ಕ್ರಿಕೆಟ್ ಆಡೋಕೆ ಅಂಗಿ-ಪ್ಯಾಂಟ್ ಏಕೆ ಬೇಕು? ಸ್ಟಾರ್ ಆಟಗಾರನ ಅವಸ್ಥೆಯ ವಿಡಿಯೋ ವೈರಲ್

Published : Jun 10, 2025, 10:49 AM ISTUpdated : Jun 10, 2025, 11:07 AM IST

ಈ ವೈರಲ್ ವಿಡಿಯೋ ನೋಡಿದರೆ ಕ್ರಿಕೆಟ್ ಆಟವಾಡುವುದಕ್ಕೆ ಅಂಗಿ ಪ್ಯಾಂಟ್ ಏಕೆ ಬೇಕು ಸೇಫ್ ಗಾರ್ಡ್ ಇದ್ರೆ ಸಾಕಲ್ಲವೇ ಎಂಬ ಆಲೋಚನೆ ಬರುತ್ತದೆ. ಅಂಗಿ-ಪ್ಯಾಂಟ್ ಬಿಚ್ಚಿ ಚಡ್ಡಿಯ ಮೇಲೆ 6 ಪ್ಯಾಕ್ ದೇಹ ತೋರಿಸುತ್ತಾ ಬ್ಯಾಟಿಂಗ್ ಮಾಡುತ್ತಿರುವ ಸ್ಟಾರ್ ಆಟಗಾರ ಯಾರೆಂದು ನೀವೇ ನೋಡಿ..

PREV
19

ಕ್ರಿಕೆಟ್‌ಗೆ ಜಾಗತಿಕ ಮಟ್ಟದಲ್ಲಿ ಅತ್ಯಂತ ಜನಪ್ರಿಯತೆ ಪಡೆದ ಕ್ರಿಕೆಟ್‌ಗೆ ಭಾರತವೇ ಅಧಿಪತಿ ಆಗಿದೆ. ಆದರೂ ಗಲ್ಲಿ ಕ್ರಿಕೆಟ್ ಮಾತ್ರ ನಿಂತಿಲ್ಲ. ಇನ್ನು ಸ್ಟಾರ್ ಕ್ರಿಕೆಟಿಗರು ಕೂಡ ಗಲ್ಲಿ ಕ್ರಿಕೆಟ್ ಆಡುತ್ತಾ ಮಜಾ ಮಾಡುವುದನ್ನು ಮಾತ್ರ ನಿಲ್ಲಿಸುವುದಿಲ್ಲ. ಇಲ್ಲೊಬ್ಬ ಸ್ಟಾರ್ ಅಂಗಿ ಪ್ಯಾಂಟ್ ಬಿಚ್ಚಿ ಭರ್ಜರಿ ಬ್ಯಾಟಿಂಗ್ ಮಾಡಿದ್ದಾನೆ.

29

ಭಾರತದಲ್ಲಿ ಕ್ರಿಕೆಟ್ ಅಭಿಮಾನಿಗಳಿಗೆ ಕಡಿಮೆ ಏನಿಲ್ಲ. ಹೀಗಾಗಿ, ಕ್ರಿಕೆಟ್ ಆಟ ಒಂದು ಫ್ಯಾಷನ್ ಆಗಿದ್ದರೆ, ಕ್ರಿಕೆಟ್ ಆಟಗಾರರು ಸೆಲೆಬ್ರಿಟಿಗಳಾಗಿ ಮಿಂಚುತ್ತಿದ್ದಾರೆ. ಇದೀಗ ಕ್ರಿಕೆಟ್ ಎನ್ನುವುದು ಶ್ರೀಮಂತ ಆಟವಾಗಿ ಬೆಳೆದಿದ್ದು, ಅದಕ್ಕೆ ಭಾರತವೇ ಅಧಿಪತಿ ಆಗಿ ಕುಳಿತಿದೆ.

39

ಆದರೆ, ಗಲ್ಲಿ ಕ್ರಿಕೆಟ್ ಮಾತ್ರ ಬದಲಾಗಿಲ್ಲ. ಸಣ್ಣ ಮಕ್ಕಳಿಂದ ಸ್ಟಾರ್ ಕ್ರಿಕೆಟ್ ಆಟಗಾರರೂ ಕೂಡ ಸಣ್ಣ ಜಾಗ ಸಿಕ್ಕಿದರೂ ಅಲ್ಲಿ ಬಾಲ್, ಬ್ಯಾಟ್, ವಿಕೆಟ್ಸ್ ಇಟ್ಟು ಆಟ ಶುರು ಮಾಡುತ್ತಾರೆ.

49

ಕ್ರಿಕೆಟ್ ದಂತಕಥೆ ಹಾಗೂ ಗಾಡ್ ಆಫ್ ಕ್ರಿಕೆಟ್ ಖ್ಯಾತಿಯ ಸಚಿನ್ ತೆಂಡೂಲ್ಕರ್ ಕೂಡ ದೇಶದ ವಿವಿಧೆಡೆ ತಾವು ಪ್ರವಾಸಕ್ಕೆ ಹೋದಾಗ ಗಲ್ಲಿಯಲ್ಲಿ ಕ್ರಿಕೆಟ್ ಆಡುವ ಮಕ್ಕಳೊಂದಿಗೆ ತಾವೂ ಆಟವಾಡಿದ್ದಾರೆ. ಬ್ಯಾಟ್ ಬೀಸಲು ಕ್ರೀಡಾಂಗಣ ಮಾತ್ರವಲ್ಲ, ಗಲ್ಲಿಯಾಗಿದ್ದರೂ ಸಾಕು ಎಂದು ಸಂದೇಶ ಸಾರಿದ್ದರು.

59

ಭಾರತದಲ್ಲಿ ಗಲ್ಲಿ, ಗಲ್ಲಿಗಲ್ಲಿ ಕ್ರಿಕೆಟ್ ಆಡುವ ಮಕ್ಕಳಿದ್ದು, ಯಾವುದೇ ಮೂಲೆಯಿಂದಾದರೂ ಕ್ರಿಕೆಟ್ ಪ್ರತಿಭೆಗಳು ಹೊರಹೊಮ್ಮಲಿವೆ ಎಂಬುದಕ್ಕೆ ಒದೊಂದು ತಾಜಾ ಉದಾಹರಣೆ ಆಗಿದೆ.

69

ಇನ್ನು ಕ್ರಿಕೆಟ್ ಹಾಗೂ ಸಿನಿಮಾ ಕ್ಷೇತ್ರಕ್ಕೂ ಭಾರೀ ನಂಟು ಬೆಳೆದಿದೆ. ಅನೇಕ ಕ್ರಿಕೆಟಿಗರು ಸ್ಟಾರ್ ನಟಿಯರನ್ನು ಮದುವೆ ಮಾಡಿಕೊಂಡಿದ್ದಾರೆ. ಇನ್ನು ಕೆಲವರು ಡೇಟಿಂಗ್ ಮಾಡಿ ಮದುವೆಯಿಂದ ದೂರ ಉಳಿದಿದ್ದಾರೆ.

79

ಭಾರತದಲ್ಲಿ ಕ್ರಿಕೆಟ್ ಹುಚ್ಚು ಎಷ್ಟಿದೆ ಎಂದರೆ ಭಾರತೀಯ ಚಿತ್ರರಂಗದ ಎಲ್ಲ ಸಿನಿಮಾ ಇಂಡಸ್ಟ್ರಿಗಳು ಸೇರಿ ಕ್ರಿಕೆಟ್ ಅನ್ನು ಆಡುತ್ತಿವೆ. ಇದಕ್ಕಾಗಿ ಸೆಲೆಬ್ರಿಟಿ ಲೀಗ್ ಕೂಡ ಆಯೋಜನೆ ಮಾಡಲಾಗುತ್ತದೆ.

89

ಇಲ್ಲಿ ಬ್ಯಾಟ್ ಬೀಸಿದ ವ್ಯಕ್ತಿ ಬೇರಾರೂ ಅಲ್ಲ, ಬಾಲಿವುಡ್ ನಟ ಟೈಗರ್ ಶ್ರಾಫ್. ಇವರು ಶೂಟಿಂಗ್ ಹೋದ ಸ್ಥಳದಲ್ಲಿ ಗಲ್ಲಿ ಕ್ರಿಕೆಟ್ ಆಟವಾಡಿದ್ದಾರೆ. ಇನ್ನು ಯಾವಾಗಲೂ ತಮ್ಮ ಸಿಕ್ಸ್ ಪ್ಯಾಕ್ ದೇಹ ತೋರಿಸುವ ಖಯಾಲಿ ಬೆಳೆಸಿಕೊಂಡಿರುವ ಟೈಗರ್ ಶ್ರಾಫ್ ಇಲ್ಲಿಯೂ ಅಂಗಿ-ಪ್ಯಾಂಟ್ ಬಿಚ್ಚಿ ಚಡ್ಡಿಯ ಮೇಲೆ 6 ಪ್ಯಾಕ್ ದೇಹ ತೋರಿಸುತ್ತಾ ಬ್ಯಾಟಿಂಗ್ ಮಾಡಿದ್ದಾರೆ.

99

ಟೈಗರ್ ಶ್ರಾಫ್ ಹಂಚಿಕೊಂಡಿರುವ ಗಲ್ಲಿ ಕ್ರಿಕೆಟ್ ಆಟದಲ್ಲಿ ಮತ್ತೊಬ್ಬ ಸ್ಟಾರ್ ನಟ ಅಕ್ಷಯ್ ಕುಮಾರ್ ಕೂಡ ಇದ್ದಾರೆ. ಅವರೂ ಟೈಗರ್ ಶ್ರಾಫ್ ಜೊತೆಗೆ ಅದ್ಭುತವಾಗಿ ಕ್ರಿಕೆಟ್ ಆಟವಾಡಿದ್ದಾರೆ. ಇದರೊಂದಿಗೆ ಅಲ್ಲಿದ್ದ ಎಲ್ಲ ಚಿತ್ರರಂಡದ ಸದಸ್ಯರು ಭರ್ಜರಿ ಎಂಜಾಯ್ ಮಾಡಿದ್ದಾರೆ.

ಇಲ್ಲಿದೆ ವೈರಲ್ ವಿಡಿಯೋ : 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories