ಮಣಿರತ್ನಂ ನಿರ್ದೇಶನದಲ್ಲಿ ಕಮಲ್ ಹಾಸನ್, ಸಿಂಬು, ತ್ರಿಷಾ, ಅಭಿರಾಮಿ, ಐಶ್ವರ್ಯ ಲಕ್ಷ್ಮಿ, ಅಶೋಕ್ ಸೆಲ್ವನ್ ಮುಂತಾದವರು ನಟಿಸಿರುವ ಚಿತ್ರ ‘ಥಗ್ ಲೈಫ್’. ಇದು ತಮಿಳು, ತೆಲುಗು, ಕನ್ನಡ, ಮಲಯಾಳಂ, ಹಿಂದಿ ಐದು ಭಾಷೆಗಳಲ್ಲಿ ನಿರ್ಮಾಣವಾಗಿದೆ. ಜೂನ್ 5 ರಂದು ಬಿಡುಗಡೆಯಾದ ಈ ಚಿತ್ರ ಕನ್ನಡ ಭಾಷಾ ವಿವಾದದಿಂದಾಗಿ ಕರ್ನಾಟಕದಲ್ಲಿ ಬಿಡುಗಡೆಯಾಗಿಲ್ಲ. ಉಳಿದ ನಾಲ್ಕು ಭಾಷೆಗಳಲ್ಲಿ ಬಿಡುಗಡೆಯಾದ ಈ ಚಿತ್ರಕ್ಕೆ ಮೊದಲ ದಿನದಿಂದಲೂ ನೆಗೆಟಿವ್ ರಿವ್ಯೂಗಳು ಬಂದಿವೆ.