ಮದ್ರಾಸ್‌ನಲ್ಲಿ ತಮ್ಮ ಹಿಂದಿನ ಜನ್ಮದ ಭವಿಷ್ಯ ಕೇಳಿದ ಸಂಜಯ್ ದತ್; ಪತ್ನಿಯನ್ನು ಕೊಂದಿದ್ದು ನಿಜವೇ?

Published : May 11, 2024, 02:46 PM IST

ಹಿಂದಿನ ಜನ್ಮ ಹೇಗಿತ್ತು ಎಂದು ತಿಳಿದುಕೊಳ್ಳಲು ಮದ್ರಾಸ್‌ಗೆ ಹಾರಿದ ಸಂಜಯ್ ದತ್. ಅಲ್ಲಿ ಕೇಳಿ ಬಂದ ಭವಿಷ್ಯವಿದು...

PREV
18
ಮದ್ರಾಸ್‌ನಲ್ಲಿ ತಮ್ಮ ಹಿಂದಿನ ಜನ್ಮದ ಭವಿಷ್ಯ ಕೇಳಿದ ಸಂಜಯ್ ದತ್; ಪತ್ನಿಯನ್ನು ಕೊಂದಿದ್ದು ನಿಜವೇ?

ಬಾಲಿವುಡ್ ನಟ ಸಂಜಯ್ ದತ್ ಸಿನಿಮಾ ಲೋಕದಲ್ಲಿ ದೊಡ್ಡ ಹೆಸರು ಮಾಡಿದ್ದಾರೆ. ಆದರೆ ಒಂದಲ್ಲ ಒಂದು ಪ್ರಕರಣದ ಮೇಲೆ ಪೊಲೀಸ್ ಠಾಣೆ ಏರಿದ್ದರು. 

28

 ಹಿಂದಿನ ಜನ್ಮ ತಿಳಿದುಕೊಳ್ಳಲು ಹೋಗಿ... ಇಂತಿಪ್ಪ ಸಂಜಯ್​ ದತ್​  ಅವರು, ತಾವು ಪತ್ನಿ ಮತ್ತು ಆಕೆಯ ಪ್ರಿಯಕನನ್ನು ಕೊಲೆ ಮಾಡಿದ್ದ ಶಾಕಿಂಗ್​ ವಿಷ್ಯ ರಿವೀಲ್​ ಮಾಡಿದ್ದಾರೆ. 

38

ವರ್ಷಗಳ ಹಿಂದೆ ಕಾಫಿ ವಿತ್​ ಕರಣ್​ ಕಾರ್ಯಕ್ರಮದಲ್ಲಿ ಈ ವಿಷಯವನ್ನು ಅವರು ತಿಳಿಸಿದ್ದು,ಅದೀಗ ಪುನಃ ವೈರಲ್​  ಆಗಿದೆ ಎಂದು ಖಾಸಗಿ ಸಂದರ್ಶನದಲ್ಲಿ ಹೇಳಿದ್ದಾರೆ. 

48

ಅಷ್ಟಕ್ಕೂ ಸಂಜಯ್​ ದತ್​ ಅವರ ಪತ್ನಿ ಮಂತ್ರಿಯೊಬ್ಬರ ಜೊತೆ ಅಫೇರ್​ ಇಟ್ಟುಕೊಂಡಿದ್ದರಂತೆ.  ಆದ್ದರಿಂದ ಇಬ್ಬರನ್ನೂ ಕೊಲೆ ಮಾಡಿದೆ. 

58

ಅದೇ ಕರ್ಮ ನನ್ನನ್ನು ಇಂದಿಗೂ ಕಾಡುತ್ತಿದೆ ಎಂದಿದ್ದಾರೆ. ಯಾಕೆ ಈ ವಿಷ್ಯ ಬೆಳಕಿಗೆ ಬರಲಿಲ್ಲ ಅಂತೀರಾ? ಅಷ್ಟಕ್ಕೂ ಸಂಜಯ್​ ದತ್​ ಹೇಳಿರುವುದು ಅವರ ಹೋದ ಜನ್ಮದ ಕುರಿತು.

68

'ಅಶೋಕ ಸಾಮ್ರಾಜ್ಯವಿದ್ದ ಕಾಲವದು. ನಾನು ಆಗ  ರಾಜನಾಗಿದ್ದೆ. ನನ್ನ ಪತ್ನಿ ಅಂದ್ರೆ ರಾಣಿ, ನನ್ನ ಮಂತ್ರಿಯೊಂದಿಗೇ ಅಕ್ರಮ ಸಂಬಂಧ ಇಟ್ಟುಕೊಂಡಿದ್ದಳು. ಅವಳಿಗೆ ನಾನು ಸಾಯಬೇಕಿತ್ತು. ಆದ್ದರಿಂದ  ಯುದ್ಧಕ್ಕೆ ಕಳುಹಿಸಿದಳು. '

78

'ನನ್ನನ್ನು ಸಾಯಿಸುವುದು ಆಕೆಯ ಉದ್ದೇಶವಾಗಿತ್ತು. ಆದರೆ ಯುದ್ಧದಲ್ಲಿ ನಾನು ವಿಜೇತನಾದೆ. ಇಷ್ಟರಲ್ಲಿಯೇ ನನ್ನ ಪತ್ನಿಯ ಕುತಂತ್ರ ಗೊತ್ತಾಯಿತು. ಹೀಗಾಗಿ  ಪತ್ನಿಯನ್ನು ಹಾಗೂ ಮಂತ್ರಿ ಸಾಯಿಸಿ ಬಿಟ್ಟೆ' ಎಂದಿದ್ದಾರೆ. 

88

ಮದ್ರಾಸ್ ಸಮೀಪದ ಹಳ್ಳಿ ಶಿವನಾರಿಯಲ್ಲಿ  ತಮ್ಮ ಹಿಂದಿನ ಭವಿಷ್ಯ ಕೇಳಿಕೊಂಡಿದ್ದೆ ಎಂದಿದ್ದಾರೆ.  ಇದು ಚೆನ್ನೈನಿಂದ  ಎರಡು ಗಂಟೆ ಪ್ರಯಾಣ.  ಸಣ್ಣ ಹಳ್ಳಿ. ಅಲ್ಲಿ ಹಸ್ತ ನೋಡಿ ಭವಿಷ್ಯ ಹೇಳುತ್ತಾರೆ. 

Read more Photos on
click me!

Recommended Stories