ಬಾಲಿವುಡ್‌ನ ಸೂಪರ್‌ಸ್ಟಾರ್ ಶಾರುಖ್ ಖಾನ್ (Shah Rukh Khan) ಅವರ ಇಡೀ ಕುಟುಂಬವು ಒಂದೇ ಫ್ರೇಮ್‌ನಲ್ಲಿ ಕಾಣ ಸಿಗುವುದು ಅಪರೂಪ. ಶಾರುಖ್ ಖಾನ್, ಗೌರಿ, ಆರ್ಯನ್, ಸುಹಾನಾ ಮತ್ತು ಅಬ್ರಾಮ್ ಇತ್ತೀಚೆಗೆ ಕಾಫಿ ಟೇಬಲ್ ಪುಸ್ತಕಕ್ಕಾಗಿ ಪರಿಪೂರ್ಣ ಕುಟುಂಬದ ಫೋಟೋಗಳಿಗೆ ಪೋಸ್ ನೀಡಿದ್ದಾರೆ.
ಇನ್‌ಸ್ಟಾಗ್ರಾಮ್‌ನಲ್ಲಿ ಶಾರುಖ್ ಖಾನ್ ಅವರ ಅಭಿಮಾನಿಗಳ ಪೇಜ್‌ಗಳು ಒಂದೇ ಫ್ರೇಮ್‌ನಲ್ಲಿ ಇಡೀ ಖಾನ್ ಫ್ಯಾಮಿಲಿಯನ್ನು ಒಳಗೊಂಡ ಸರಣಿ ಕ್ಲಿಕ್‌ಗಳನ್ನು ಪೋಸ್ಟ್ ಮಾಡಿದೆ.
27
ಮೊದಲ ಚಿತ್ರದಲ್ಲಿ, ಖಾನ್ ಬಾಯ್ಸ್ ಕಪ್ಪು ಚರ್ಮದ ಜಾಕೆಟ್‌ಗಳಲ್ಲಿ ಕಾಣಿಸಿಕೊಂಡರೆ, ಸುಹಾನಾ ಮತ್ತು ಗೌರಿ ಕಪ್ಪು ಪ್ಯಾಂಟ್ ಮತ್ತು ಕ್ಯಾಶುಯಲ್ ವೈಟ್ ಟಾಪ್‌ಗಳಲ್ಲಿ ಸ್ಟನ್ನಿಂಗ್ ಲುಕ್‌ನಲ್ಲಿದ್ದಾರೆ .ಇನ್ನೊಂದು ಪೋಟೋದಲ್ಲಿ ಕುಟುಂಬ ಬಿಳಿ ಮತ್ತು ಡೆನಿಮ್ ಶೆಡ್‌ನಲ್ಲಿದೆ.
37
ಎಸ್‌ಆರ್‌ಕೆ ಮತ್ತು ಆರ್ಯನ್ ಅವರ ಮತ್ತೊಂದು ಕ್ಯಾಂಡಿಡ್ ಫೋಟೋವನ್ನು ಸಹ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ, ಅಪ್ಪ ಮಗನ ಜೋಡಿ ಆಲಿವ್ ಜಾಕೆಟ್‌ಗಳಲ್ಲಿ ಕಾಣಿಸಿಕೊಂಡಿದೆ.
47
ಇದಲ್ಲದೆ ಮಗಳ ಜೊತೆ ಶಾರುಖ್ ಪೋಸ್ ನೀಡಿದ್ದಾರೆ. ಶಾರುಖ್ ಖಾನ್ ಫ್ಯಾಮಿಲಿಯ ಅಪರೂಪದ ಫೋಟೋಗಳು ಸಖತ್ ವೈರಲ್ ಆಗಿದ್ದು ಫ್ಯಾನ್ಸ್ ನಮ್ಮ ಪಠಾಣ್ ಕುಟುಂಬ ಎಂದು ಕಾಮೆಂಟ್ ಮಾಡಿದ್ದಾರೆ
57
ಶಾರುಖ್ ಖಾನ್ ಸದ್ಯ ಅಟ್ಲಿ ಅಭಿನಯದ 'ಜವಾನ್' ಚಿತ್ರದ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚೆಗಷ್ಟೇ ನಗರದಲ್ಲಿ ಹಾಡಿನ ಚಿತ್ರೀಕರಣ ನಡೆಸಿದ್ದರು. ಈ ಚಿತ್ರವು ಜೂನ್‌ನಲ್ಲಿ ತೆರೆಗೆ ಬರಲಿದೆ ಮತ್ತು ನಯನತಾರಾ, ವಿಜಯ್ ಸೇತುಪತಿ, ಸುನಿಲ್ ಗ್ರೋವರ್ ಮತ್ತು ಸನ್ಯಾ ಮಲ್ಹೋತ್ರಾ ನಟಿಸಿದ್ದಾರೆ.
67
ರಾಜ್‌ಕುಮಾರ್ ಹಿರಾನಿಯವರ 'ಡುಂಕಿ' ಕೂಡ ಸಾಲಿನಲ್ಲಿದೆ. ಡಿಸೆಂಬರ್‌ನಲ್ಲಿ ಬಿಡುಗಡೆಯಾಗುವ ಈ ಸಿನಿಮಾದಲ್ಲಿ SRK ಜೊತೆಗೆ ತಾಪ್ಸಿ ಪನ್ನು ಕಾಣಿಸಿಕೊಂಡಿದ್ದಾರೆ.
77
Su
ಇದರ ಜೊತೆ ಸುಹಾನಾ ಖಾನ್ ಒಟಿಟಿ ಚಲನಚಿತ್ರ 'ದಿ ಆರ್ಚೀಸ್' ನೊಂದಿಗೆ ತಮ್ಮ ವೃತ್ತಿ ಜೀವನದ ಮೊದಲ ನಟನೆಗೆ ಸಜ್ಜಾಗುತ್ತಿದ್ದಾರೆ. ಆರ್ಯನ್ ತನ್ನ ಮೊದಲ ವೆಬ್ ಸರಣಿಯ ಸ್ಕ್ರಿಪ್ಟ್ ಅನ್ನು ಮುಗಿಸಿದ್ದಾರೆ. ಶೀಘ್ರದಲ್ಲೇ ಅದರ ಚಿತ್ರೀಕರಣವನ್ನು ಪ್ರಾರಂಭಿಸಲು ಯೋಜಿಸಿದ್ದಾರೆ.