಲಿ ರಿಲೀಸ್ ಆದ ಕನ್ನಡದ ‘ವಜ್ರಕಾಯ’ ಸಿನಿಮಾ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟರು. 2019ರಲ್ಲಿ ರಿಲೀಸ್ ಆದ ತೆಲುಗಿನ ‘ಇಸ್ಮಾರ್ಟ್ ಶಂಕರ್’ ಚಿತ್ರದ ಮತ್ತಷ್ಟು ಜನಪ್ರಿಯತೆ ಪಡೆದರು. 

2017ರಲ್ಲಿ ನಭಾ ಅವರು ಸುಮಂತ್ ಶೈಲೇಂದ್ರ ಅವರೊಂದಿಗೆ ಲೀ ಚಿತ್ರದಲ್ಲಿ ನಟಿಸಿದರು. ಅದೇ ವರ್ಷದಲ್ಲಿ ಅವರು ಸಾಹೇಬ ಚಿತ್ರದಲ್ಲಿ ವಿಶೇಷ ಗೀತೆಯಲ್ಲಿ ಕಾಣಿಸಿಕೊಂಡರು. ವಜ್ರಕಾಯದಲ್ಲಿ ನಭಾ ಅಭಿನಯ ಕನ್ನಡಿಗರ ಮನಸ್ಸು ಗೆದ್ದಿತ್ತು. ಅತ್ಯುತ್ತಮ ಮಹಿಳಾ ಚೊಚ್ಚಲ ಕನ್ನಡಕ್ಕಾಗಿ ಫಿಲ್ಮ್ ಫೇರ್ ಪ್ರಶಸ್ತಿಗೆ ನಾಮಿನೇಟ್​ ಆಗಿದ್ದರು.

ಇಸ್ಮಾರ್ಟ್ ಶಂಕರ್ ಚಿತ್ರದ ನಂತರ ಟಾಲಿವುಡ್​ನಲ್ಲಿ ನಭಾ ಮಿಂಚಿದ್ರು. ನಿರ್ಮಾಪಕರು ಕೂಡ ನಭಾ ಡೇಟ್​ಗಾಗಿ ಕಾಯುತ್ತಿದ್ದರು. ನಭಾ ನಟೇಶ್ ಈಗಾಗಲೇ ರವಿತೇಜ, ಬೆಲ್ಲಂಕೊಂಡ ಶ್ರೀನಿವಾಸ್ ಸೇರಿದಂತೆ ಹಲವು ನಾಯಕರಿಗೆ ಜೋಡಿಯಾಗಿದ್ದಾರೆ.

Latest Videos

click me!