ಶಾರೂಖ್ ಖಾನ್ ಭಾರತದಲ್ಲೇ ಅತಿ ಹೆಚ್ಚು ಸಂಭಾವನೆ ಪಡೆವ ನಟ. ಬಾಲಿವುಡ್‌ನ ಬಾದ್ ಶಾ ಎನಿಸಿರೋ ಆತ ಕೋಟ್ಯಂತರ ಅಭಿಮಾನಿಗಳನ್ನು ಹೊಂದಿದ್ದಾರೆ. ಸದಾ ಶಾರೂಖ್‌ರನ್ನು ಗೌರಿಯ ಪ್ರಾಮಾಣಿಕ ಗಂಡ ಎಂಬಂತೆ ಬಿಂಬಿಸಲಾಗುತ್ತದೆ. ಈ ಹೆಸರು ಹಾಳಾಗದಂತೆ ನೋಡಿಕೊಳ್ಳಲು ಪ್ರಿಯಾಂಕಾ ಚೋಪ್ರಾ ಬಾಲಿವುಡ್ ಬಿಡಬೇಕಾಯಿತ?
ಹೌದು, 2011ರ ಸಮಯ, ಶಾರೂಖ್ ಮತ್ತು ಪ್ರಿಯಾಂಕಾ ಚೋಪ್ರಾ ಡಾನ್ 2 ಚಿತ್ರದ ಚಿತ್ರೀಕರಣ ಸಂದರ್ಭದಲ್ಲಿ ಪರಸ್ಪರ ಪ್ರೀತಿಯಲ್ಲಿ ಬಿದ್ದಿದ್ದರು, ಡೇಟಿಂಗ್ ಜೋರಾಗಿತ್ತು ಎಂಬ ಗುಸುಗುಸು ಜೋರಾಗಿ ಹಬ್ಬಿತ್ತು.
ಇಬ್ಬರೂ ನೈಟ್‌ಕ್ಲಬ್‌ಗಳು, ಪಾರ್ಟಿಗಳು ಮತ್ತು ಈವೆಂಟ್‌ಗಳಲ್ಲಿ ಹ್ಯಾಂಗ್‌ಔಟ್ ಮಾಡುತ್ತಿದ್ದರು. ಇದರಿಂದ ಗೌರಿಖಾನ್ ಕೆಂಡಾಮಂಡಲವಾಗಿದ್ದರು ಮತ್ತು ಪ್ರಿಯಾಂಕಾಳನ್ನು ದ್ವೇಷಿಸಲು ಶುರು ಮಾಡಿದರು.
ಈ ಜೋಡಿಗಳ ಸಂಬಂಧದ ಸುದ್ದಿ ಜೋರಾಗುತ್ತಲೇ ಬಾಲಿವುಡ್‌ನಲ್ಲಿ ಪ್ರಿಯಾಂಕಾಳನ್ನು ಮೂಲೆಗುಂಪು ಮಾಡುವ ಕೆಲಸ ಶುರುವಾಯಿತು. ಅದು ಗೌರಿ ಹಾಗೂ ಕರಣ್ ಜೋಹರ್ ತಾಕತ್ತು.
ಆಕೆಗೆ ಅವಕಾಶಗಳು ಸಿಗದಂತೆ ನೋಡಿಕೊಳ್ಳಲಾಗುತ್ತಿತ್ತು. ಕಡೆಗೂ ಎಲ್ಲ ವಿಷಯಗಳು ಪ್ರಿಯಾಂಕಾಳನ್ನು ಮಾನಸಿಕವಾಗಿ ಕುಸಿಯುವಂತೆ ಮಾಡಿದವು.
ಬಾಲಿವುಡ್ ಬಿಟ್ಟು ಇನ್ನೆಲ್ಲಿ ಹೋಗಲಿ ಎಂದು ಆಕೆ ಯೋಚಿಸುತ್ತಿದ್ದಾಗಲೇ ಆಕೆಗೆ ಹಾಡಿಗಾಗಿ ಹಾಲಿವುಡ್‌ನಿಂದ ಕರೆ ಬಂತು. ಸಿಕ್ಕ ಅವಕಾಶ ಹಿಡಿದು ಅಮೆರಿಕ ಹಾರಿದರು ನಟಿ.
ಈ ಸಂಬಂಧದ ಬಗ್ಗೆ ಶಾರೂಖ್‌ಗೆ ಪ್ರಶ್ನಿಸಿದಾಗ, ಆಕೆ ನನ್ನ ಉತ್ತಮ ಗೆಳತಿ, ಯಾವಾಗಲೂ ಹೃದಯಕ್ಕೆ ಹತ್ತಿರದಲ್ಲಿ ಇದ್ದಾಳೆ, ಇರುತ್ತಾಳೆ ಎಂದು ನಟ ಹೇಳಿದ್ದಲ್ಲದೆ, ಆಕೆಯನ್ನು ಗೌರವದಿಂದ ನಡೆಸಿಕೊಳ್ಳದವರ ಬಗ್ಗೆ ಬೇಸರವಿದೆ ಎಂದಿದ್ದರು.
ಇನ್ನು ಪ್ರಿಯಾಂಕಾ, 2018ರಲ್ಲಿ ಯೂಟ್ಯೂಬ್ ಸಂದರ್ಶನವೊಂದರಲ್ಲಿ ಭಾಗವಹಿಸುವಾಗ ತಮ್ಮ ನೆಚ್ಚಿನ ಆಭರಣಗಳು, ವಸ್ತುಗಳನ್ನು ಅದರಲ್ಲಿ ತೋರಿಸಬೇಕಿತ್ತು. ಆಗ ಆಕೆ ತೋರಿಸಿದ್ದು ಶಾರೂಖ್ ಧರಿಸುತ್ತಿದ್ದ ಜಾಕೆಟ್.
ಇದು ನನ್ನ ಹಳೆಯ ಬಾಯ್‌ಫ್ರೆಂಡ್ ಜಾಕೆಟಾಗಿದ್ದು, ನನ್ನ ಹೃದಯಕ್ಕೆ ತುಂಬಾ ಹತ್ತಿರವಾಗಿದ್ದೆ. ಸಾಮಾನ್ಯವಾಗಿ ಹೊರ ಹೋಗುವಾಗ ನಾನಿದನ್ನು ಧರಿಸುತ್ತೇನೆ ಎಂದಿದ್ದಳು.
ಪ್ರಿಯಾಂಕಾ, ಶಾಹಿದ್ ಕಪೂರ್, ಕರೀನಾ ಕಪೂರ್, ಐಶ್ವರ್ಯಾ ರೈ, ಕರೀಶ್ಮಾ ಕಪೂರ್, ಶಿಲ್ಪಾ ಶೆಟ್ಟಿ- ಹೀಗೆ ಬಾಲಿವುಡ್ ಜಗತ್ತಿನ ಹಲವರನ್ನು ನೋಡುವಾಗ ನೂರಾರು ಕೋಟಿ ಇದ್ದರೂ ತಾವಿಷ್ಟ ಪಟ್ಟವರನ್ನು ವಿವಾಹವಾಗಲು ಅವರಿಗಾಗುವುದಿಲ್ಲ. ವಿವಾಹವೆಂಬುದು ಸ್ವರ್ಗದಲ್ಲಿ ನಿಶ್ಚಯವಾಗಿರುವುದೇ ನಿಜ ಎನಿಸದಿರದು.