Life coach for Aryan Khan: ಶಾರೂಖ್‌ ಮಗನಿಗೆ ಜೀವನ ಪಾಠ ಹೇಳಲು ಲೈಫ್‌ ಕೋಚ್ ನೇಮಕ

First Published | Nov 25, 2021, 5:01 PM IST

Life coach for Aryan Khan: ಶಾರೂಖ್ ಮಗನಿಗೆ ಜೀವನ ಪಾಠ ಮಾಡಲು ವ್ಯಕ್ತಿಯೊಬ್ಬರನ್ನು ನೇಮಿಸಿದ್ದಾರೆ ಬಾಲಿವುಡ್ ಸ್ಟಾರ್ ಕಪಲ್. ಅವರು ಆರ್ಯನ್ ಖಾನ್‌ನನ್ನು ನೋಡಿಕೊಳ್ಳಲಿದ್ದಾರೆ.

ಶಾರುಖ್ ಖಾನ್(Shah Rukh Khan) ಅವರ ಪುತ್ರ ಆರ್ಯನ್ ಖಾನ್(Aryan Khan) ಶೀಘ್ರದಲ್ಲೇ ಬಾಲಿವುಡ್‌ನ(Bollywood) ಖ್ಯಾತ ಲೈಫ್ ಕೋಚ್ ಅರ್ಫೀನ್ ಖಾನ್ ಅವರಿಂದ ಮಾರ್ಗದರ್ಶನ ಪಡೆಯಲಿದ್ದಾರೆ. ವರದಿಗಳ ಪ್ರಕಾರ ಶಾರೂಖ್ ಮತ್ತು ಗೌರಿ ಜೈಲಿನಲ್ಲಿ ತಮ್ಮ ಪುತ್ರ ಅನುಭವಿಸಿದ ಮಾನಸಿಕ  ಕಿರಿಕಿರಿ ಮೆಟ್ಟಿನಿಂತು ಮೂವ್ ಆನ್ ಆಗಲು ಸಹಾಯ ಮಾಡಲು ಅರ್ಫೀನ್ ಅವರನ್ನು ನಿಯೋಜಿಸಲಾಗಿದೆ.

ದಂಪತಿ ಅರ್ಫೀನ್ ಖಾನ್ ಅವರನ್ನು ಭೇಟಿಯಾಗಿ ಈ ಬಗ್ಗೆ ಮಾತನಾಡಿದ್ದಾರೆ. ಆರ್ಯನ್ ಬಿ-ಟೌನ್‌ನಿಂದ ಅರ್ಫೀನ್‌ನ ಮೊದಲ ಕ್ಲೈಂಟ್ ಅಲ್ಲ. ಅವರು ನಟ ಹೃತಿಕ್ ರೋಷನ್ ಅವರ ಲೈಫ್ ಕೋಚ್ ಆಗಿ ಕೆಲಸ ಮಾಡಿದ್ದಾರೆ.

Tap to resize

ವರದಿಯ ಪ್ರಕಾರ ಹೃತಿಕ್ ಸುಸೇನ್‌ನೊಂದಿಗೆ ವಿಚ್ಛೇದನದ ಸಮಯದಲ್ಲಿ ನಟನಿಗೆ ತನ್ನ ಜೀವನ ಮತ್ತು ವೃತ್ತಿಜೀವನದ ಮೇಲೆ ಕೇಂದ್ರೀಕರಿಸಲು ಸಹಾಯ ಮಾಡಲು ಅರ್ಫೀನ್ ಅವರನ್ನು ನೇಮಿಸಿದ್ದರು. ಆರ್ಯನ್‌ಗೆ ಆರ್ಥರ್ ರೋಡ್ ಜೈಲಿನಲ್ಲಿ ಸುಮಾರು ನಾಲ್ಕು ವಾರಗಳನ್ನು ಕಳೆದಿದ್ದಾರೆ. ಪ್ರಸ್ತುತ ಜಾಮೀನಿನ ಮೇಲೆ ಅವರು ಹೊರಗಿದ್ದಾರೆ.

ಡ್ರಗ್ಸ್ ಪ್ರಕರಣದ ಬಗ್ಗೆ ಅಥವಾ ಆರ್ಯನ್ ಖಾನ್ ಬಂಧನದ ಬಗ್ಗೆ ಶಾರುಖ್ ಖಾನ್ ಕುಟುಂಬದ ಯಾರೂ ಇಲ್ಲಿಯವರೆಗೆ ಪ್ರತಿಕ್ರಿಯಿಸಿಲ್ಲ. ಆದರೆ ಈಗ ಆರ್ಯನ್ ಯಾರೊಂದಿಗೂ ಮಾತನಾಡುತ್ತಿಲ್ಲ. ಸ್ನೇಹಿತರನ್ನು ಭೇಟಿ ಮಾಡುತ್ತಿಲ್ಲ ಎನ್ನಲಾಗಿದೆ.

ಜೈಲಿನಿಂದ ಬಂದ ನಂತರ ಆರ್ಯನ್ ಸೈಲೆಂಟ್ ಆಗಿದ್ದಾರೆ. ಆರ್ಯನ್ ತನ್ನ ಕೋಣೆಯಿಂದಲೂ ಹೊರಬರುತ್ತಿಲ್ಲ ಎನ್ನಲಾಗಿದೆ. ಆರ್ಯನ್ ನಾಚಿಕೆ ಸ್ವಭಾವದವರನು. ಈ ಜೈಲು ಅನುಭವವು ಆರ್ಯನ್‌ನನ್ನು ಬೆಚ್ಚಿಬೀಳಿಸಿದಂತೆ ಮಾಡಿದೆ. ಅಕ್ಟೋಬರ್ 3 ರಂದು ಮುಂಬೈ ಕ್ರೂಸ್ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಆರ್ಯನ್ ಖಾನ್‌ನನ್ನು ಬಂಧಿಸಲಾಗಿತ್ತು.

ಅರ್ಬಾಜ್ ಮರ್ಚೆಂಟ್ ಮತ್ತು ಮುನ್ಮುನ್ ಧಮೇಚಾ ಅವರನ್ನು ಬಂಧಿಸಲಾಯಿತು. ಅಕ್ಟೋಬರ್ 28 ರಂದು ಬಾಂಬೆ ಹೈಕೋರ್ಟ್ ಇವರಿಗೆ ಜಾಮೀನು ನೀಡಿತು.

Latest Videos

click me!