ಮನ್ನತ್ ತೊರೆದ ಶಾರುಖ್, ಐಷಾರಾಮಿ 2BHK ಮನೆ ಬಾಡಿಗೆಗೆ ಪಡೆದ ಗೌರಿ ಖಾನ್‌

Published : Jun 10, 2025, 12:27 PM IST

ಬಾಲಿವುಡ್ ಬಾದ್‌ಶಾ ಶಾರುಖ್ ಖಾನ್ ಅವರ ಪತ್ನಿ ಗೌರಿ ಖಾನ್, ಮನ್ನತ್ ಮನೆಯ ನವೀಕರಣದ ಹಿನ್ನಲೆಯಲ್ಲಿ ತಮ್ಮ ಸಿಬ್ಬಂದಿಗಾಗಿ ₹1.35 ಲಕ್ಷ ಮಾಸಿಕ ಬಾಡಿಗೆಗೆ 2BHK ಅಪಾರ್ಟ್‌ಮೆಂಟ್‌ನ್ನು ಬಾಡಿಗೆಗೆ ಪಡೆದಿದ್ದಾರೆ. ಮೂರು ವರ್ಷಗಳ ಒಪ್ಪಂದಕ್ಕೆ ಸಹಿ ಹಾಕಲಾಗಿದ್ದು, ಮುಂಬೈನ ಪಾಲಿ ಹಿಲ್‌ನಲ್ಲಿದೆ. 

PREV
15

ಒಳಾಂಗಣ ವಿನ್ಯಾಸ ಕ್ಷೇತ್ರದಲ್ಲಿ ಪ್ರಸಿದ್ಧಿ ಪಡೆದಿರುವ ಮತ್ತು ಬಾಲಿವುಡ್ ಬಾದ್‌ಶಾ ಶಾರುಖ್ ಖಾನ್ ಅವರ ಪತ್ನಿ ಗೌರಿ ಖಾನ್ ಅವರು, ಮನ್ನತ್ ಮನೆಯ ನವೀಕರಣದ ಹಿನ್ನಲೆಯಲ್ಲಿ ತಮ್ಮ ಸಿಬ್ಬಂದಿಗಾಗಿ 2BHK ಅಪಾರ್ಟ್‌ಮೆಂಟ್‌ನ್ನು ಬಾಡಿಗೆಗೆ ಪಡೆದಿದ್ದಾರೆ. ಜ್ಯಾಪ್ಕಿ ನೀಡಿರುವ ದಾಖಲೆಗಳ ಪ್ರಕಾರ, ₹1.35 ಲಕ್ಷ ಆರಂಭಿಕ ಮಾಸಿಕ ಬಾಡಿಗೆಗೆ ಈ ಆಸ್ತಿಯನ್ನು ಬಾಡಿಗೆಗೆ ಪಡೆದಿದ್ದಾರೆ. ಒಟ್ಟು ಮೂರು ವರ್ಷಗಳ ಕಾಲ ವಾಸಕ್ಕೆ ಮತ್ತು ಪರವಾನಗಿ (Leave & License) ಒಪ್ಪಂದಕ್ಕೆ ಸಹಿ ಹಾಕಲಾಗಿದ್ದು, ಇದು ಏಪ್ರಿಲ್ 10, 2025 ರಿಂದ ಏಪ್ರಿಲ್ 9, 2028 ರವರೆಗೆ ಮಾನ್ಯವಾಗಿರುತ್ತದೆ.

25

725 ಚದರ ಅಡಿಗಳಷ್ಟು ವಿಸ್ತೀರ್ಣವಿರುವ ಈ ಅಪಾರ್ಟ್‌ಮೆಂಟ್, ಮುಂಬೈನ ಪಾಲಿ ಹಿಲ್‌ನ ಪಂಕಜ್ ಪ್ರಿಮೈಸಸ್ ಕೋಆಪರೇಟಿವ್ ಸೊಸೈಟಿಯಲ್ಲಿ ನೆಲೆಗೊಂಡಿದೆ. ಇದರಲ್ಲಿ ಒಂದು ಹಾಲ್, ಅಡುಗೆಮನೆ, ಎರಡು ಮಲಗುವ ಕೋಣೆಗಳು ಮತ್ತು ಎರಡು ವಾಶ್‌ರೂಮ್‌ಗಳು ಇವೆ. ಹಿಂದೂಸ್ತಾನ್ ಟೈಮ್ಸ್ ವರದಿಯ ಪ್ರಕಾರ, ₹4.05 ಲಕ್ಷದ ಭದ್ರತಾ ಠೇವಣಿ ಇದಕ್ಕೆ ಇಡಲಾಗಿದೆ. ಪ್ರತಿ ವರ್ಷ 5% ಬಾಡಿಗೆ ಏರಿಕೆಯ ಷರತ್ತು ಹೊಂದಿರುವ ಈ ಒಪ್ಪಂದವು ಮೇ 14, 2025 ರಂದು ಅಧಿಕೃತವಾಗಿ ನೋಂದಾಯಿಸಲಾಗಿದೆ.

35

ಮನ್ನತ್ ಖಾಲಿ ಮಾಡಿರುವ ಶಾರುಖ್ ಅವರ ತಾತ್ಕಾಲಿಕ ನಿವಾಸ ಯಾವುದು?

ಮನ್ನತ್ ನವೀಕರಣದ ಹಿನ್ನೆಲೆ ಶಾರುಖ್ ಖಾನ್ ಅವರು ತಮ್ಮ ಕುಟುಂಬದೊಂದಿಗೆ ಮುಂಬೈನ ಪಾಲಿ ಹಿಲ್‌ನ ಪೂಜಾ ಕಾಸಾ ಎಂಬ ಬೃಹತ್ ನಿವಾಸಕ್ಕೆ ತಾತ್ಕಾಲಿಕವಾಗಿ ಸ್ಥಳಾಂತರಗೊಂಡಿದ್ದಾರೆ. ಈ ತಾತ್ಕಾಲಿಕ ಮನೆ 10,500 ಚದರ ಅಡಿಗಳಷ್ಟು ವಿಸ್ತೀರ್ಣವಿರುವ ಎರಡು ಐಷಾರಾಮಿ ಡ್ಯೂಪ್ಲೆಕ್ಸ್‌ಗಳನ್ನು ಒಳಗೊಂಡಿದೆ. ಗೌರಿ ಖಾನ್ ಮತ್ತು ಅವರ ಮಕ್ಕಳಾದ ಸುಹಾನಾ, ಆರ್ಯನ್ ಹಾಗೂ ಅಬ್‌ರಾಮ್ ಮುಂದಿನ ಮೂರು ವರ್ಷಗಳ ಕಾಲ ಇಲ್ಲಿಯೇ ವಾಸ ಇರಲಿದ್ದಾರೆ. ಇದು ಮನ್ನತ್‌ನ 27,000 ಚದರ ಅಡಿ ವಿಸ್ತೀರ್ಣಕ್ಕಿಂತ ಗಮನಾರ್ಹವಾಗಿ ಚಿಕ್ಕದಾಗಿದೆ. ಮಾಸಿಕ ಬಾಡಿಗೆ ಸುಮಾರು 24 ಲಕ್ಷ ರೂ.ಗಳೆಂದು ವರದಿಯಾಗಿದೆ. ಕಟ್ಟಡವು ನಿರ್ಮಾಪಕ ವಶು ಭಗ್ನಾನಿ ಮತ್ತು ಅವರ ಮಕ್ಕಳಾದ ಜಾಕಿ ಭಗ್ನಾನಿ ಮತ್ತು ದೀಪಶಿಖಾ ದೇಶಮುಖ್ ಸೇರಿದಂತೆ ಭಗ್ನಾನಿ ಕುಟುಂಬದ ಒಡೆತನದಲ್ಲಿದೆ ಎಂದು ವರದಿಗಳು ತಿಳಿಸಿವೆ.

45

ಮನ್ನತ್ ನವೀಕರಣ ಗೌರಿಯ ಪಾತ್ರ

ಮನ್ನತ್ ಬಂಗಲೆಯಲ್ಲಿ ಇನ್ನಷ್ಟು ಅಂದ ಮತ್ತು ಅದ್ಧೂರಿಯಾಗಿ ಮಾಡಲು ತೀರ್ಮಾನಿಸಲಾಗಿದೆ. ಈಗಿರುವ ಕಟ್ಟದಡ ಮೇಲೆ ಮತ್ತೆ ಮಹಡಿಗಳನ್ನು ಸೇರ್ಪಡೆಗೊಳಿಸುವ ಯೋಜನೆ ಇದೆಯಂತೆ. ಶಾರುಖ್ ಖಾನ್ ಈ ಮನೆಗೆ ಹೊಂದಿರುವ ಭಾವನಾತ್ಮಕ ಬಾಂಧವ್ಯ ಬಹಳ ಗಾಢವಾಗಿದೆ. 2023 ರಲ್ಲಿ ಗೌರಿ ಖಾನ್ ಅವರ ಪುಸ್ತಕ ಬಿಡುಗಡೆ ಸಂದರ್ಭದಲ್ಲಿ ಶಾರುಖ್ ಮಾತನಾಡುತ್ತಾ "ಮನ್ನತ್ ಖರೀದಿಸಿದಾಗ ಅದು ನಮ್ಮ ಆರ್ಥಿಕ ಸಾಮರ್ಥ್ಯಕ್ಕೆ ಮೀರಿದ್ದಾಗಿತ್ತು. ನಾವು ದೆಹಲಿಯವರು, ಬಂಗಲೆಗಳಲ್ಲಿ ವಾಸಿಸುತ್ತಿದ್ದವರೆ, ಆದರೆ ಮುಂಬೈನಲ್ಲಿ ಅಪಾರ್ಟ್‌ಮೆಂಟ್‌ಗಳು ಹೆಚ್ಚು ಪ್ರಚಲಿತ ಮತ್ತು ಎಲ್ಲಾ ವ್ಯವಸ್ಥೆ ಇರುವುದರಿಂದ ದುಬಾರಿ ಕೂಡ ಆದರೆ ನಾವು ಅದಕ್ಕೆ ಒಗ್ಗಿಕೊಂಡಿಲ್ಲ. ನಾವು ಮನ್ನತ್‌ ಗೆ ಬೆಲೆ ನೀಡಿದೆವು. ಅದನ್ನು ಹೇಗೆ ವಿನ್ಯಾಸಗೊಳಿಸಬೇಕೆಂಬ ಪ್ರಶ್ನೆ ಉದ್ಭವಿಸಿತು. 

55

ಆಗ ನಾನು ಗೌರಿಗೆ ಹೇಳಿದೆ ‘ನಿನ್ನಲ್ಲಿ ಸ್ವಲ್ಪ ಕಲಾತ್ಮಕತೆ ಇದೆ, ನೀನೇ ಮನೆ ವಿನ್ಯಾಸ ಮಾಡು’. ಅಂದಿನಿಂದ ಮನ್ನತ್‌ಗೆ ಅವರ ಕಲಾತ್ಮಕ ಸ್ಪರ್ಶ ಆರಂಭವಾಯಿತು. ನಮಗೆ ಹಣದ ಸಮಸ್ಯೆ ಆಗ ಇತ್ತು. ಹೀಗಾಗಿ ಸಣ್ಣ ಸಣ್ಣ ಅಲಂಕಾರಿಕ ವಸ್ತುಗಳನ್ನು ಒದೊಂದೇ ಖರೀದಿಸುತ್ತಿದ್ದೆವು. ದಕ್ಷಿಣ ಆಫ್ರಿಕಾದಲ್ಲಿ ಚರ್ಮದ ಸೋಫಾ ಖರೀದಿಸಿದ್ದ ನೆನಪು ಇದೆ. ಗೌರಿ ವಿದೇಶಕ್ಕೆ ಹೋಗುವಾಗ 100 ಪೌಂಡ್ ಗಳಷ್ಟು ಮಾತ್ರ ಹಣ ತೆಗೆದುಕೊಂಡು ಅಲಂಕಾರಿಕ ವಸ್ತುಗಳನ್ನು ತಂದಿದ್ದರು. ಈ ಅನುಭವವೇ ಅವರು ಒಳಾಂಗಣ ವಿನ್ಯಾಸ ಕ್ಷೇತ್ರವನ್ನು ಆಕೆ ಆರಿಸಲು ಪ್ರೇರಣೆಯಾಯಿತು ಎಂದಿದ್ದರು.

Read more Photos on
click me!

Recommended Stories